ಚಾಲಕನ ನಿರ್ಲಕ್ಷ್ಯದಿಂದ ಕಬ್ಬು ತುಂಬಿದ್ದ ಲಾರಿ ಪಲ್ಟಿ

Public TV
1 Min Read

ಯಾದಗಿರಿ: ಚಾಲಕನ ನಿರ್ಲಕ್ಷ್ಯದಿಂದ ಕಬ್ಬು ತುಂಬಿದ್ದ ಲಾರಿಯೊಂದು ಪಲ್ಟಿ ಹೊಡೆದ ಘಟನೆ ಯಾದಗಿರಿಯ ಜಿಲ್ಲೆಯ ಶಹಾಪೂರ ಪಟ್ಟಣದಲ್ಲಿ ಇಂದು ನಡೆದಿದೆ.

ಶಹಾಪೂರ ಪಟ್ಟಣದ ಕಾರ್ಪೋರೇಶನ್ ಬ್ಯಾಂಕ್ ಎದುರು ಬೆಳಗ್ಗಿನ ಜಾವ ಈ ಘಟನೆ ನಡೆದಿದೆ. ಘಟನೆಯಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ, ಆದರೆ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಸದ್ಯ ಚಾಲಕ ಶಹಾಪೂರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಕಲಬುರಗಿದಿಂದ ಕಬ್ಬು ತುಂಬಿಕೊಂಡು ವಡಗೇರಾ ಫ್ಯಾಕ್ಟರಿಗೆ ಈ ಲಾರಿ ಹೊರಟಿತ್ತು. ಆದರೆ ರಸ್ತೆಯ ಮಧ್ಯದ ಡಿವೈಡ್‍ರಿಗೆ ಲಾರಿ ರಭಸದಿಂದ ಬಂದು ಡಿಕ್ಕಿ ಹೊಡೆದ ಪರಿಣಾಮ ಪಲ್ಟಿಯಾಗಿದ್ದು, ಸಂಪೂರ್ಣವಾಗಿ ಜಖಂಗೊಂಡಿದೆ. ಚಾಲಕನ ನಿರ್ಲಕ್ಷ್ಯವೇ ಈ ಘಟನೆ ಕಾರಣ ಎನ್ನಲಾಗಿದೆ.

ಶಹಾಪೂರ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *