ಕುಮಾರಸ್ವಾಮಿ ಮಂಡ್ಯದಲ್ಲಿ ಗೆದ್ರೆ ಚನ್ನಪಟ್ಟಣದಲ್ಲಿ ನಿಖಿಲ್ ಪ್ರತಿಷ್ಠಾಪನೆ : ಮಾಗಡಿ ಬಾಲಕೃಷ್ಣ

Public TV
1 Min Read

ರಾಮನಗರ: ಕುಮಾರಸ್ವಾಮಿ (Kumaraswamy) ಮಂಡ್ಯದಲ್ಲಿ ಗೆದ್ದರೆ ಚನ್ನಪಟ್ಟಣದಲ್ಲಿ (Channapatna) ನಿಖಿಲ್ (Nikhil Kumaraswamy) ಪ್ರತಿಷ್ಠಾಪನೆ ಮಾಡುತ್ತಾರೆ ಎಂದು ಮಾಗಡಿಯಲ್ಲಿ ಶಾಸಕ ಹೆಚ್.ಸಿ.ಬಾಲಕೃಷ್ಣ (Balakrishna) ಹೇಳಿಕೆ ನೀಡಿದ್ದಾರೆ.

ಕುಮಾರಸ್ವಾಮಿ ಚನ್ನಪಟ್ಟಣ ಬಿಟ್ಟು ಮಂಡ್ಯದಿಂದ (Mandya) ಸ್ಪರ್ಧೆ ಮಾಡಿದರೆ ಚನ್ನಪಟ್ಟಣದಲ್ಲಿ ನಿಖಿಲ್ ನಿಲ್ಲಿಸಬೇಕು ಎಂದು ಹೆಚ್‌ಡಿಕೆಗೆ ಅವರ ಹೋಂ ಮಿನಿಸ್ಟರ್ ಆದೇಶ ಆಗಿದೆ ಎಂದು ಹೇಳಿದರು. ಇದನ್ನೂ ಓದಿ: ಹೆಚ್‌ಡಿಕೆ, ಪ್ರಜ್ವಲ್‌ ರೇವಣ್ಣ, ಮಲ್ಲೇಶ್‌ ಬಾಬು – ಜೆಡಿಎಸ್‌ನಿಂದ ಲೋಕಸಭೆಗೆ ಕಣಕ್ಕೆ

 

ಚನ್ನಪಟ್ಟಣದಲ್ಲಿ ನಿಖಿಲ್ ನಿಲ್ಲಿಸುವ ಬಗ್ಗೆ ಮಾಹಿತಿ ಇದೆ. ಅವರ ಮನೆಯಲ್ಲಿ ಏನು ನಡೆಯುತ್ತೆ ಅನ್ನೋದು ಗೊತ್ತಾಗುತ್ತೆ. ಇವರನ್ನ ಒದ್ದು ಓಡಿಸೋಣ ಅಂತ ಅವರು, ಅವರನ್ನ ಒದ್ದು ಓಡಿಸೋಣ ಅಂತ ಇವರು ನಿಂತಿದ್ದಾರೆ. ಕೊನೆಗೆ ಕಾರ್ಯಕರ್ತರ ಕಥೆ ಏನಾಗುತ್ತೋ ಗೊತ್ತಿಲ್ಲ. ಇವರೇನೋ ಎಲ್ಲೋ ಹೋಗಿ ಅಡ್ಜಸ್ಟ್ ಆಗ್ತಾರೆ ಆದ್ರೆ ಕಾರ್ಯಕರ್ತರ ಕಥೆ ಏನು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಗಡ್ಡ ತೆಗೆದ ಸೀಕ್ರೆಟ್ ಬಿಚ್ಚಿಟ್ಟ ಕೆ.ಸುಧಾಕರ್

 

ಕಾರ್ಯಕರ್ತರು ನಿಜವಾಗಿಯೂ ಬಲಿಪಶು ಆಗುತ್ತಾರೆ. ಈಗಲೇ ಚನ್ನಪಟ್ಟಣ ಜೆಡಿಎಸ್ (JDS) ಕಾರ್ಯಕರ್ತರು ಎಚ್ಚೆತ್ತುಕೊಳ್ಳಬೇಕು.  ಉಪ ಚುನಾವಣೆ ನಡೆದರೆ ಯೋಗೇಶ್ವರ್‌ಗೆ ಟಿಕೆಟ್ ಸಿಗಲ್ಲ. ಈಗಲೇ ಅವರ ಕಾರ್ಯಕರ್ತರು ಕಾಂಗ್ರೆಸ್ ಬರಬೇಕು. ನಿಮ್ಮ ನಾಯಕರು ಬಂದರೂ ಒಳ್ಳೆಯದೇ. ಈಗಲೇ ಬಂದರೆ ನಿಮ್ಮಲ್ಲೇ ಯಾರಾದ್ರೂ ಎಂಎಲ್ಎ ಆಗಬಹುದು ಎಂದು ಪರೋಕ್ಷವಾಗಿ ಸಿ.ಪಿ.ಯೋಗೇಶ್ವರ್ ಗೆ ಶಾಸಕ ಹೆಚ್.ಸಿ.ಬಾಲಕೃಷ್ಣ ಆಹ್ವಾನ ನೀಡಿದ್ದಾರೆ.

Share This Article