ಕಾಂಗ್ರೆಸ್‌ನಿಂದ ಅಘೋಷಿತ ಕಾನೂನು ಜಾರಿ ಆದಂತಿದೆ: ಛಲವಾದಿ ನಾರಾಯಣಸ್ವಾಮಿ

Public TV
1 Min Read

ಚಿತ್ರದುರ್ಗ: ಕಾಂಗ್ರೆಸ್‌ನಿಂದ (Congress) ಅಘೋಷಿತ ಕಾನೂನು ಜಾರಿ ಆದಂತಿದೆ. ಯಾರೆಷ್ಟು ಬೇಕಾದರೂ ಕದಿಯಬಹುದು, ಸಿಕ್ಕಿಬಿದ್ದಾಗ ವಾಪಸ್ ಕೊಟ್ಟರಾಯ್ತು. ದರೋಡೆ ಮಾಡಿದ್ದು ವಾಪಸ್ ಕೊಟ್ಟರೆ ಕ್ರಮ ಬೇಡವೇ ಎಂದು ಕಾಂಗ್ರೆಸ್ ವಿರುದ್ಧ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಕಿಡಿಕಾರಿದ್ದಾರೆ.

ಈ ಕುರಿತು ಚಿತ್ರದುರ್ಗದಲ್ಲಿ (Chitradurga) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ದಿನಕ್ಕೊಂದು ಹಗರಣ ಬಯಲಾಗುತ್ತಿವೆ. ಸಿಎಂ ಸಿದ್ದರಾಮಯ್ಯ ಮಾತ್ರ ರಾಜೀನಾಮೆ ನೀಡುತ್ತಿಲ್ಲ. ಜಗ್ಗೋದಿಲ್ಲ, ಬಗ್ಗೋದಿಲ್ಲ ಅಂದವರು ಸೈಟ್ ಯಾಕೆ ವಾಪಸ್ ಕೊಟ್ಟರು? ಪ್ರಿಯಾಂಕ್ ಖರ್ಗೆ 5 ಎಕರೆ ಜಾಗ ಯಾಕೆ ವಾಪಸ್ ಕೊಟ್ಟರು? ಹಾಗಿದ್ದರೆ ನಿಮ್ಮ ಮೇಲೇಕೆ ಕ್ರಮ ಬೇಡ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮನೆ ಮನೆಗಳಿಂದ ಕಸ ಸಂಗ್ರಹಕ್ಕೆ ಶುಲ್ಕ ವಸೂಲಿ – ರಾಜ್ಯ ಸರ್ಕಾರಕ್ಕೆ ಬಿಬಿಎಂಪಿಯಿಂದ ಪ್ರಸ್ತಾವನೆ

ಸಿಎಂ ಸಿದ್ಧರಾಮಯ್ಯ ಬಗ್ಗೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅನ್ಸಾರಿ ಹೇಳಿಕೆ ಸಿದ್ದರಾಮಯ್ಯ ಬಗ್ಗೆ ಸ್ಪಷ್ಟಪಡಿಸುತ್ತದೆ. ನಾನೇನು ಹೇಳಲ್ಲ, ರಾಜ್ಯದ ಜನರೇ ತೀರ್ಮಾನಿಸಲಿ. ಸಚಿವ ಜಮೀರ್ ವಿರುದ್ಧ ಕ್ರಮಕ್ಕೆ ರಾಜ್ಯಪಾಲರ ಆದೇಶ ಸರಿಯಿದೆ. ನ್ಯಾಯಾಂಗದ ಆದೇಶ ಬೀದೀಲಿ ಪ್ರಶ್ನಿಸೋದು ಸರಿಯಲ್ಲ. ಸುಳ್ಳು ನಮ್ಮ ಮನೆ ದೇವರಲ್ಲ, ಭ್ರಷ್ಟಾಚಾರ, ಸುಳ್ಳು, ಮೋಸ ಕಾಂಗ್ರೆಸ್ ಮನೆ ದೇವರು ಎಂದು ಹರಿಹಾಯ್ದರು. ಇದನ್ನೂ ಓದಿ: ಚೋಟಾ ಮುಂಬೈಯಲ್ಲಿ ಬೆಲೆ ನಿಯಂತ್ರಿಸಲು ಅಖಾಡಕ್ಕಿಳಿದ ಕೇಂದ್ರ; ಹುಬ್ಬಳ್ಳಿ- ಧಾರವಾಡದಲ್ಲಿ ಭಾರತ್ ಬ್ರ‍್ಯಾಂಡ್ ಆಹಾರ ಧಾನ್ಯ ಪೂರೈಕೆಗೆ ಚಾಲನೆ

Share This Article