ಈ ಚುನಾವಣೆಯಲ್ಲಿ ಅದಾನಿ-ಅಂಬಾನಿಯನ್ನು ನಿಂದಿಸುತ್ತಿಲ್ಲ ಯಾಕೆ – ರಾಹುಲ್‌ಗೆ ಮೋದಿ ಪ್ರಶ್ನೆ

By
2 Min Read

– ರಫೇಲ್‌ ವಿವಾದದ ನಂತರ ಅದಾನಿ ವಿರುದ್ಧ ರಾಹುಲ್‌ ವಾಗ್ದಾಳಿ
– RR ತೆರಿಗೆ RRR ಸಿನಿಮಾ ಕಲೆಕ್ಷನ್‌ ಹಿಂದಿಕ್ಕಿದೆ

ಹೈದರಾಬಾದ್‌: ಈ ಚುನಾವಣೆಯಲ್ಲಿ ಅದಾನಿ-ಅಂಬಾನಿಯನ್ನು (Adani-Ambani) ರಾಹುಲ್‌ ಗಾಂಧಿ (Rahul Gandhi) ನಿಂದಿಸುತ್ತಿಲ್ಲ ಯಾಕೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಪ್ರಶ್ನಿಸಿದ್ದಾರೆ.

ತೆಲಂಗಾಣದ ಕರೀಂಪುರದಲ್ಲಿ ನಡೆದ ಪಕ್ಷದ ಪ್ರಚಾರ ಸಭೆಯಲ್ಲಿ ಭಾಷಣ ಮಾಡಿದ ಅವರು, ಐದು ವರ್ಷಗಳಿಂದ ಕಾಂಗ್ರೆಸ್‌ನ ಶೆಹಜಾದ (ರಾಹುಲ್‌ ಗಾಂಧಿ) ಒಂದು ಮಾತನ್ನು ಜಪಿಸುತ್ತಲೇ ಇದ್ದರು. ಅವರ ರಫೇಲ್ ವಿವಾದದ ನಂತರ ಅವರು ಹೊಸ ಜಪವನ್ನು ಪ್ರಾರಂಭಿಸಿದರು. ಹೋದಲ್ಲಿ ಬಂದಲ್ಲಿ ಐದು ಕೈಗಾರಿಕೋದ್ಯಮಿಗಳು, ಐದು ಕೈಗಾರಿಕೋದ್ಯಮಿಗಳು ಎಂದು ಹೇಳುತ್ತಿದ್ದರು. ನಂತರ ಅವರು ಅಂಬಾನಿ-ಅದಾನಿ ಎಂದು ಹೇಳಲು ಪ್ರಾರಂಭಿಸಿದರು. ಆದರೆ ಚುನಾವಣೆ ಘೋಷಣೆಯಾದಾಗಿನಿಂದ ಅವರು ಅಂಬಾನಿ ಮತ್ತು ಅದಾನಿಯನ್ನು ನಿಂದಿಸುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಪೂರ್ವ ಭಾರತದ ಜನರು ಚೀನಿಯರಂತೆ, ದಕ್ಷಿಣದ ಜನರು ಆಫ್ರಿಕನ್ನರಂತೆ ಕಾಣುತ್ತಾರೆ: ಸ್ಯಾಮ್‌ ಪಿತ್ರೋಡಾ

ಅವರು ಅಂಬಾನಿಯಿಂದ ಎಷ್ಟು ಹಣವನ್ನು ತೆಗೆದುಕೊಂಡಿದ್ದಾರೆ ಎಂಬುದನ್ನು ಅವರು ಘೋಷಿಸಬೇಕು, ನೀವು ಅಂಬಾನಿ ಮತ್ತು ಅದಾನಿಯನ್ನು ರಾತ್ರೋರಾತ್ರಿ ದುರುಪಯೋಗಪಡಿಸಿಕೊಂಡಿದ್ದೀರಾ? ಐದು ವರ್ಷಗಳ ಕಾಲ ಅವರನ್ನು ನಿಂದಿಸಿದ ನೀವು ರಾತ್ರೋರಾತ್ರಿ ನಿಂದನೆಯನ್ನು ನಿಲ್ಲಿಸಿದ್ದು ಯಾಕೆ? ಏನಾದ್ರೂ ರಹಸ್ಯ ಒಪ್ಪಂದ ನಡೆದಿದ್ಯಾ ಎಂದು ರಾಹುಲ್‌ ಗಾಂಧಿಗೆ ಪ್ರಶ್ನೆ ಕೇಳಿದರು.

