ಕಚ್ಚತೀವು ಪ್ರದೇಶವನ್ನು ಕಾಂಗ್ರೆಸ್‌ ಶ್ರೀಲಂಕಾಗೆ ನೀಡಿದೆ – ತಮಿಳುನಾಡಿನಲ್ಲಿ ಬಿರುಗಾಳಿ ಎಬ್ಬಿಸಿದ RTI ಉತ್ತರ

Public TV
4 Min Read

– ಆರ್‌ಟಿಐ ಅಡಿ ಪ್ರಶ್ನೆ ಕೇಳಿದ ಅಣ್ಣಾಮಲೈ
– ದ್ವೀಪದ ಮೇಲಿನ ಹಕ್ಕುಗಳನ್ನು ಬಿಟ್ಟುಕೊಡಲು ನನಗೆ ಯಾವುದೇ ಹಿಂಜರಿಕೆಯಿಲ್ಲ
– ಉತ್ತರದಲ್ಲಿ ನೆಹರೂ ನೀಡಿದ ಟಿಪ್ಪಣಿ ಉಲ್ಲೇಖ
– ಕಚ್ಚತೀವು ಪ್ರದೇಶ ತನ್ನದೆಂದು ಸಾಬೀತು ಪಡಿಸಲು ಭಾರತ ವಿಫಲ

ನವದೆಹಲಿ: ಲೋಕಸಭಾ ಚುನಾವಣೆಯ (Lok Sabha Election) ಸಮಯದಲ್ಲಿ ಕಚ್ಚತೀವು (Katchatheevu) ದ್ವೀಪ ಪ್ರದೇಶದ ಬಗ್ಗೆ ಆರ್‌ಟಿಐ ಅಡಿ ಪಡೆದ ಮಾಹಿತಿ ತಮಿಳುನಾಡಿನಲ್ಲಿ (Tamil Nadu) ಬಿರುಗಾಳಿ ಎಬ್ಬಿಸುವ ಸಾಧ್ಯತೆಯಿದೆ.

ಕಚ್ಚತೀವು ಪ್ರದೇಶವನ್ನು ಕಾಂಗ್ರೆಸ್‌ ಸರ್ಕಾರ (Congress Government) ಶ್ರೀಲಂಕಾ ಬಿಟ್ಟುಕೊಟ್ಟಿದೆ. ಸ್ವಾರ್ಥಕ್ಕಾಗಿ ಕಾಂಗ್ರೆಸ್‌ ಮತ್ತು ಡಿಎಂಕೆ (DMK) ತಮಿಳುನಾಡಿಗೆಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಈಗ ಕಿಡಿಕಾರಿದೆ.

ಈಗ ಯಾಕೆ ಸುದ್ದಿ?
ಡಿಎಂಕೆ ಮತ್ತು ಕಾಂಗ್ರೆಸ್‌ ವಿರುದ್ಧ ಯುದ್ಧ ಸಾರಿರುವ ತಮಿಳುನಾಡಿನಲ್ಲಿ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ಕಚ್ಚತೀವು ಪ್ರದೇಶದ ಬಗ್ಗೆ ಅಂದಿನ ಕೇಂದ್ರ ಸರ್ಕಾರದ ನಿರ್ಧಾರ ಏನಿತ್ತು? ಶ್ರೀಲಂಕಾಗೆ ಈ ದ್ವೀಪ ಸೇರಿದ್ದು ಹೇಗೆ ಎಂಬುದರ ವಿವರವನ್ನು ಆರ್‌ಟಿಐ ಅಡಿ ಕೇಳಿ ಮಾಹಿತಿ ಪಡೆದಿದ್ದಾರೆ. ಈ ಮಾಹಿತಿಯ ವಿವರವನ್ನು ಮಾಧ್ಯಮವೊಂದು ಪ್ರಕಟಿಸಿದ್ದು ಈಗ ರಾಷ್ಟ್ರಮಟ್ಟದಲ್ಲಿ #Katchatheevu ಟ್ರೆಂಡಿಂಗ್‌ ಟಾಪಿಕ್‌ ಆಗಿದೆ.

