ಮತದಾನ ಮಾಡಿ ಪ್ರಜಾಪ್ರಭುತ್ವ ಹಬ್ಬದಲ್ಲಿ ಭಾಗಿಯಾಗಿ

Public TV
2 Min Read

ಬೆಂಗಳೂರು: ಪ್ರಜಾಪ್ರಭುತ್ವದ ಹಬ್ಬ, ಭವಿಷ್ಯಕ್ಕಾಗಿ ಪ್ರಜೆಗಳು ತಮ್ಮ ಪವರ್ ತೋರಿಸುವ ಅವಕಾಶ ಬಂದಿದೆ. ಕರ್ನಾಟಕ ದಕ್ಷಿಣಾರ್ಧ ಭಾಗದ 14 ಕ್ಷೇತ್ರಗಳಲ್ಲಿ ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ.  ಎಲ್ಲಾ ಕ್ಷೇತ್ರಗಳಲ್ಲೂ ಈಗಾಗಲೇ ಇವಿಎಂ, ವಿವಿಪ್ಯಾಟ್‍ಗಳ ಅಳವಡಿಕೆ, ಭದ್ರತೆಯ ಸಿದ್ಧತೆಯೂ ನಡೆದಿದೆ. 14 ಕ್ಷೇತ್ರಗಳ ಪೈಕಿ 13ರಲ್ಲಿ ಬಿಜೆಪಿ, 10ರಲ್ಲಿ ಕಾಂಗ್ರೆಸ್, 4ರಲ್ಲಿ ಜೆಡಿಎಸ್ ಸ್ಪರ್ಧಿಸಿದೆ. ಈ 14 ಕ್ಷೇತ್ರಗಳ ಪೈಕಿ ಮಂಡ್ಯ ಕಣ ಅತ್ಯಂತ ಹೈವೋಲ್ಟೇಜ್, ಹಾಟ್‍ಸೀಟ್ ಎನಿಸಿಕೊಂಡಿದೆ.

ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಎಲ್ಲರೂ ತಪ್ಪದೇ ಮತ ಚಲಾಯಿಸಿ. ಓಟರ್ ಐಡಿ ಇಲ್ಲದೇ ಇದ್ದರೂ ಈ ದಾಖಲೆಗಳನ್ನು ತೋರಿಸಿ ಓಟ್ ಹಾಕಬಹುದು.

ಈ ದಾಖಲೆ ತೋರಿಸಿ:
ಆಧಾರ್ ಕಾರ್ಡ್, ಪ್ಯಾನ್‍ಕಾರ್ಡ್, ರೇಷನ್‍ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಬ್ಯಾಂಕ್ ಪಾಸ್‍ಬುಕ್, ಪೋಸ್ಟ್ ಆಫೀಸ್ ಪಾಸ್‍ಬುಕ್, ನರೇಗಾ ಜಾಬ್ ಕಾರ್ಡ್, ಪಾಸ್‍ಪೋರ್ಟ್, ಚುನಾವಣಾ ಆಯೋಗದ ನಿಮ್ಮ ಫೋಟೋ ಇರುವ ಓಟರ್ ಸ್ಲಿಪ್, ಕಾರ್ಮಿಕ ಸಚಿವಾಲಯ ನೀಡಿದ ಹೆಲ್ತ್ ಇನ್ಶೂರೆನ್ಸ್ ಕಾರ್ಡ್, ನಿಮ್ಮ ಫೋಟೋ ಇರುವ ಪೆನ್ಶನ್ ಪಡೆಯೋ ದಾಖಲೆ.

ಕರ್ನಾಟಕದಲ್ಲಿ ಎಲ್ಲೆಲ್ಲಿ?
ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಹಾಸನ, ಮಂಡ್ಯ, ಮೈಸೂರು-ಕೊಡಗು, ಚಾಮರಾಜನಗರ, ದಕ್ಷಿಣ ಕನ್ನಡ, ಚಿಕ್ಕಮಗಳೂರು-ಉಡುಪಿ, ಚಿತ್ರದುರ್ಗ.

ಯಾವೆಲ್ಲ ರಾಜ್ಯಗಳಲ್ಲಿ ಚುನಾವಣೆ?
ಇವತ್ತು ಬರೀ ಕರ್ನಾಟಕ ಅಷ್ಟೇ ಅಲ್ಲ 13 ರಾಜ್ಯಗಳ 97 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ. ಕರ್ನಾಟಕ 14 ಕ್ಷೇತ್ರ, ತಮಿಳುನಾಡು 38 ಕ್ಷೇತ್ರ, ಮಹಾರಾಷ್ಟ್ರ 10 ಕ್ಷೇತ್ರ, ಉತ್ತರಪ್ರದೇಶ 8 ಕ್ಷೇತ್ರ, ಅಸ್ಸಾಂ 5 ಕ್ಷೇತ್ರ, ಬಿಹಾರ 5 ಕ್ಷೇತ್ರ, ಒಡಿಶಾ 5 ಕ್ಷೇತ್ರ, ಛತ್ತೀಸ್‍ಗಢ 3 ಕ್ಷೇತ್ರ, ಪ. ಬಂಗಾಳ 3 ಕ್ಷೇತ್ರ, ಕಾಶ್ಮೀರ 2 ಕ್ಷೇತ್ರ, ಮಣಿಪುರ 1 ಕ್ಷೇತ್ರ, ತ್ರಿಪುರ 1 ಕ್ಷೇತ್ರ, ಪುದಿಚೇರಿ 1 ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದೆ.

ಮತದಾರರು ಎಷ್ಟಿದ್ದಾರೆ..?
* ಒಟ್ಟು ಮತದಾರರು – 2,67,51,893
* ಪುರುಷರು – 1,35,45,818
* ಮಹಿಳೆಯರು – 1,32,03,258
* ಇತರೆ – 287

* ಒಟ್ಟು ಮತಗಟ್ಟೆಗಳು – 30,197
* ಸೂಕ್ಷ್ಮ ಮತಗಟ್ಟೆಗಳು – 6,318
* ಸಾಮಾನ್ಯ ಮತಗಟ್ಟೆಗಳು – 23,879

ಖಾಕಿ ಕಣ್ಗಾವಲು
* ಡಿವೈಎಸ್‍ಪಿ – 282
* ಪೊಲೀಸ್ ನಿರೀಕ್ಷಕರು – 851
* ಪಿಎಸ್‍ಐ – 1,188
* ಮುಖ್ಯಪೇದೆ, ಪೊಲೀಸ್ ಪೇದೆ- 42,950
* ಗೃಹರಕ್ಷಕ ದಳ – 40,117
* ಅರಣ್ಯ ರಕ್ಷಕರು – 414
* ಜೈಲ್ ವಾರ್ಡನ್ಸ್ – 990
* ಒಟ್ಟು ಸಿಬ್ಬಂದಿ – 90,997

Share This Article
Leave a Comment

Leave a Reply

Your email address will not be published. Required fields are marked *