ಕರ್ನಾಟಕದಲ್ಲಿ 70.03% ಮತದಾನ – ಯಾವ ಕ್ಷೇತ್ರಗಳಲ್ಲಿ ಎಷ್ಟು ವೋಟಿಂಗ್ ಆಗಿದೆ?

Public TV
1 Min Read
ಬೆಂಗಳೂರು: ಪೆನ್‍ಡ್ರೈವ್ ರಾಜಕೀಯದ ಮಧ್ಯೆ ರಾಜ್ಯದಲ್ಲಿ ಎರಡನೇ ಹಾಗೂ ಅಂತಿಮ ಹಂತದ ಚುನಾವಣೆ ಸುಗಮವಾಗಿ ನಡೆದಿದೆ. ಕೆಲ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ 14 ಲೋಕಸಭೆ (Loksabha Elections 2024) ಕ್ಷೇತ್ರಗಳಲ್ಲಿ ಶಾಂತಿಯುತ ಚುನಾವಣೆ ನಡೆದಿದೆ. ರಣಬಿಸಿಲನ್ನು ಲೆಕ್ಕಿಸದ ಮತದಾರರು ಉತ್ಸಾಹದಿಂದ್ಲೇ ಮತಗಟ್ಟೆಗೆ ಬಂದು ಮತ ಚಲಾವಣೆ ಮಾಡಿದ್ರು.
ಕೆಲವೆಡೆ ಸರತಿ ಸಾಲಲ್ಲಿ ನಿಂತಿದ್ದ ಕಾರಣ ಆರು ಗಂಟೆ ನಂತರವೂ ಮತದಾನ ನಡೀತು. ಮಾಹಿತಿ ಪ್ರಕಾರ 70.03% ರಷ್ಟು ಮತದಾನ ಆಗಿದೆ. ಇದೇ ವೇಳೆ, ಸುರಪುರ ವಿಧಾನಸಭೆ ಉಪಚುನಾವಣೆಯೂ ಮುಗಿದಿದೆ. ಕ್ಷೇತ್ರದ ಬಾದ್ಯಾಪುರದಲ್ಲಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿ ನಡೆದಿದ್ದು, ಕಲ್ಲು ತೂರಾಟವಾಗಿದೆ. ಘಟನೆಯಲ್ಲಿ ಒಬ್ಬರ ತಲೆಗೆ ತೀವ್ರ ಸ್ವರೂಪದ ಗಾಯವಾಗಿದೆ. ಗ್ರಾಮದಲ್ಲಿ ಬಿಗುವಿನ ಸ್ಥಿತಿ ನಿರ್ಮಾಣವಾಗಿದೆ.
ಕ್ಷೇತ್ರಗಳ ಪೈಕಿ ಚಿಕ್ಕೋಡಿಯಲ್ಲಿ (Chikkodi) ಅತಿ ಹೆಚ್ಚು 76.47% ಮತದಾನ ನಡೆದರೆ ಕಲಬುರಗಿಯಲ್ಲಿ (Kalaburagi) 61.73% ಮತದಾನ ನಡೆದಿದೆ. 2019ಕ್ಕೆ ಹೋಲಿಸಿದ್ರೆ ಉತ್ತರ ಕನ್ನಡ, ಬಾಗಲಕೋಟೆ ಹೊರತುಪಡಿಸಿ ಎಲ್ಲ ಕಡೆ ಶೇಕಡಾವಾರು ಮತದಾನದಲ್ಲಿ ಹೆಚ್ಚಳವಾಗಿದೆ. ಇದನ್ನೂ ಓದಿ: 4 ವರ್ಷದ ಬಳಿಕ ಧಾರವಾಡಕ್ಕೆ ಬಂದು ಮತದಾನ ಮಾಡಿ ಹೋದ ಶಾಸಕ ವಿನಯ್ ಕುಲಕರ್ಣಿ
ಲೋಕಸಮರ; ಕರ್ನಾಟಕ ಮತ ಲೆಕ್ಕ
* ಫಸ್ಟ್ ಫೇಸ್ – 69.56%
* ಸೆಕೆಂಡ್ ಫೇಸ್ – 70.3%
* 2019ರಲ್ಲಿ – 68.81% ಮತದಾನವಾಗಿತ್ತು.
ಲೋಕಸಮರ; ಎಲ್ಲೆಲ್ಲಿ ಎಷ್ಟೆಷ್ಟು ವೋಟಿಂಗ್ 
* ಚಿಕ್ಕೋಡಿ- 76.47%
* ಬೆಳಗಾವಿ- 71.00%
* ಬಾಗಲಕೋಟೆ- 70.10%
* ವಿಜಯಪುರ- 64.71%
* ಕಲಬುರಗಿ- 61.73%
* ರಾಯಚೂರು- 61.81%
* ಬೀದರ್-‌ 63.55%
* ಕೊಪ್ಪಳ- 69.87%
* ಬಳ್ಳಾರಿ- 72.35%
* ಹಾವೇರಿ- 74.75%
* ಧಾರವಾಡ- 72.12%
* ಉತ್ತರ ಕನ್ನಡ- 73.52%
* ದಾವಣಗೆರೆ- 76.23%
* ಶಿವಮೊಗ್ಗ- 76.05%
Share This Article