ಆರ್‌ಟಿಐ ಮಾಹಿತಿಯಲ್ಲಿ ಏನಿದೆ?
ಕಚ್ಚತೀವು ಪ್ರದೇಶ ಯಾರಿಗೆ ಸೇರಬೇಕು ಎನ್ನುವುದರ ಬಗ್ಗೆ ಸ್ವಾತಂತ್ರ್ಯ ಸಿಗುವಾಗ ಬ್ರಿಟಿಷರು ನಿರ್ಧಾರ ಮಾಡಿರಲಿಲ್ಲ. ಭಾರತ ತೀರದಿಂದ 20 ಕಿ.ಮೀ ದೂರದಲ್ಲಿರುವ ಕಚ್ಚತೀವು ಪ್ರದೇಶದಲ್ಲಿ ಭಾರತದ ನೌಕಾ ಸೇನೆ ಮಿಲಿಟರಿ ವ್ಯಾಯಾಮ ನಡೆಸಬಾರದು ಎಂದು ಶ್ರೀಲಂಕಾ ಹೇಳಿದಾಗ ಮೊದಲ ಬಾರಿಗೆ ಈ ವಿಚಾರ ಮುನ್ನೆಲೆಗೆ ಬಂತು. 1955 ರಲ್ಲಿ ಸಿಲೋನ್‌ ಏರ್‌ಫೋರ್ಸ್‌ ಈ ದ್ವೀಪದಲ್ಲಿ ವ್ಯಾಯಾಮ ನಡೆಸಿತು.

1961 =ರ ಮೇ 10 ರಂದು ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರು ಈ ವಿಚಾರ ದೊಡ್ಡ ಸಮಸ್ಯೆಯೇ ಅಲ್ಲ ಎಂದು ಹೇಳಿ ತಳ್ಳಿಹಾಕಿದರು. ದ್ವೀಪದ ಮೇಲಿನ ಹಕ್ಕುಗಳನ್ನು ಬಿಟ್ಟುಕೊಡಲು ನನಗೆ ಯಾವುದೇ ಹಿಂಜರಿಕೆಯಿಲ್ಲ ಎಂದು  ಟಿಪ್ಪಣಿ ಬರೆದರು.

ನಾನು ಈ ಪುಟ್ಟ ದ್ವೀಪಕ್ಕೆ ಯಾವುದೇ ಪ್ರಾಮುಖ್ಯತೆಯನ್ನು ನೀಡುವುದಿಲ್ಲ ಮತ್ತು ಅದರ ಮೇಲಿನ ನಮ್ಮ ಹಕ್ಕುಗಳನ್ನು ಬಿಟ್ಟುಕೊಡಲು ನನಗೆ ಯಾವುದೇ ಹಿಂಜರಿಕೆಯಿಲ್ಲ. ಇದು ಅನಿರ್ದಿಷ್ಟವಾಗಿ ಬಾಕಿ ಉಳಿದಿರುವುದು ಮತ್ತು ಸಂಸತ್ತಿನಲ್ಲಿ ಮತ್ತೆ ಚರ್ಚಿಸುವುದು ನನಗೆ ಇಷ್ಟವಿಲ್ಲ ಎಂದು ನೆಹರು ಟಿಪ್ಪಣಿಯಲ್ಲಿ ಉಲ್ಲೇಖಿಸಿದರು.

ನೆಹರು ಅವರ ಟಿಪ್ಪಣಿಯೂ ಆಗಿನ ಕಾಮನ್‌ವೆಲ್ತ್ ಕಾರ್ಯದರ್ಶಿ ವೈ ಡಿ ಗುಂಡೆವಿಯಾ ಅವರು ಸಿದ್ಧಪಡಿಸಿದ ಟಿಪ್ಪಣಿಯ ಭಾಗವಾಗಿತ್ತು ಮತ್ತು ಇದನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ 1968 ರಲ್ಲಿ ಸಂಸತ್ತಿನ ಅನೌಪಚಾರಿಕ ಸಲಹಾ ಸಮಿತಿಯೊಂದಿಗೆ ಹಿನ್ನೆಲೆಯಾಗಿ ಹಂಚಿಕೊಂಡಿದೆ.

