ನಿಮ್ಮ ಬಜೆಟ್‌ನಲ್ಲಿ ಚಂದಕಾಣಿಸುವ ಟಿಪ್ಸ್

Public TV
3 Min Read

ಅಂದವಾಗಿ ಕಾಣಿಸಬೇಕು ಎಂಬ ಆಸೆ ಯಾರಿಗೆ ತಾನೇ ಇಲ್ಲ? ಜನ ಸಮೂಹದ ನಡುವೆ ಇತರರ ಗಮನ ಸೆಳೆಯಬೇಕು ಎಂಬ ಹಂಬಲ ಎಲ್ಲರಿಗೂ ಇರುತ್ತೆ. ಆದರೆ ಒಳ್ಳೆಯ ಬಟ್ಟೆ, ಆಕ್ಸಸರೀಸ್ ಕೊಳ್ಳುವ ಬಜೆಟ್ ಎಲ್ಲರಲ್ಲೂ ಇರುತ್ತೆ ಎನ್ನಲಾಗುವುದಿಲ್ಲ.

ನಿಮ್ಮ ಬಳಿ ಇರುವಂತಹ ಬಟ್ಟೆ ಹಾಗೂ ಆಕ್ಸಸರಿಗಳಲ್ಲೇ ಹೇಗೆ ಚೆನ್ನಾಗಿ ಕಾಣಿಸಬಹುದು ಎಂಬುದರ ಬಗ್ಗೆ ಕೆಲವು ಟಿಪ್ಸ್ ಇಲ್ಲಿದೆ. ಈ ಟಿಪ್ಸ್‌ಗಳು ಕೇವಲ ಹುಡುಗಿಯರಿಗೆ ಅಥವಾ ಹುಡುಗರಿಗೆ ಎನ್ನುವಂತಹ ಬೇಧವಿಲ್ಲ. ಹಲವು ಟಿಪ್ಸ್‌ಗಳು ಇಬ್ಬರಿಗೂ ಅನ್ವಯವಾಗುವಂತಿದೆ.

ನಿಮ್ಮ ಬಟ್ಟೆ ಫಿಟ್ ಆಗಿರಲಿ:
ನೀವು ಧರಿಸುವಂತಹ ಬಟ್ಟೆ ಯಾವುದೇ ಇರಲಿ. ಅದು ನಿಮಗೆ ಚೆನ್ನಾಗಿ ಕಾಣಿಸಬೇಕು ಎಂದರೆ ನಿಮ್ಮ ಸೈಜ್‌ಗೆ ಫಿಟ್ ಆಗಿರುವುದು ಮುಖ್ಯ. ನೀವು ಹೊಸ ಬಟ್ಟೆ ಕೊಂಡಿದ್ದೀರಿ ಎಂದಾದಲ್ಲಿ ಹೆಚ್ಚಿನ ಸಂದರ್ಭದಲ್ಲಿ ಅವು ನಿಮ್ಮ ಪರ್ಫೆಕ್ಟ್ ಸೈಜ್‌ನಲ್ಲಿ ಇರುವುದಿಲ್ಲ. ಹೀಗಿರುವಾಗ ಅದನ್ನು ನಿಮ್ಮ ಸೈಜ್‌ಗೆ ಸ್ಟಿಚ್ ಮಾಡಿಸಿಕೊಳ್ಳಿ. ನಿಮ್ಮ ಹತ್ತಿರದ ಟೈಲರ್‌ಗಳು ಖಂಡಿತಾ ಅದನ್ನು ಕಡಿಮೆ ಬೆಲೆಗೆ ಸ್ಟಿಚ್ ಮಾಡಿಸಿ ಕೊಡುತ್ತಾರೆ. ಇದನ್ನೂ ಓದಿ: ಮಹಿಳೆಯರಿಗೆ ಸೂಟ್ ಆಗುವಂತಹ 5 ಬೆಸ್ಟ್ ಆರ್ಟಿಫಿಶಿಯಲ್ ಫ್ಲವರ್ ಹೇರ್ ಸ್ಟೈಲ್‍ಗಳು

ಕೆಲವೊಮ್ಮೆ ನಿಮ್ಮ ಹಳೆಯ ಬಟ್ಟೆಗಳು ಲೂಸ್ ಅಥವಾ ಟೈಟ್ ಆಗಿರುವಾಗಲೂ ಟೈಲರ್ ಬಳಿ ಹೋಗಿ ಅದನ್ನು ಸರಿಪಡಿಸಿಕೊಳ್ಳುವುದು ಉತ್ತಮ. ಈ ರೀತಿ ನೀವು ನಿಮ್ಮ ಬಟ್ಟೆಗಳನ್ನು ನಿಮ್ಮ ಸೈಜ್‌ಗೆ ಫಿಟ್ ಮಾಡಿಸಿಕೊಳ್ಳುವುದರಿಂದ ನಿಮಗೆ ಸ್ಟ್ಯಾಂಡರ್ಡ್ ಲುಕ್ ಬರುವುದು ಖಂಡಿತಾ.

