ಕಲಬುರಗಿ ಪಾಲಿಕೆ ಉಪ ಆಯುಕ್ತ RP ಜಾಧವ ಮನೆ, ಫಾರ್ಮ್ ಹೌಸ್ ಮೇಲೆ `ಲೋಕಾ’ ದಾಳಿ

Public TV
1 Min Read

ಕಲಬುರಗಿ: ಇಲ್ಲಿನ ಕಲಬುರಗಿ ಮಹಾನಗರ ಪಾಲಿಕೆಯ ಉಪ ಆಯುಕ್ತ (ಅಭಿವೃದ್ಧಿ) ಆರ್.ಪಿ ಜಾಧವ ಅವರ ಮನೆ, ಫಾರ್ಮ್ ಹೌಸ್ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ದಾಳಿ ಮಾಡಿದ್ದಾರೆ.

ಆ‌ರ್.ಪಿ ಜಾಧವ ಅವರು ಕಳೆದ ಕೆಲವು ವರ್ಷಗಳಿಂದ ಪಾಲಿಕೆಯಲ್ಲಿ ಉಪ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಮಂಗಳವಾರ ಬೆಳಿಗ್ಗೆ ಲೋಕಾಯುಕ್ತ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಕೆ ಉಮೇಶ ನೇತೃತ್ವದಲ್ಲಿ ಮೂರು ತಂಡಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ನಗರದ ಎನ್‌ಜಿಒ ಕಾಲೊನಿಯ ಮನೆ, ಫರಹತಾಬಾದ್ ಸಮೀಪದ ಫಾರ್ಮ್ ಹೌಸ್ ಮೇಲೆ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

ದಾಳಿಯ ವೇಳೆ ಮನೆಯಲ್ಲಿ 30 ತೊಲೆ ಬಂಗಾರ, ಬೆಳ್ಳಿ, ಕಾರು, ಬೈಕ್‌ಗಳು ಪತ್ತೆಯಾಗಿವೆ. ಶೋಧ ಕಾರ್ಯ ಮುಂದುವರೆದಿದೆ. ಪಾಲಿಕೆಯ ಕಚೇರಿ ಮೇಲೂ ದಾಳಿ. ಕಾರ್ಯ ಶೋಧನೆ ನಡಿತಾ ಇದೆ.

Share This Article