ಬೆಂಗಳೂರಿನಲ್ಲಿ ಬೈಕ್‌ಗೆ ಲಾರಿ ಡಿಕ್ಕಿ- ಮಹಿಳೆ ಸಾವು

Public TV
1 Min Read

ಬೆಂಗಳೂರು: ಲಾರಿಯೊಂದು (Lorry) ಬೈಕ್‌ಗೆ (Bike) ಡಿಕ್ಕಿಯಾಗಿ ಮಹಿಳೆಯೊಬ್ಬಳು ಸಾವನ್ನಪ್ಪಿದ ಘಟನೆ ಬೆಂಗಳೂರಿನ (Bengaluru) ನಾಯಂಡಹಳ್ಳಿ ಸಿಗ್ನಲ್‌ನ ಮೆಟ್ರೋ ಸ್ಟೇಷನ್ ಬಳಿ ನಡೆದಿದೆ.

ವಿಜಯನಗರ ಬಳಿಯ ಅತ್ತಿಗುಪ್ಪೆ ಮೂಲದ ಅನುಷಾ ಸಾವನ್ನಪ್ಪಿದ ಮಹಿಳೆ. ಬೆಂಗಳೂರಿನ ನಾಯಂಡಹಳ್ಳಿ ಸಿಗ್ನಲ್‌ ಬಳಿ ಅತಿ ವೇಗವಾಗಿ ಬರುತ್ತಿದ್ದ ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ನಲ್ಲಿದ್ದ ಅನುಷಾ ಸಾವನ್ನಪ್ಪಿದ್ದಾರೆ. ಜೊತೆಗೆ ಬೈಕ್‌ನಲ್ಲಿದ್ದ ತಾಯಿ ವನಜಾಕ್ಷಿ ಸ್ಥಿತಿ ಗಂಭೀರವಾಗಿದ್ದು, ಕಾಲು ಕಟ್‌ ಆಗಿದೆ. ಇನ್ನೂ 7 ವರ್ಷದ ಮಗ ಆರ್ಯನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ವೇಳೆ ಆ ಜಾಗದಿಂದ 50 ಮೀ. ಅಂತರದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ನಿಂತಿತ್ತು. ಅಪಘಾತ ಮಾಡಿ ನಿಲ್ಲಿಸದೇ ವೇಗವಾಗಿ ಪರಾರಿಯಾಗುತ್ತಿದ್ದ ಲಾರಿಯನ್ನು ನೋಡಿ ಕೆಎಸ್‌ಆರ್‌ಟಿಸಿ ಚಾಲಕ ಲಾರಿಯನ್ನು ತಡೆಯುವುದಕ್ಕೆ ಮುಂದಾಗಿ ಬಸ್‌ ಅನ್ನು ಅಡ್ಡಲಾಗಿ ನಿಲ್ಲಿಸಿದ್ದಾನೆ. ಇದನ್ನೂ ಓದಿ: ರಾಹುಲ್ ಗಾಂಧಿ ಸಂಸದ ಸ್ಥಾನ ಅನರ್ಹಕ್ಕೆ ಅಮೆರಿಕ, ಜರ್ಮನಿ ಸ್ಪಂದನೆ ಅನಗತ್ಯ: ಕೇಂದ್ರ ಸಚಿವ ಜೈಶಂಕರ್

ಬಸ್‌ ಅಡ್ಡ ಬರುತ್ತಿದ್ದಂತೆ ಚಾಲಕ ಲಾರಿಯಿಂದಲೇ ಜಿಗಿದು ಓಡಿ ಹೋಗಿದ್ದಾನೆ. ಪರಿಣಾಮ ಕೆಎಸ್‌ಆರ್‌ಟಿಸಿ ಬಸ್‌ಗೆ (KSRTC Bus) ಲಾರಿ ಡಿಕ್ಕಿಯಾಗಿ ನಿಂತಿದೆ. ಭೀಕರ ಅಪಘಾತದ ಪರಿಣಾಮ ನಾಯಂಡಹಳ್ಳಿ ಸಿಗ್ನಲ್‌ನ 4 ಕಡೆಗೆ ತಟ್ಟಿದ್ದು, ಸುಮಾರು 2 ಗಂಟೆಗಳ ನಾಲ್ಕೈದು ಕಿಮೀ ಜಾಮ್ ಆಗಿ ವಾಹನ ಸವಾರರು ಪರದಾಡಿದರು. ಇದನ್ನೂ ಓದಿ: ದೇವೇಗೌಡರ ಆರೋಗ್ಯ, ಆಯಸ್ಸು ನನಗೆ ಮುಖ್ಯ : ಹೆಚ್‍ಡಿಕೆ

Share This Article