ಆಕ್ಸಸರಿ ಟಿಪ್ಸ್:
ನೀವು ಯಾವುದೇ ಒಂದು ಬಟ್ಟೆ ಧರಿಸಿದಾಗ ಅದರೊಂದಿಗೆ ತೊಡುವ ಚಿಕ್ಕ ಪುಟ್ಟ ಆಕ್ಸಸರಿ ಕೂಡಾ ಮುಖ್ಯವಾಗಿರುತ್ತೆ. ಅವುಗಳಲ್ಲಿ ನಿಮ್ಮ ಬ್ಯಾಗ್, ಜುವೆಲ್ಲರಿ, ವಾಚ್, ಕೂಲಿಂಗ್‌ಗ್ಲಾಸ್‌ಗಳೂ ಸೇರಿಕೊಳ್ಳುತ್ತದೆ. ಇದನ್ನೂ ಓದಿ: ಮಿಸೆಸ್ ವರ್ಲ್ಡ್ 2022 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಹಳ್ಳಿ ಸುಂದರಿ ನವ್ದೀಪ್ ಕೌರ್

ಈ ಚಿಕ್ಕ ಪುಟ್ಟ ವಸ್ತುಗಳ ಮೇಲೆ ಜನರ ಗಮನ ಹರಿಯುತ್ತಲೇ ಇರುತ್ತದೆ. ಹೀಗಾಗಿ ಅವುಗಳನ್ನು ನೀಟ್ ಆಗಿ ಧರಿಸುವುದೂ ಮುಖ್ಯವಾಗುತ್ತದೆ. ಆದರೆ ಯಾವುದೇ ಕಾರಣಕ್ಕೂ ಹರಿದ ಅಥವಾ ಕಿತ್ತು ಹೋಗಿರುವ ಆಕ್ಸಸರಿಗಳನ್ನು ಎಂದಿಗೂ ಧರಿಸಬೇಡಿ. ನಿಮ್ಮ ಬಟ್ಟೆ ಚೆನ್ನಾಗಿದ್ದರೂ ಹಾಳಾಗಿರುವ ಆಕ್ಸಸರಿ ನಿಮ್ಮ ಇಡೀ ಲುಕ್ಕನ್ನು ಹಾಳು ಮಾಡುವ ಸಾಧ್ಯತೆ ಇರುತ್ತದೆ.

ಶೂಗಳು ನೀಟಾಗಿರಲಿ:
ಲೆದರ್, ರಬ್ಬರ್ ಅಥವಾ ಬಟ್ಟೆ. ಚಪ್ಪಲಿಗಳನ್ನು ಯಾವುದರಿಂದ ತಯಾರಿಸಿದ್ದಾರೆ, ಯಾವ ಬ್ರ್ಯಾಂಡ್ ಎಂಬುದು ಮುಖ್ಯವಲ್ಲ. ಬದಲಿಗೆ ಅವು ಎಷ್ಟು ನೀಟ್ ಆಗಿದೆ ಎಂಬುದೇ ಮುಖ್ಯ. ಇದನ್ನೂ ಓದಿ: ಮಗು ಪಡೆಯುವುದು ನಮ್ಮ ಜೀವನದ ಅತಿ ದೊಡ್ಡ ಕನಸು: ಪ್ರಿಯಾಂಕಾ ಚೋಪ್ರಾ

ಹೆಚ್ಚಿನವರು ತಮ್ಮ ಗಮನವನ್ನು ಇತರರು ಧರಿಸುವ ಪಾದರಕ್ಷೆಗಳ ಮೇಲೆ ಹರಿಸುತ್ತಾರೆ ಎನ್ನುವುದು ಫ್ಯಾಕ್ಟ್. ಹೀಗಾಗಿ ಅವುಗಳನ್ನು ಕ್ಲೀನ್ ಹಾಗೂ ನೀಟ್ ಆಗಿ ಧರಿಸಬೇಕಾಗುತ್ತದೆ. ಶೂ ಆಗಿದ್ದಲ್ಲಿ ಅದನ್ನು ಪಾಲಿಶ್ ಮಾಡಿ ಧರಿಸಿ. ಬಟ್ಟೆಯ ಚಪ್ಪಲಿಗಳಾಗಿದ್ದರೆ ಇಂತಿಷ್ಟು ದಿನಗಳಿಗೊಮ್ಮೆ ಸ್ವಚ್ಛಗೊಳಿಸಿ ಧರಿಸಿ. ಇದರೊಂದಿಗೆ ಅವುಗಳನ್ನು ಸರಿಯಾದ ರೀತಿಯಲ್ಲಿ ತೊಡಿ. ಚಪ್ಪಲಿಗಳ ಬೆಲ್ಟ್ ಅರ್ಧ ಹಾಕಿಕೊಳ್ಳುವುದು ಅಥವಾ ಶೂಗಳ ಲೇಸ್ ಬೇಕಾ ಬಿಟ್ಟಿ ಗಂಟು ಹಾಕಿಕೊಳ್ಳುವುದು ಎಂದಿಗೂ ಮಾಡಬೇಡಿ.

