ವಿದ್ಯಾರ್ಥಿನಿಯೊಂದಿಗೆ ಶಿಕ್ಷಕನ ಲವ್ವಿ-ಡವ್ವಿ; NCC ಪಾಠ ಹೇಳಿಕೊಟ್ಟ ಗುರುವಿನ ಜೊತೆಯೇ ಜೂಟ್

Public TV
1 Min Read

– ಮದುವೆ ಆಗಿ ಇಬ್ರು ಮಕ್ಕಳಿದ್ರೂ ವಿದ್ಯಾರ್ಥಿನಿ ಜೊತೆಯಲ್ಲಿ ಶಿಕ್ಷಕನ ಚಕ್ಕಂದ

ಚಿಕ್ಕಬಳ್ಳಾಪುರ: ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ. ಗುರು ಸಾಕ್ಷಾತ್ ಪರಬ್ರಹ್ಮ ಅಂತಾರೆ. ಗುರು ಅಂದ್ರೆ ದೇವರ ಸಮಾನ. ಆದ್ರೆ ಅಂತಹ ಗುರುವೇ ತಾನೇ ಪಾಠ ಹೇಳಿಕೊಟ್ಟ ವಿದ್ಯಾರ್ಥಿನಿ ಜೊತೆ ಓಡಿ ಹೋಗಿ ಪೊಲೀಸರ ಅತಿಥಿಯಾಗಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ (Doddaballapura) ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ಕನ್ನಡ ಮೇಷ್ಟ್ರಾಗಿರುವ ಪ್ರವೀಣ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಹೌದು, ಎನ್‌ಸಿಸಿ ತರಬೇತಿಯ ಜೊತೆ ಕನ್ನಡ ಪಾಠ ಮಾಡ್ತಾ ಶಿಸ್ತಿನ ಪಾಠ ಹೇಳಿಕೊಡಬೇಕಿದ್ದ ಶಿಕ್ಷಕ, ತನ್ನ ಶಾಲೆಯ ವಿದ್ಯಾರ್ಥಿನಿಯ ಜೊತೆಯಲ್ಲೇ ಹಲವು ವರ್ಷಗಳಿಂದ ಪ್ರೀತಿ ಪ್ರೇಮ ಅಂತ ಕದ್ದು ಮುಚ್ಚಿ ಪ್ರಣಯದಾಟ ಆಡಿಕೊಂಡು ಬಂದಿದ್ದ. ಇದನ್ನೂ ಓದಿ: ಗದಗ | ಬಿರಿಯಾನಿ ತಿನ್ನಲು ಹೋಟೆಲ್‌ಗೆ ಬಂದಾತನ ಭೀಕರ ಕೊಲೆ

ಇನ್ನೂ ಇದನ್ನ ಅರಿಯದ ವಿದ್ಯಾರ್ಥಿನಿಯ ಮನೆಯವರು ವಿದ್ಯಾರ್ಥಿನಿಗೆ ವರನನ್ನ ನೋಡಿ ಆಗಸ್ಟ್ 11ಕ್ಕೆ ಮದುವೆ ನಿಶ್ಚಯ ಮಾಡಿದ್ದರು. ಹೀಗಾಗಿ ಮದುವೆ ಢೇಟ್ ಫಿಕ್ಸ್ ಆಗ್ತಿದ್ದಂತೆ ಶಿಕ್ಷಕ ಪ್ರವೀಣ್, ವಿದ್ಯಾರ್ಥಿನಿಯನ್ನ ಕರೆದುಕೊಂಡು ಎಸ್ಕೇಪ್ ಆಗಿದ್ದ. ಬಳಿಕ ದೆಹಲಿಗೆ ಹೋಗಿ ಕಾಲ ಕಳೆದು ಬೆಂಗಳೂರಿಗೆ ವಾಪಾಸ್ ಬಂದಿದ್ದರು. ಇದನ್ನೂ ಓದಿ: DRDO ವಿಜ್ಞಾನಿಗಳ ಮಾಹಿತಿ ಪಾಕ್‌ಗೆ ಹಂಚಿಕೆ – ಅತಿಥಿ ಗೃಹದ ಸಿಬ್ಬಂದಿ ಅರೆಸ್ಟ್‌

ಇತ್ತ ವಿದ್ಯಾರ್ಥಿನಿ ಮನೆಯವರು ಮದುವೆ ಇಷ್ಟ ಅಲ್ಲ ಎಂದು ಯಾರೋ ಯುವಕನ ಜೊತೆಯಲ್ಲಿ ಓಡಿ ಹೋಗಿರಬೇಕು ಅಂದುಕೊಂಡಿದ್ದರು. ಆದರೆ ಪೊಲೀಸರು ಇಬ್ಬರನ್ನೂ ಹುಡುಕಿ ಕರೆತಂದಾಗಲೇ ತಮ್ಮ ಮಗಳು ಶಿಕ್ಷಕನ ಜೊತೆಯೇ ಓಡಿಹೋಗಿದ್ದು ಎಂದು ತಿಳಿದು ವಿದ್ಯಾರ್ಥಿನಿಯ ಪೋಷಕರು ಶಾಕ್ ಆಗಿದ್ದಾರೆ.

ಶಿಕ್ಷಕ ಪ್ರವೀಣ್‌ಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಆದ್ರೂ ವಿದ್ಯಾರ್ಥಿನಿ ಜೊತೆ ಪ್ರಣಯದಾಟ ಆಡಿ ಅಕೆಯ ಬಾಳಲ್ಲಿ ಚೆಲ್ಲಾಟವಾಡಿದ್ದಾನೆ. ಇತ್ತ ಪ್ರವೀಣ್ ಪತ್ನಿ ಸಹ ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಗೆ ಪತಿಯ ವಿರುದ್ಧವೇ ದೂರು ನೀಡಿದ್ದಾರೆ. ಇದೀಗ ಪೊಲೀಸರು ಶಿಕ್ಷಕ ಪ್ರವೀಣ್‌ನನ್ನು ಬಂಧಿಸಿದ್ದಾರೆ.

Share This Article