ದೆಹಲಿಗೆ ತೆರಳಿದ ಹೆಚ್‌ಡಿ ಕುಮಾರಸ್ವಾಮಿ

Public TV
1 Min Read

ಬೆಂಗಳೂರು: ಮಂಡ್ಯದ (Mandya) ನೂತನ ಸಂಸದ, ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಅವರು ದೆಹಲಿಗೆ ತೆರಳಿದ್ದಾರೆ.

ಇಂದು ಸಂಜೆ ಖಾಸಗಿ ಹೋಟೆಲಿನಲ್ಲಿ ಎನ್‌ಡಿಎ (NDA) ಮಿತ್ರಪಕ್ಷಗಳ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಭಾಗವಹಿಸಲು ಕುಮಾರಸ್ವಾಮಿ ಕೆಂಪೇಗೌಡ ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣ ಬೆಳೆಸಿದರು.
ಇದನ್ನೂ ಓದಿ: ವಾಲ್ಮೀಕಿ ನಿಗಮದಲ್ಲಿ ಕೋಟ್ಯಂತರ ರೂ. ಹಗರಣ – ಸಿಬಿಐನಿಂದ ಎಫ್‌ಐಆರ್‌ ದಾಖಲು

ನೂತನವಾಗಿ ಆಯ್ಕೆ ಆಗಿರುವ ಮಿತ್ರ ಪಕ್ಷಗಳ ನಾಯಕರು ದೆಹಲಿಗೆ ಬರುವಂತೆ ಅಮಿತ್‌ ಶಾ ಆಹ್ವಾನ ನೀಡಿದ್ದಾರೆ. ಇದನ್ನೂ ಓದಿ: ಇಂದಿರಾ ಗಾಂಧಿಯನ್ನು ಹತ್ಯೆಗೈದ ಅಪ್ತ ರಕ್ಷಕನ ಪುತ್ರನಿಗೆ ಜಯ

ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 293 ಸ್ಥಾನಗಳನ್ನು ಗೆದ್ದರೆ ಇಂಡಿಯಾ (INDIA) ಮೈತ್ರಿಕೂಟ 234 ಸ್ಥಾನಗಳನ್ನು ಗೆದ್ದುಕೊಂಡಿದೆ. ಸರ್ಕಾರ ರಚನೆಗೆ 272 ಸ್ಥಾನಗಳ ಅಗತ್ಯವಿದೆ.

Share This Article