ಕೇಶ ವಿನ್ಯಾಸ:
ನೀವು ತೊಟ್ಟಿರುವ ಉಡುಗೆಗೆ ಸರಿಯಾಗಿ ಮ್ಯಾಚ್ ಆಗುವಂತಹ ಕೇಶವಿನ್ಯಾಸ ಮಾಡಿಕೊಳ್ಳುವುದು ಅಗತ್ಯ. ಇದರಲ್ಲಿ ಮುಖ್ಯವಾಗಿ ಹುಡುಗಿಯರು ಚೂಡಿದಾರ್ ಗಳಂತಹ ಎತ್ನಿಕ್ ಬಟ್ಟೆಗಳಿಗೆ ಪೋನಿ ಟೇಲ್ ಗಳಂತಹ ವೆಸ್ಟರ್ನ್ ಫ್ಯಾಶನ್ ಮಾಡಿಲು ಎಂದಿಗೂ ಹೋಗದಿರಿ. ಇದು ನಿಮ್ಮ ಲುಕ್ ಅನ್ನು ಸಂಪೂರ್ಣವಾಗಿ ಹಾಳುಗೆಡವುತ್ತದೆ. ಯಾವ ರೀತಿಯ ಬಟ್ಟೆಗಳಿಗೆ ಯಾವ ರೀತಿಯ ಕೇಶವಿನ್ಯಾಸ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಜ್ಞಾನ ಇರುವುದು ಪ್ರತಿಯೊಬ್ಬರಿಗೂ ಮುಖ್ಯ. ಇದನ್ನೂ ಓದಿ: ಪಡ್ಡೆಗಳ ನಿದ್ದೆಗೆ ಕಿಚ್ಚು ಹತ್ತಿಸುವ ಸನ್ನಿ ಲಿಯೋನ್- Video Viral

ಸಂದರ್ಭಕ್ಕೆ ತಕ್ಕಂತೆ ಬಟ್ಟೆ:
ನೀವು ಎಲ್ಲಿಗಾದರೂ ಹೋಗುತ್ತಿರುವಾಗ ಯಾವ ರೀತಿಯ ಬಟ್ಟೆಗಳನ್ನು ಧರಿಸಬೇಕು ಎಂಬುದರ ಬಗ್ಗೆ ಜ್ಞಾನ ನಿಮಗೆ ಇರಲಿ. ಸಾಂಪ್ರದಾಯಿಕ ಕಾರ್ಯಕ್ರಮಕ್ಕೆ ಸಾಂಪ್ರದಾಯಿಕ ಉಡಗೆ, ಮಾಡರ್ನ್ ಈವೆಂಟ್‌ಗಳಿಗೆ ಮಾಡರ್ನ್ ಉಡುಗೆ ಧರಿಸುವುದರ ಬಗ್ಗೆ ತಿಳಿದಿರಲಿ. ಇವುಗಳ ಬಗ್ಗೆ ಎಂದಗೂ ಗೊಂದಲ ಬೇಡ. ನೀವು ಇನ್ನೊಬ್ಬರ ಗಮನ ಸೆಳೆಯಬೇಕು ಎಂಬ ಕಾರಣಕ್ಕೆ ಮಿಸ್ ಮ್ಯಾಚ್ ಉಡುಗೆ ತೊಡುವುದು ಖಂಡಿತಾ ಸರಿಯಲ್ಲ. ಇದರಿಂದ ಇತರರು ನಿಮ್ಮ ಉಡುಗೆಯ ಬಗ್ಗೆ ಆಡಿಕೊಳ್ಳುವಂತಹ ಸಾಧ್ಯತೆ ಇರುತ್ತದೆ.

Share This Article
Leave a Comment

Leave a Reply

Your email address will not be published. Required fields are marked *