Chitradurga Bus Accident | ಲಾರಿ ಚಾಲಕನ ರ‍್ಯಾಷ್ ಡ್ರೈವ್, ಅಜಾಗರೂಕತೆಯಿಂದ ಅಪಘಾತ: ರಾಮಲಿಂಗಾ ರೆಡ್ಡಿ

1 Min Read

ರಾಮನಗರ: ಲಾರಿ ಚಾಲಕನ ರ‍್ಯಾಷ್ ಡ್ರೈವ್ ಹಾಗೂ ಅಜಾಗರೂಕತೆಯಿಂದ ಚಿತ್ರದುರ್ಗದಲ್ಲಿ ಬಸ್ ಅಪಘಾತ (Chitradurga Bus Accident) ಆಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಹೇಳಿದ್ದಾರೆ.

ಚಿತ್ರದುರ್ಗ ಬಸ್ ದುರಂತದ ಕುರಿತು ಮಾಗಡಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೋಕರ್ಣಕ್ಕೆ ಹೋಗುತ್ತಿದ್ದ ಸೀಬರ್ಡ್ ಬಸ್‌ಗೆ ಲಾರಿ ಡಿಕ್ಕಿಯಾಗಿ ಅವಘಡ ಸಂಭವಿಸಿದೆ. ಡಿವೈಡರ್ ದಾಟಿ ಬಂದು ಬಸ್‌ನ ಡೀಸೆಲ್ ಟ್ಯಾಂಕ್‌ಗೆ ಲಾರಿ ಗುದ್ದಿದೆ. ಈಗಾಗಲೇ ಸಾರಿಗೆ ಇಲಾಖೆ ಕಮಿಷನರ್ ಸ್ಥಳಕ್ಕೆ ಹೋಗಿದ್ದಾರೆ. ಯಾವ ಕಾರಣಕ್ಕೆ ಬೆಂಕಿ ಹೊತ್ತಿಕೊಂಡಿದೆ ಎಂಬ ಬಗ್ಗೆ ತನಿಖೆ ನಡೆಸಬೇಕಿದೆ ಎಂದರು. ಇದನ್ನೂ ಓದಿ: Chitradurga Bus Accident | ಗೋಕರ್ಣಕ್ಕೆ ಹೊರಟಿದ್ದ ಮೂವರು ಸ್ನೇಹಿತೆಯರು ಗ್ರೇಟ್ ಎಸ್ಕೇಪ್

ಮೊನ್ನೆಯೂ ಒಂದು ಬಸ್ ದುರಂತ ಆದಾಗಾ ಈ ಬಗ್ಗೆ ಸಾರಿಗೆ ಇಲಾಖೆ ಸಾಕಷ್ಟು ಕ್ರಮವಹಿಸಿದೆ. ಬಸ್‌ನಲ್ಲಿ ಯಾವುದೇ ರೀತಿಯ ಸ್ಫೋಟಕ ವಸ್ತುಗಳನ್ನು ಸಾಗಿಸದಂತೆ ಎಚ್ಚರ ವಹಿಸಿದ್ದೇವೆ. 2013ರಲ್ಲೂ ನಾನು ಸಾರಿಗೆ ಸಚಿವನಾಗಿದ್ದಾಗ ಒಂದು ಬಸ್ ಅಗ್ನಿ ದುರಂತ ಆಗಿತ್ತು. ಆಗಲೂ ಎಲ್ಲಾ ಬಸ್‌ಗಳಿಗೆ ಕಡ್ಡಾಯ ಎಮರ್ಜೆನ್ಸಿ ಡೋರ್ ಮಾಡಿದ್ದೇವೆ. ಈಗಲೂ ಎಲ್ಲಾ ಬಸ್‌ಗಳಲ್ಲೂ ಎಮರ್ಜೆನ್ಸಿ ಡೋರ್ ಕಡ್ಡಾಯ ಮಾಡಲಾಗಿದೆ. ಈ ಅವಘಡ ಚಾಲಕರ ಅಜಾಗರೂಕತೆಯಿಂದ ಆಗಿದೆ. ಈಗಾಗಲೇ ಜಿಲ್ಲಾಡಳಿತಕ್ಕೆ ಸಿಎಂ ಸೂಚನೆ ನೀಡಿದ್ದಾರೆ. ಎಲ್ಲಾ ರೀತಿಯ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: Chitradurga Bus Accident | ಮಗಳೇ ಎಲ್ಲಿ ಹೋದ್ಯಮ್ಮ? – ಮಕ್ಕಳನ್ನು ಕಾಣದೇ ಪೋಷಕರ ಆಕ್ರಂದನ

Share This Article