ಕಣ್ಣೆದುರೇ ಗರ್ಭಿಣಿ ಪತ್ನಿ ಸಾವು – ರಸ್ತೆಯಲ್ಲೇ ಕಣ್ಣೀರಿಟ್ಟ ಪತಿ

Public TV
1 Min Read

ನೆಲಮಂಗಲ: ಪತಿ ಎದುರಲ್ಲೇ 7 ತಿಂಗಳ ಗರ್ಭಿಣಿ ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಎಡೆಹಳ್ಳಿ ಗ್ರಾಮದ ಬಳಿ ನಡೆದಿದೆ.

ಸಿಂಚನ ಮಗುವಿನೊಂದಿಗೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ನೆಲಮಂಗಲ ತಾಲೂಕಿನ ತೋಟನಹಳ್ಳಿ ಗ್ರಾಮದ ಮಂಜುನಾಥ್, ಸಿಂಚನ ದಂಪತಿ ಇಂದು ದೇವಸ್ಥಾನದಲ್ಲಿ ಪೂಜೆ ಮುಗಿಸಿಕೊಂಡು ಮನೆಗೆ ಸ್ಕೂಟರ್‌ನಲ್ಲಿ ವಾಪಸ್ ತೆರಳುವಾಗ ಹಿಂಬದಿಯಿಂದ ಲಾರಿ ಗುದ್ದಿದೆ. ಇದನ್ನೂ ಓದಿ: MUDA Scam | ಆರೋಪ ನಿರಾಧಾರ, ನೋಟಿಸ್‌ ನೀಡಿರುವುದು ಕ್ರಮಬದ್ದವಲ್ಲ: ರಾಜ್ಯಪಾಲರಿಗೆ ಸಿಎಂ ಉತ್ತರ

ತುಮಕೂರು-ಬೆಂಗಳೂರು ರಸ್ತೆಯಲ್ಲಿ ಮನೆ ಕಡೆ ತೆರಳುವಾಗ ಹಿಂದುಗಡೆಯಿಂದ ಬಂದ ಜಲ್ಲಿ ತುಂಬಿದ ಲಾರಿ ಗುದ್ದಿದ ರಭಸಕ್ಕೆ ಸಿಂಚನ ಸ್ಕೂಟಿಯಿಂದ ಕೆಳಗಡೆ ಬಿದ್ದಿದ್ದಾರೆ. ಸಿಂಚನ ರಸ್ತೆಗೆ ಬಿದ್ದಿದ್ದು ಅವರ  ಕಾರಿನ ಮೇಲೆ ಲಾರಿ ಚಕ್ರ ಹರಿದಿದೆ. ಪರಿಣಾಮ ಸಿಂಚನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ರಾಜ್ಯಾದ್ಯಂತ ಮುಂದಿನ 5 ದಿನ ಮಳೆಯ ಮುನ್ಸೂಚನೆ

ಕಣ್ಣೆದುರೇ ಪತ್ನಿಯ ಸಾವು ಕಂಡು ಪತಿ ಮಂಜುನಾಥ್ ರಸ್ತೆಯಲ್ಲೇ ಕಣ್ಣೀರಿಟ್ಟಿದ್ದಾರೆ. ಲಾರಿ ಚಾಲಕ ಅತಿ ವೇಗ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ.

Share This Article