ಉತ್ತರ ಕನ್ನಡ, ಶಿವಮೊಗ್ಗದಲ್ಲಿ ಭರ್ಜರಿ ವೋಟಿಂಗ್‌ – ಯಾವ ಕ್ಷೇತ್ರಗಳಲ್ಲಿ ಎಷ್ಟು ಪ್ರಮಾಣದಲ್ಲಿ ಮತದಾನ ನಡೆದಿದೆ?

Public TV
1 Min Read

ಬೆಂಗಳೂರು: ಕರ್ನಾಟಕದ (Karnataka) 14 ಲೋಕಸಭಾ ಕ್ಷೇತ್ರಗಳಿಗೆ (Lok Sabha Election) ಚುನಾವಣೆ ನಡೆಯುತ್ತಿದ್ದು, ಬೆಳಗ್ಗೆ 11 ಗಂಟೆಯ ವೇಳೆಗೆ 24.48% ಮತದಾನ ನಡೆದಿದೆ.

ಎಲ್ಲಾ 14 ಕ್ಷೇತ್ರಗಳಲ್ಲಿ 20% ಹೆಚ್ಚು ಮತದಾನ (Vote) ದಾಖಲಾಗಿದೆ. ಉತ್ತರ ಕನ್ನಡದಲ್ಲಿ 27.65% ಮತದಾನ ನಡೆದರೆ ಶಿವಮೊಗ್ಗದಲ್ಲಿ 27.22% ಮತದಾನ ದಾಖಲಾಗಿದೆ. ರಾಯಚೂರು 22.05%, ಬೀದರ್‌ನಲ್ಲಿ 22.33% ಮತದಾನ ನಡೆದಿದೆ.  ಇದನ್ನೂ ಓದಿ: ಕುಟುಂಬದೊಂದಿಗೆ ಚಿಕ್ಕಮಗಳೂರಿಗೆ ತೆರಳಿದ ಡಿಕೆ ಶಿವಕುಮಾರ್‌

2019ರ ಚುನಾವಣೆಯಲ್ಲಿ ಈ ಎಲ್ಲಾ ಕ್ಷೇತ್ರಗಳನ್ನು ಬಿಜೆಪಿ (BJP) ಗೆದ್ದುಕೊಂಡಿತ್ತು. ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್‌ (Congress) ಸರ್ಕಾರ ಅಧಿಕಾರದಲ್ಲಿರುವ ಕಾರಣ ಉತ್ತರ ಕರ್ನಾಟಕದ ಈ ಕ್ಷೇತ್ರಗಳಲ್ಲಿ ಬಿಜೆಪಿ-ಕಾಂಗ್ರೆಸ್‌ ಮಧ್ಯೆ ನೇರಾ ಪೈಪೋಟಿ ನಡೆಯುತ್ತಿದೆ.  ಇದನ್ನೂ ಓದಿ: ಪ್ರಜ್ವಲ್‌ ವಿದೇಶಕ್ಕೆ ಹಾರಲು ರಾಜ್ಯ ಸರ್ಕಾರವೇ ಹೊಣೆ : ಮೌನ ಮುರಿದ ಮೋದಿ

 

Share This Article