ಈ ಪ್ರಕರಣದಲ್ಲಿ ಭಾರತದ ಪರ ಸಾಕ್ಷಗಳು ಗಟ್ಟಿ ಇತ್ತು. ಯಾಕೆಂದರೆ 1875 ರಿಂದ 1948 ರವರೆಗೆ ಈ ಜಾಗದಲ್ಲಿ ಮೀನುಗಾರರು ಮೀನುಗಾರಿಕೆಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಎದುರಿಸುತ್ತಿರಲಿಲ್ಲ. ಕಚ್ಚತೀವು ಮತ್ತು ಅದರ ಮೀನುಗಾರಿಕೆಯನ್ನು ನಿರ್ವಹಿಸುವ ಜಮೀನ್ದಾರಿ ಹಕ್ಕುಗಳನ್ನು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ರಾಮನಾಡಿನ ರಾಜನಿಗೆ ನೀಡಿತ್ತು. ಇದು 1875 ರಿಂದ 1948 ರವರೆಗೆ ಮುಂದುವರೆದಿತ್ತು. ಜಮೀನ್ದಾರಿ ಹಕ್ಕುಗಳನ್ನು ರದ್ದುಪಡಿಸಿದ ನಂತರ ಮದ್ರಾಸ್ ರಾಜ್ಯಕ್ಕೆ ನೀಡಲಾಯಿತು. ಆದಾಗ್ಯೂ ರಾಮನಾಡಿನ ರಾಜನು ಶ್ರೀಲಂಕಾಕ್ಕೆ ತೆರಿಗೆಯನ್ನು ಪಾವತಿಸದೇ ಸ್ವತಂತ್ರವಾಗಿ ತನ್ನ ಜಮೀನ್ದಾರಿ ಹಕ್ಕುಗಳನ್ನು ಚಲಾಯಿಸುತ್ತಿದ್ದ.

ದ್ವೀಪವನ್ನು ಹಸ್ತಾಂತರಿಸುವ ಸಂಬಂಧ ಇಂದಿರಾ ಗಾಂಧಿ ಮತ್ತು ಅವರ ಸಿಲೋನೀಸ್ ಸಹವರ್ತಿ ಡ್ಯೂಡ್ಲಿ ಸೇನಾನಾಯಕ್ ಅವರು ರಹಸ್ಯವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂಬ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ 1968ರಲ್ಲಿ ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಪ್ರತಿಭಟಿಸಿ ಇಂದಿರಾ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡವು. ಈ ವೇಳೆ ಸರ್ಕಾರ ಭಾರತ ಸರ್ಕಾರವು ಸಹಿ ಹಾಕಿರುವುದನ್ನು ನಿರಾಕರಿಸಿತು. ವಿವಾದಿತ ಸ್ಥಳವಾಗಿರುವ ಕಾರಣ ಉತ್ತಮ ದ್ವಿಪಕ್ಷೀಯ ಬಾಂಧವ್ಯದ ಅಗತ್ಯದೊಂದಿಗೆ ಭಾರತದ ಹಕ್ಕು ಸಮತೋಲಿತವಾಗಿರಬೇಕು ಎಂದು ಹೇಳಿತು.  ಇದನ್ನೂ ಓದಿ: ಈಶ್ವರಪ್ಪ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲು

1973ರಲ್ಲಿ ಕೊಲಂಬೋದಲ್ಲಿ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆ ನಡೆಯಿತು. ಈ ಮಾತುಕತೆ ನಡೆದ ಒಂದು ವರ್ಷದ ನಂತರ ಭಾರತದ ಹಕ್ಕು ಹಿಂಪಡೆಯುವ ನಿರ್ಧಾರವನ್ನು ಜೂನ್ 1974 ರಲ್ಲಿ ವಿದೇಶಾಂಗ ಕಾರ್ಯದರ್ಶಿ ಕೇವಲ್ ಸಿಂಗ್ ಅವರು ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ಅವರಿಗೆ ತಿಳಿಸಿದರು. ಇದನ್ನೂ ಓದಿ: ಕೆಪಿಎಸ್‌ಸಿ ನೇಮಕಾತಿ ಅಕ್ರಮ ಬಯಲಿಗೆ ಬಾರದೇ ಇರಲು ಸರ್ಕಾರದಿಂದಲೇ ಕಡತ ಕಳ್ಳತನ : ಬಿಜೆಪಿ ಕಿಡಿ

