ಬಿಹಾರದಲ್ಲಿ INDIA ಒಕ್ಕೂಟದ ಸೀಟು ಹಂಚಿಕೆ ಫೈನಲ್‌ – ಯಾವ ಪಕ್ಷಕ್ಕೆ ಎಷ್ಟು ಕ್ಷೇತ್ರ?

Public TV
1 Min Read

ನವದೆಹಲಿ:ಬಿಹಾರದಲ್ಲಿ (Bihar) INDIA ಒಕ್ಕೂಟ ಸೀಟು ಹಂಚಿಕೆ ಅಧಿಕೃತವಾಗಿ ಫೈನಲ್‌ ಮಾಡಿದೆ. ಆರ್‌ಜೆಡಿ (RJD), ಕಾಂಗ್ರೆಸ್‌ (Congress), ಎಡಪಕ್ಷಗಳು ಒಟ್ಟಾಗಿ ಸುದ್ದಿಗೋಷ್ಠಿ ನಡೆಸಿ ಲೋಕಸಭಾ ಚುನಾವಣೆಯ (Lok Sabha Election) ಸೀಟು ಹಂಚಿಕೆ ವಿಚಾರ ತಿಳಿಸಿವೆ.

ಬಿಹಾರದಲ್ಲಿ ಒಟ್ಟು 40 ಕ್ಷೇತ್ರಗಳಿದ್ದು ಆರ್‌ಜೆಡಿ 20, ಕಾಂಗ್ರೆಸ್‌ 9, ಎಡ ಪಕ್ಷಗಳು 5 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ.  ಇದನ್ನೂ ಓದಿ: ಚುನಾವಣೆ ಹೊತ್ತಲ್ಲಿ ಕಾಂಗ್ರೆಸ್‌ಗೆ ಸಂಕಷ್ಟ – ಐಟಿ ಇಲಾಖೆಯಿಂದ 1,700 ಕೋಟಿ ಮೊತ್ತದ ಡಿಮ್ಯಾಂಡ್‌ ನೋಟಿಸ್‌

 

ಎನ್‌ಡಿಎ (NDA) ಒಕ್ಕೂಟ ಈಗಾಗಲೇ ಸ್ಥಾನ ಹಂಚಿಕೆ ಮಾಡಿದೆ. ಬಿಜೆಪಿ 17, ಜೆಡಿಯು 16, ಜಿತನ್‌ ರಾಮ್‌ ಮಾಂಜಿ ಅವರ ಹಿಂದೂಸ್ತಾನಿ ಆವಾಮ್ ಮೋರ್ಚಾ‌ ಮತ್ತು ರಾಷ್ಟ್ರೀಯ ಲೋಕ ಸಮತಾ ಪಾರ್ಟಿ 1 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಲೋಕ ಜನಶಕ್ತಿ ಪಾರ್ಟಿ (ರಾಮ್‌ ವಿಲಾಸ್‌) ಪಕ್ಷ 5 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ.

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಜೆಡಿಯು, ಎಲ್‌ಜೆಪಿ ಮೈತ್ರಿ 40 ಕ್ಷೇತ್ರಗಳ ಪೈಕಿ 39 ಸ್ಥಾನಗಳನ್ನು ಗೆದ್ದುಕೊಂಡಿತ್ತು.

ಬಿಹಾರದಲ್ಲಿ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಜೂನ್‌ 4 ರಂದು ಮತ ಎಣಿಕೆ ನಡೆಯಲಿದೆ.

Share This Article