– ಬೆಂಗ್ಳೂರಲ್ಲಿ ಮನೆ ಕಟ್ಟುವ ಆಸೆಯೇ?
ಬೆಂಗಳೂರು: ನಗರದಲ್ಲಿ ಮನೆ ಕಟ್ಟಿಕೊಳ್ಳಬೇಕೆಂದು ಆಸೆ ಹೊಂದಿರುವವರಿಗೆ ಗೃಹಮಂಡಳಿ (Karnataka Housing Board) ಬಂಪರ್ ಗಿಫ್ಟ್ ನೀಡಿದ್ದು, ಈ ಮೂಲಕ ಅಗ್ಗದ ದರದಲ್ಲಿ ಡ್ಯುಪ್ಲೆಕ್ಸ್ ಮನೆ (Duplex House) ನೀಡಲು ಸಜ್ಜಾಗಿದೆ.
ಹೌದು, ಬೆಂಗಳೂರಿನಲ್ಲಿ ಸೈಟ್ ತೆಗೆದುಕೊಂಡು ಬಳಿಕ ಮನೆ ಕಟ್ಟುವುದು ಕೆಲವರ ಕನಸು. ಆದರೆ ಅದನ್ನು ಪೂರ್ಣಗೊಳಿಸಲು ಜೀವನ ಪರ್ಯಂತ ದುಡಿಯಬೇಕಷ್ಟೇ. ಆದರೆ ಇದೀಗ ಬೆಂಗಳೂರಿನಲ್ಲಿ ಸ್ವಂತ ಮನೆಯಲ್ಲಿರಬೇಕು ಎಂದು ಕನಸು ಕಟ್ಟಿಕೊಂಡಿರುವವರಿಗೆ ಗೃಹಮಂಡಳಿ ಲಾಟರಿ ನೀಡಿದೆ. ಈ ಮೂಲಕ ಕಡಿಮೆ ದರದಲ್ಲಿ ಡ್ಯುಪ್ಲೆಕ್ಸ್ ಮನೆ ನೀಡಲು ಸಿದ್ಧವಾಗಿದೆ.ಇದನ್ನೂ ಓದಿ: ಕೊನೆಗೂ ಭಾರತಕ್ಕೆ ಬಂತು ಟೆಸ್ಲಾ| ಮುಂದಿನ ವಾರ ಶೋರೂಂ ಓಪನ್ – EV ಕಾರಿನ ಬೆಲೆ ಎಷ್ಟು?
ಇನ್ಮುಂದೆ ಗೃಹಮಂಡಳಿ ಜನರಿಗೆ ಡ್ಯುಪ್ಲೆಕ್ಸ್ ಮನೆ ಕೊಡಲು ಯೋಜನೆ ಹಾಕಿಕೊಂಡಿದೆ. ಸದ್ಯ ಸ್ಕೆಚ್ ರೂಪಿಸಲಾಗಿದ್ದು, ಟೆಂಡರ್ ಕರೆದಿದ್ದಾರೆ. ಪ್ಲ್ಯಾಟ್‌ಗಳಿಗೆ ಬರುವ ಜನರು ಕಡಿಮೆಯಾಗಿರುವುದರಿಂದ ಈ ಬಗ್ಗೆ ಚಿಂತಿಸಿದೆ. ಇದೀಗ ಸೂರ್ಯನಗರದಲ್ಲಿ 100 ಡ್ಯುಪ್ಲೆಕ್ಸ್ ಮನೆಗಳನ್ನು ಕಟ್ಟಿ, ಅದಾದ ಬಳಿಕ ಜನರ ಸ್ಪಂದನೆ ನೋಡಿ ಹೆಚ್ಚು ಮನೆಗಳನ್ನು ಕಟ್ಟೋದಕ್ಕೆ ಪ್ಲ್ಯಾನ್ ರೂಪಿಸಲಾಗಿದೆ. ಸದ್ಯ 99 ಲಕ್ಷ ರೂ.ಗೆ ಡ್ಯುಪ್ಲೆಕ್ಸ್ ಮನೆ ಹಾಗೂ 4 ಬಿಹೆಚ್‌ಕೆ ಮನೆಗೆ 1.80 ಕೋಟಿ ರೂ. ನಿಗದಿ ಮಾಡಲಾಗಿದೆ.
ಇನ್ನು ಗೃಹಮಂಡಳಿಯ ನಿವೇಶನಕ್ಕೂ ಡಿಮ್ಯಾಂಡ್ ಹೆಚ್ಚಾಗಿದೆ. ಮೂರು ಸಾವಿರ ಸೈಟ್‌ಗಳಿಗೆ 17 ಸಾವಿರ ಅರ್ಜಿ ಬಂದಿದ್ದು, ಲಾಟರಿ ಮೂಲಕ ಸೆಲೆಕ್ಷನ್‌ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಗೃಹಮಂಡಳಿಯ ಮನೆಗಳು ಜನರ ಅಭಿರುಚಿಗೆ ತಕ್ಕಂತೆ ಬದಲಾಗುತ್ತಿದೆ ಎಂದು ಮಂಡಳಿ ಸ್ಪಷ್ಟನೆ ಕೊಡುತ್ತಿದ್ದು, ಹೀಗಾಗಿ ಡ್ಯುಪ್ಲೆಕ್ಸ್ ಮನೆಗಳಿಗೆ ಜನ ಹೇಗೆ ಸ್ಪಂದಿಸುತ್ತಾರೆ ಎಂದು ಕಾದು ನೋಡಬೇಕು ಎಂದಿದ್ದಾರೆ.ಇದನ್ನೂ ಓದಿ: ರೀಲ್ಸ್ ಹುಚ್ಚಿನಿಂದ ಎಡವಟ್ಟು, ಸ್ಟಂಟ್ ಮಾಡ್ತಿದ್ದಾಗಲೇ 300 ಅಡಿ ಆಳದ ಕಂದಕಕ್ಕೆ ಬಿದ್ದ ಕಾರು – ಎದೆ ಝಲ್ ಎನಿಸುವ ದೃಶ್ಯ ಸೆರೆ!