ಮತಗಟ್ಟೆಯೊಳಗೆ ಬಿಜೆಪಿಯವರು ಕರಪತ್ರ ತರುತ್ತಿದ್ದಾರೆ: ಆಪ್‌ ಆರೋಪ

Public TV
1 Min Read

ನವದೆಹಲಿ: ಇಂದು ಲೋಕಸಭಾ ಚುನಾವಣೆಗೆ (Loksabha Elections 2024) 6ನೇ ಹಂತದ ಮತದಾನ ನಡೆಯುತ್ತಿದ್ದು, ಈ ನಡುವೆ ಆಮ್‌ ಆದ್ಮಿ ಪಕ್ಷವು ಬಿಜೆಪಿ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದೆ.

ಬಿಜೆಪಿಯವರು (BJP) ಮತಗಟ್ಟೆಯೊಳಗೆ ಅಭ್ಯರ್ಥಿಗಳ ಕರಪತ್ರಗಳನ್ನು ಹೊತ್ತೊಯ್ಯುತ್ತಿದ್ದಾರೆ. ಮತಗಟ್ಟೆ ಏಜೆಂಟ್ ಗಳು ಬಿಜೆಪಿ ಕರಪತ್ರ ತರುತ್ತಿದ್ದಾರೆ. ಯಾರಿಗೂ ಹೆದರದೆ, ನಾಚಿಕೆಯಿಲ್ಲದೆ ಪ್ರದರ್ಶಿಸುತ್ತಿದ್ದಾರೆ. ಇದು ಮತಗಟ್ಟೆ ಸಂಖ್ಯೆ 134, 135, 137, 138ರಲ್ಲಿ ನಡೆಯುತ್ತಿದೆ. ಇದು ಆಘಾತಕಾರಿ ಬೆಳವಣಿಗೆ ಯಾಗಿದೆ. ಚುನಾವಣಾ ಆಯೋಗದ (Election Commission) ಮೂಗಿನ ನೇರಕ್ಕೆ ಆಗುತ್ತಿದೆ ಎಂದು ಎಎಪಿ ಅಭ್ಯರ್ಥಿ ಸೋಮನಾಥ್ ಭಾರ್ತಿಯವರು ವೀಡಿಯೋ ಸಮೇತ ಎಕ್ಸ್‌ನಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ದೆಹಲಿಯ ಎಲ್ಲಾ 7 ಸ್ಥಾನಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಆಮ್ ಆದ್ಮಿ ಪಕ್ಷದಿಂದ (AAP) ಮೂರು ಬಾರಿ ಶಾಸಕರಾಗಿರುವ ಮತ್ತು ವೃತ್ತಿಯಲ್ಲಿ ವಕೀಲರಾಗಿರುವ ಸೋಮನಾಥ್ ಭಾರ್ತಿ ಅವರು ತಮ್ಮ ಚೊಚ್ಚಲ ಲೋಕಸಭಾ ಚುನಾವಣೆಯಲ್ಲಿ ನವದೆಹಲಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ವಕೀಲರೂ ಆಗಿರುವ ಬಿಜೆಪಿ ನಾಯಕ ಬಾನ್ಸುರಿ ಸ್ವರಾಜ್ ವಿರುದ್ಧ ಮಾಳವೀಯ ನಗರ ಶಾಸಕ ಕಣಕ್ಕಿಳಿದಿದ್ದಾರೆ. ಇದನ್ನೂ ಓದಿ: ಇಂದು ಆರನೇ ಹಂತದ ಚುನಾವಣೆ- 58 ಕ್ಷೇತ್ರಗಳಿಗೆ ಮತದಾನ

Share This Article