ವರಿಷ್ಠರ ಜೊತೆ ಮಾತನಾಡಿ ಈಶ್ವರಪ್ಪನವರನ್ನು ಮನವೊಲಿಸುತ್ತೇವೆ: ಬೊಮ್ಮಾಯಿ

Public TV
1 Min Read

ಹಾವೇರಿ: ಬಿಜೆಪಿ (BJP) ಪಕ್ಷವನ್ನು ಈಶ್ವರಪ್ಪ (Eshwarappa) ಕಟ್ಟಿ ಬೆಳೆಸಿದ್ದಾರೆ. ಅವರು ಶಿಸ್ತಿನ ಸಿಪಾಯಿ ಆಗಿದ್ದು, ವರಿಷ್ಠರು ಜೊತೆಗೆ ಮಾತನಾಡಿ ಮನವೊಲಿಸುತ್ತೇನೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.

ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ (Shivamogga Lok Sabha Constituency) ಈಶ್ವರಪ್ಪ ಪಕ್ಷೇತರವಾಗಿ ನಿಲ್ಲುತ್ತಿರುವ ವಿಚಾರ ನನಗೆ ಗೊತ್ತಿಲ್ಲ. ಬಿಜೆಪಿ ಸಂಸದಿಯ ಮಂಡಳಿಯಲ್ಲಿ ಏನೇನು ನಡೆದಿದೆ ಅದೆಲ್ಲವೂ ಈಶ್ವರಪ್ಪನವರಿಗೆ ತಿಳಿದಿದೆ. ಮೊದಲು ನನ್ನ ಹೆಸರು ಇರಲಿಲ್ಲ. ಆದರೆ ನಾನು ಚುನಾವಣೆಗೆ ನಿಲ್ಲಬೇಕು ಎನ್ನುವುದು ವರಿಷ್ಠರ ತೀರ್ಮಾನ. ನಾನು ಮೋಸ ಮಾಡಿಲ್ಲ ಎಂದು ಹೇಳಿದರು. ಇದನ್ನೂ ಓದಿ: ನಾವು ಎಷ್ಟು ಅರ್ಜಿಗಳನ್ನು ಪರಿಗಣಿಸಬೇಕು? – EVM ಬೇಡವೆಂದು ಕಾಂಗ್ರೆಸ್‌ ಸಲ್ಲಿಸಿದ್ದ ಅರ್ಜಿ ವಜಾ

 

ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಬೇರೆಯವರಿಗೆ ಅವಕಾಶ ಕೊಡಿ ಎಂದು ಹೇಳಿದ್ದೆ. ಆದರೆ ಪ್ರಧಾನಿ ನರೇಂದ್ರ ಮೋದಿ (PM Narendra Modi), ಜೆಪಿ ನಡ್ಡಾ, ಅಮಿತ್‌ ಶಾ ತಿಳಿಸಿದ ಬಳಿಕ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರ ಮಾಡಬೇಕಾಯಿತು ಎಂದರು.  ಇದನ್ನೂ ಓದಿ: ಧರ್ಮಯುದ್ಧದಲ್ಲಿ ನನ್ನನ್ನು ಗೆಲ್ಲಿಸಿ, ಸತ್ಯಕ್ಕೆ ಜಯಸಿಗಬೇಕು: ಡಾ.ಮಂಜುನಾಥ್

ಶಿಗ್ಗಾವಿ (Shiggaon) ಉಪಚುನಾವಣೆ ನಡೆದರೆ ಪುತ್ರ ಭರತ್ ಬೊಮ್ಮಾಯಿಗೆ ಟಿಕೆಟ್‌ ಸಿಗುತ್ತಾ ಎಂಬ ಪ್ರಶ್ನೆಗೆ, ಈಗ ನಾನಿನ್ನೂ ಸ್ಪರ್ಧೆ ಮಾಡಿ ಲೋಕಸಭಾ ಚುನಾವಣೆ ಗೆಲ್ಲಬೇಕು. ಬಳಿಕ ಶಿಗ್ಗಾವಿಗೆ ಉಪಚುನಾವಣೆ ನಡೆಯಲಿದೆ. ಊಹೆ ಮಾಡಿ ನಾನು ಹೇಳಲು ಸಾಧ್ಯವಿಲ್ಲ. ಆ ಸಂದರ್ಭದಲ್ಲಿ ಜನರ ಅಭಿಪ್ರಾಯ, ಪಕ್ಷದ ಕೇಳಬೇಕು ಎಂದು ಉತ್ತರಿಸಿದರು.

 

Share This Article