ಜೂನ್‌ 8 ರಂದು ಪ್ರಮಾಣ ವಚನ – ಮೋದಿಗೂ ಸಂಖ್ಯೆ 8ಕ್ಕೂ ಏನು ಸಂಬಂಧ?

Public TV
2 Min Read

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಜೂನ್‌ 8 ರ ರಾತ್ರಿ 8 ಗಂಟೆಯ ವೇಳೆಗೆ ಮೂರನೇ ಬಾರಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ.

ಪ್ರಧಾನಿ ಮೋದಿ ಮತ್ತು ಸಂಖ್ಯೆ 8ಕ್ಕೆ (Number 8) ಅವಿನಾಭಾವ ಸಂಬಂಧವಿದೆ. ಬಹುತೇಕ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ, ಕಾರ್ಯಕ್ರಮಗಳು 8 ರಂದೇ ಆರಂಭವಾಗಿತ್ತು.

ಸಂಖ್ಯಾಶಾಸ್ತ್ರದಲ್ಲಿ 8ನೇ ಸಂಖ್ಯೆಯು ಶನಿ ಗ್ರಹವನ್ನು ಸೂಚಿಸಿದರೂ ಎಂಟನೇ ಸಂಖ್ಯೆಯು ರಾಜಯೋಗದ ಸಂಕೇತವಾಗಿದೆ. ವೈದಿಕ ಜ್ಯೋತಿಷ್ಯದಲ್ಲಿ ರಾಜ ರೀತಿಯ ಹುದ್ದೆಗಳಿಗೆ ಸಂಬಂಧಿಸಿದಂತೆ ಒಂದು ರೀತಿಯ ಮಂಗಳಕರ ಯೋಗ. ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಯನ್ನು ನ್ಯಾಯದಾತ ಎಂಬುದಾಗಿ ಪರಿಗಣಿಸಲಾಗುತ್ತದೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ ಸಾವನ್ನಪ್ಪಿದ 9 ಚಾರಣಿಗರ ಮೃತದೇಹಗಳು ಚಾರ್ಟರ್ ಫ್ಲೈಟ್ ಮೂಲಕ ಬೆಂಗಳೂರಿಗೆ: ಕೃಷ್ಣಬೈರೇಗೌಡ

2014ರ ಮೋದಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ
2014ರ ಮೋದಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ

ಸಂಖ್ಯಾಶಾಸ್ತ್ರದ ಪ್ರಕಾರ ಮೂಲಾಂಕ 8 ಆಗಿರುವಂತಹ ಜನರು ಸಾಕಷ್ಟು ಪರಿಶ್ರಮದಿಂದ ಕೆಲಸ ಮಾಡುತ್ತಾರೆ ಹಾಗೂ ಶನಿ ಕೂಡ ನ್ಯಾಯದ ಪ್ರಕಾರವಾಗಿ ಅವರ ಪರಿಶ್ರಮಕ್ಕೆ ತಕ್ಕಂತಹ ಪ್ರತಿಫಲವನ್ನು ಕರುಣಿಸುತ್ತಾನೆ. ಶನಿ ಉಚ್ಚಸ್ಥಾನದಲ್ಲಿದ್ದವರಿಗೆ ಯಶಸ್ಸು ತಡವಾಗಿ ಲಭಿಸುತ್ತದೆ. ಆದರೆ ಸಿಗುವ ಯಶಸ್ಸು ಬಹಳ ಶ್ರೇಷ್ಠ ಮಟ್ಟದಾಗಿರುತ್ತದೆ ಮತ್ತು ಶತ್ರುಗಳು ಇರುವುದಿಲ್ಲ.

ಮೋದಿ ಸರ್ಕಾರದ ದೊಡ್ಡ ನಿರ್ಧಾರಗಳಲ್ಲಿ ಒಂದಾದ ನೋಟು ನಿಷೇಧವನ್ನು (Demonetisation) ನವೆಂಬರ್ 8 ರಂದು ರಾತ್ರಿ 8 ಗಂಟೆಗೆ ಘೋಷಿಸಲಾಗಿತ್ತು. ಸೆಪ್ಟೆಂಬರ್ 26, 2015 ರಂದು ಡಿಜಿಟಲ್ ಇಂಡಿಯಾ ಡ್ರೈವ್ ಅನ್ನು ಸಹ ಪ್ರಾರಂಭಿಸಿದರು. 2 ಮತ್ತು 6 ಸಂಖ್ಯೆಗಳನ್ನು ಕೂಡಿಸಿದರೆ 8 ಆಗುತ್ತದೆ. ಇದನ್ನೂ ಓದಿ: ಸ್ಫೋಟಕ ಟ್ವಿಸ್ಟ್‌ – ಡ್ರಗ್ಸ್‌ ಪಾರ್ಟಿಯಲ್ಲಿದ್ದ ಯುವತಿಯರಿಗೆ ಪರಿಚಯವೇ ಇರಲಿಲ್ಲ!

2019 ಪ್ರಮಾಣ ವಚನ ಸ್ವೀಕಾರ ಸಮಾರಂಭ
2019 ಪ್ರಮಾಣ ವಚನ ಸ್ವೀಕಾರ ಸಮಾರಂಭ

ಮೋದಿ ಅವರು ಸೆಪ್ಟೆಂಬರ್ 17 ರಂದು ಜನಿಸಿದ್ದಾರೆ. 1 ಮತ್ತು 7 ಸಂಖ್ಯೆಗಳನ್ನು ಕೂಡಿಸಿದರೆ 8 ಬರುತ್ತದೆ. ಭಾರತಕ್ಕೆ ಸಂಖ್ಯೆ 8 ಮಹತ್ವದ್ದಾಗಿದೆ. ಭಾರತದ ಗಣರಾಜ್ಯವಾಗಿದ್ದು ಜನವರಿ 26 ರಂದು. ಇಲ್ಲೂ 2+6 ಸೇರಿಸಿದಾಗ 8 ಆಗುತ್ತದೆ. ವರ್ಷ 2024 ಕ್ಕೂ 8ಕ್ಕೂ ಸಂಬಂಧವಿದೆ. 2+0-2+4 ಸೇರಿದಾಗ 8 ಬರುತ್ತದೆ.

ಜೂನ್ 8 ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭವು ಕೇವಲ ಕಾಕತಾಳೀಯವಾಗಿರದೇ ಬಹಳ ಯೋಚನೆ ಮಾಡಿಯೇ ಮಾಡಿರಬೇಕು ಎಂಬ ವಿಶ್ಲೇಷಣೆ ಕಂಡು ಬಂದಿದೆ. ಎಂಟರಿಂದ ಧನಾತ್ಮಕವಾಗಿ ಪ್ರಭಾವಿತರಾದವರು ತುಂಬಾ ಶ್ರಮಜೀವಿಗಳಾಗಿರುತ್ತಾರೆ. ಪ್ರಯತ್ನದಿಂದ ಯಾವುದೇ ಕೆಲಸವನ್ನು ಯಶಸ್ಸುಗೊಳಿಸುತ್ತಾರೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.

 

Share This Article