ತೆಲಂಗಾಣದಿಂದ ದೆಹಲಿಯವರೆಗೆ, ‘ಡಬಲ್ ಆರ್’ (RR) ತೆರಿಗೆಯ ಬಗ್ಗೆ ಸಾಕಷ್ಟು ಮಾತನಾಡಲಾಗುತ್ತಿದೆ. RRR ಹೆಸರಿನ ತೆಲುಗು ಚಿತ್ರ ಬಿಡುಗಡೆಯಾಗಿ ಭರ್ಜರಿ ಹಿಟ್‌ ಆಯ್ತು. ಆದರೆ ಕಲೆಕ್ಷನ್‌ ವಿಚಾರದಲ್ಲಿ RRR ಸಿನಿಮಾವನ್ನು RR ತೆರಿಗೆ ಬಹಳ ಹಿಂದೆಯೇ ಹಿಂದಿಕ್ಕಿದೆ ಎಂದು ಯಾರೋ ನನಗೆ ಹೇಳಿದ್ದಾರೆ ಎನ್ನುವ ಮೂಲಕ ರೇವಂತ್‌ ರೆಡ್ಡಿ ಸರ್ಕಾರವನ್ನು ಟೀಕಿಸಿದರು.

 

ತೆಲಂಗಾಣದಲ್ಲಿ ಗೌತಮ್‌ ಅದಾನಿ ಹೂಡಿಕೆ ಮಾಡಿದ್ದಾರೆ. ರೇವಂತ್‌ ರೆಡ್ಡಿ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಗೌತಮ್‌ ಅದಾನಿ ಜೊತೆ ಒಪ್ಪಂದ ಮಾಡಿದ್ದನ್ನು ಪರೋಕ್ಷವಾಗಿ ಮೋದಿ ಪ್ರಸ್ತಾಪಿಸಿ ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  ಇದನ್ನೂ ಓದಿ: ಭಾರತದಲ್ಲಿ ಪಿತ್ರಾರ್ಜಿತ ಆಸ್ತಿ ತೆರಿಗೆ ವಿಧಿಸಿದರೆ ಅಂಬಾನಿ, ಅದಾನಿಯಂಥ ಶ್ರೀಮಂತರು ದುಬೈಗೆ ಹೋಗ್ತಾರೆ: ಆರ್ಥಶಾಸ್ತ್ರಜ್ಞ

ವಿಶ್ವ ಆರ್ಥಿಕ ವೇದಿಕೆ-2024 ರಲ್ಲಿ ತೆಲಂಗಾಣ ಸರ್ಕಾರದೊಂದಿಗೆ ಅದಾನಿ ಗ್ರೂಪ್‌ ಬಹುಕೋಟಿ ರೂಪಾಯಿ ಮೊತ್ತದ ಹೂಡಿಕೆಗೆ ಒಡಂಬಡಿಕೆ ಮಾಡಿಕೊಂಡಿತ್ತು. ಪ್ರಮುಖ ಸಂಸ್ಥೆಯಾದ ಅದಾನಿ ಎಂಟರ್‌ಪ್ರೈಸಸ್‌ನ ಹೂಡಿಕೆಯು 50 ಶತಕೋಟಿ ರೂಪಾಯಿಗಳಿಗೆ ಸ್ಥಾಪಿಸಲು 100 ಮೆಗಾವ್ಯಾಟ್ ಡೇಟಾ ಕೇಂದ್ರವನ್ನೂ ಒಳಗೊಂಡಿದೆ. ಅದಾನಿ ಗ್ರೀನ್ ಎನರ್ಜಿ, ಅಂಬುಜಾ ಸಿಮೆಂಟ್ಸ್ ಮತ್ತು ಅದಾನಿ ಡಿಫೆನ್ಸ್ ಸಿಸ್ಟಮ್ಸ್ ಮತ್ತು ಟೆಕ್ನಾಲಜೀಸ್ ರಾಜ್ಯದಲ್ಲಿ ಯೋಜನೆಗಳನ್ನು ಜಾರಿಗೆ ತರುವ ಒಪ್ಪಂದಗಳಿಗೆ ಸಹಿ ಹಾಕಿವೆ.

ಇಂಧನ ಕ್ಷೇತ್ರದಲ್ಲಿ ಅದಾನಿ ಎನರ್ಜಿ ತೆಲಂಗಾಣದಲ್ಲಿ 5 ಸಾವಿರ ಕೋಟಿ ರೂ., ಅಂಬುಜಾ ಸಿಮೆಂಟ್‌ ತಯಾರಿಕೆಗೆ 1,400 ಕೋಟಿ ರೂ. ಹೂಡಿಕೆ ಮಾಡಲಿದೆ. ಅಷ್ಟೇ ಅಲ್ಲದೇ, 1,000 ಕೋಟಿ ರೂ. ವೆಚ್ಚದಲ್ಲಿ ಡ್ರೋನ್‌ ಮತ್ತು ಕ್ಷಿಪಣಿ ವ್ಯವಸ್ಥೆ ಸಂಶೋಧನೆ, ಅಭಿವೃದ್ಧಿ ಮತ್ತು ವಿನ್ಯಾಸ ಘಟಕ ಸ್ಥಾಪಿಸುವ ಪ್ರಸ್ತಾವನೆಯೂ ಇದೆ.

 

Share This Article