ಕೈ ಅಭ್ಯರ್ಥಿ ಡಿ.ಕೆ ಸುರೇಶ್ ಆಪ್ತರಿಗೆ ಐಟಿ ಶಾಕ್

Public TV
1 Min Read

ಬೆಂಗಳೂರು: ಲೋಕಸಭಾ ಚುನಾವಣೆಯ (Loksabha Elections 2024) ಹೊತ್ತಲ್ಲಿಯೇ ಬೆಂಗಳೂರು ಗ್ರಾಮಾಂತರದ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ (DK Suresh) ಆಪ್ತರಿಗೆ ಐಟಿ ಶಾಕ್ ಕೊಟ್ಟಿದೆ.

ಡಿಕೆಗೆ ಸೇರಿದ್ದ 6 ಕಡೆ ಆದಾಯ ತೆರಿಗೆ (Income Tax ) ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಂಗಳೂರಿನ ಕೋಣನಕುಂಟೆಯ ಶ್ರೀಧರ್, ಅಂಜನಾಪುರ ಮಾಜಿ ಕಾರ್ಪೋರೇಟರ್ ಗಂಗಾಧರ್ ಸೇರಿ ಆರು ಜನರ ನಿವಾಸದ ಮೇಲೆ ಐಟಿ ದಾಳಿ ನಡೆದಿದೆ. ಗಂಗಾಧರ್ ನಿವಾಸದಲ್ಲಿ 87 ಲಕ್ಷ ರೂಪಾಯಿ ನಗದು ಸಿಕ್ಕಿದೆ.

ಐಟಿ ದಾಳಿ ಬಳಿಕ ಮಾತಾಡಿದ ಗಂಗಾಧರ್, ಕಾಂಗ್ರೆಸ್ ಪರ ಪ್ರಚಾರ ಮಾಡಬಾರದು ಅನ್ನೋ ರೀತಿಯಲ್ಲಿ ಐಟಿ ಅಧಿಕಾರಿಗಳು ಬೆದರಿಕೆ ಹಾಕಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ರು. ಐಟಿ ದಾಳಿ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು. ಆದರೆ ಬಿಜೆಪಿಯು ಈ ಐಟಿ ದಾಳಿಯನ್ನು ಸ್ವಾಗತಿಸಿದೆ. ಇದನ್ನೂ ಓದಿ: ‘ಕಂಗುವಾ’ ಚಿತ್ರದ ಬಜೆಟ್ ಕೇಳಿ ಬೆಚ್ಚಿದ ಕಾಲಿವುಡ್

1.33 ಕೋಟಿ ನಗದು, 23 ಕೆಜಿ ಚಿನ್ನಾಭರಣ ಜಪ್ತಿ: ಬಸವನಗುಡಿಯಲ್ಲಿ ಉದ್ಯಮಿ ಮನೆ ಮೇಲೆ ದಾಳಿ ನಡೆಸಿದ್ದು, ಆರೂವರೆ ಕೋಟಿ ನಗದು ಹಾಗೂ 22 ಕೆಜಿ ಚಿನ್ನ ವಶಪಡಿಸಿಕೊಡಿದೆ. ಬೆಂಗಳೂರು ದಕ್ಷಿಣ ಸೇರಿ ವಿವಿಧೆಡೆ ಕಳೆದ 2 ದಿನದಿಂದ ಐಟಿ ಇಲಾಖೆ ನಡೆಸಿದ್ದ ಶೋಧ ಕಾರ್ಯದಲ್ಲಿ, 1.33 ಕೋಟಿ ನಗದು, 23 ಕೆಜಿ ಚಿನ್ನಾಭರಣ, ಬೇನಾಮಿ ಆಸ್ತಿಪತ್ರದ ದಾಖಲೆಗಳನ್ನು ಜಪ್ತಿ ಮಾಡಿದೆ. ಬಳ್ಳಾರಿಯಲ್ಲಿ ಚಿನ್ನದ ವ್ಯಾಪಾರಿ ಕಮಲೇಶ್ ಜೈನ್ ನಿವಾದಲ್ಲಿ ದಾಖಲೆ ಇಲ್ಲದ 23 ಲಕ್ಷ ನಗದು, 450 ಗ್ರಾಂ ಚಿನ್ನ, 13 ಕೆಜಿ ಬೆಳ್ಳಿಯನ್ನು ಪೊಲೀಸರು ಜಪ್ತಿ ಮಾಡಿ, ವಾಣಿಜ್ಯ ತೆರಿಗೆ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ.

Share This Article