ಸಭೆಯಲ್ಲಿ ರಾಮನಾಡಿನ ರಾಜನ ಜಮೀನ್ದಾರಿ ಹಕ್ಕುಗಳ ಬಗ್ಗೆ ಪ್ರಸ್ತಾಪಿಸಿ ಕಚ್ಚತೀವು ಪ್ರದೇಶ ನಮಗೆ ಸೇರಿದ್ದು ಎಂದು ಭಾರತ ಹೇಳಿತ್ತು. ಈ ಸಭೆಯಲ್ಲಿ ಸರಿಯಾದ ಸಾಕ್ಷ್ಯಗಳನ್ನು ತೋರಿಸಲು ವಿಫಲವಾಗಿದ್ದರೂ ದಾಖಲೆ ಆಧಾರದ ಮೇಲೆ ಶ್ರೀಲಂಕಾ ಬಹಳ ನಿರ್ಧಾರಿತ ಸ್ಥಾನವನ್ನು ತೆಗೆದುಕೊಂಡಿತು. ಜಾಫ್ನಾಪಟ್ಟಣದ ಭಾಗವಾಗಿ ಈ ಜಾಗ ತಮ್ಮದು ಎಂದು ಸಾಬೀತುಪಡಿಸಲು ಶ್ರೀಲಂಕಾ ಡಚ್‌, ಬ್ರಿಟಿಷರ ನಕ್ಷೆಯನ್ನು ತೋರಿಸಿತು. ಈ ಕಚ್ಚತೀವು ಮದ್ರಾಸ್‌ ರಾಜ್ಯದ ದ್ವೀಪವಾಗಿತ್ತು, ರಾಮನಾಡಿನ ರಾಜನಿಗೆ ಈ ಜಾಗ ಸೇರಿತ್ತು ಎಂದು ಸಾಬೀತುಪಡಿಸಲು ಗಟ್ಟಿ ಸಾಕ್ಷ್ಯಗಳು ಇದ್ದರೂ ಅದನ್ನು ಸಾಬೀತು ಪಡಿಸುವಲ್ಲಿ ಭಾರತ ವಿಫಲವಾಯಿತು.

ಈ ವಿಚಾರವನ್ನು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಭಾರತ ತೆಗೆದುಕೊಂಡು ಹೋಗಲು ಹಿಂಜರಿಯಿತು. ಸಣ್ಣ ದೇಶಗಳ ಪರ ಒಲವು ತೋರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಮಾಡಿತು ಎಂದು ಉಲ್ಲೇಖವಾಗಿರುವ ಅಂಶ ಆರ್‌ಟಿಐ ಮಾಹಿತಿಯಲ್ಲಿದೆ.

ಕಚ್ಚಾತೀವು ಎಲ್ಲಿದೆ?
ಕಚ್ಚತೀವು ತಮಿಳುನಾಡಿನ ರಾಮನಾಥಪುರಂನ ಈಶಾನ್ಯಕ್ಕೆ ಸುಮಾರು 15 ಮೈಲಿಗಳು (24 ಕಿಲೋಮೀಟರ್) ಮತ್ತು ಶ್ರೀಲಂಕಾದ ಡೆಲ್ಫ್ಟ್ ದ್ವೀಪಗಳ ನೈಋತ್ಯಕ್ಕೆ ಸರಿಸುಮಾರು 14 ಮೈಲಿ (22 ಕಿಲೋಮೀಟರ್) ದೂರದಲ್ಲಿದೆ.

ಈಗ ಯಾಕೆ ಚರ್ಚೆ:
ಭಾರತದ ಸಮುದ್ರ ಗಡಿಯಲ್ಲಿ ಈ ಜಾಗ ಇರುವ ಕಾರಣ ತಮಿಳುನಾಡಿನ ಮೀನುಗಾರರು ಕಚ್ಚತೀವು ಪ್ರದೇಶದ ಸಮೀಪದಲ್ಲಿ ಮೀನುಗಾರಿಕೆ ಮಾಡುತ್ತಿರುತ್ತಾರೆ. ಈ ವೇಳೆ ನಮ್ಮ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶ ಮಾಡಲಾಗಿದೆ ಎಂದು ಆರೋಪಿಸಿ ಲಂಕಾದ ನೌಕಾಸೇನೆ ಮೀನುಗಾರರನ್ನು ಬಂಧಿಸುತ್ತದೆ. 2020 ಮತ್ತು 2022 ರ ನಡುವೆ 501 ಭಾರತೀಯ ಮೀನುಗಾರರನ್ನು ಶ್ರೀಲಂಕಾ ಬಂಧಿಸಿದೆ ಎಂದು ಈ ಹಿಂದೆ ಕೇಂದ್ರ ಸರ್ಕಾರ ಸಂಸತ್ತಿಗೆ ಉತ್ತರ ನೀಡಿತ್ತು.

 

Share This Article