ಕರ್ನೂರು ಚೆಕ್‍ಪೋಸ್ಟ್ ಬಳಿ ಬೈಕ್‍ನಲ್ಲಿ ಸಾಗಿಸುತ್ತಿದ್ದ 25 ಲಕ್ಷ ರೂ. ಸೀಜ್

Public TV
1 Min Read

ಬೆಂಗಳೂರು: ಹೊಸೂರು ಸಮೀಪದ ಕರ್ನೂರು ಚೆಕ್‍ಪೋಸ್ಟ್ (Karnoor Checkpost‌) ಬಳಿ ಸೂಕ್ತ ದಾಖಲೆಗಳಿಲ್ಲದೇ ಬೈಕ್‍ನಲ್ಲಿ ಸಾಗಿಸುತ್ತಿದ್ದ 25 ಲಕ್ಷ ರೂ. ಹಣವನ್ನು (Money) ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಹೊಸೂರಿನಿಂದ ಕರ್ನೂರು ಮಾರ್ಗವಾಗಿ ರಾಜೇಂದ್ರನ್ ಎಂಬವರು ಬೈಕ್‍ನಲ್ಲಿ ಹಣ ತರುತ್ತಿದ್ದರು. ಈ ವೇಳೆ ಅಧಿಕಾರಿಗಳು ಬೈಕ್ ತಡೆದು ಬ್ಯಾಗ್ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ಸೂಕ್ತ ದಾಖಲೆಗಳಿಲ್ಲದೇ ಇರುವ 25 ಲಕ್ಷ ರೂ. ಹಣ ಪತ್ತೆಯಾಗಿದ್ದು, ಅಧಿಕಾರಿಗಳು ಹಣವನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಬೀದಿಬದಿ ವ್ಯಾಪಾರಿಗಳ ಮೇಲೆ ಪೊಲೀಸ್ ದರ್ಪ- ಸೊಪ್ಪನ್ನ ರಸ್ತೆಗೆ ಚೆಲ್ಲಿ ವಿಕೃತಿ!

ಇತ್ತೀಚೆಗೆ ಬಳ್ಳಾರಿಯ ಬ್ರೂಸ್ ಪೇಟೆಯಲ್ಲೂ ದಾಖಲೆ ಇಲ್ಲದ 5.60 ಕೋಟಿ ರೂ. ನಗದು ಮತ್ತು ಅಪಾರ ಪ್ರಮಾಣದ ಚಿನ್ನ, ಬೆಳ್ಳಿ ಆಭರಣಗಳನ್ನು ಪೊಲೀಸರು (Police) ಜಪ್ತಿ ಮಾಡಿಕೊಂಡಿದ್ದರು. ಒಟ್ಟು 5.60 ಕೋಟಿ ರೂ. ನಗದು, 3 ಕೆಜಿ ಬಂಗಾರ 103 ಕೆಜಿ ಬೆಳ್ಳಿ ಆಭರಣ, 21 ಕೆಜಿ ಕಚ್ಚಾ ಬೆಳ್ಳಿಯನ್ನು ಪೊಲೀಸರು ಜಪ್ತಿ ಮಾಡಿದ್ದರು. ಜಪ್ತಿ ಮಾಡಿದ ನಗದು ಹವಾಲಾಕ್ಕೆ ಸಂಬಂಧಿಸಿದ ಹಣ ಎನ್ನಲಾಗಿತ್ತು. ಪ್ರಕರಣ ಸಂಬಂಧ ಆರೋಪಿ ನರೇಶ್ ಎಂಬಾತನನ್ನ ವಶಕ್ಕೆ ಪಡೆದಿದ್ದರು.

ಚುನಾವಣೆಯಲ್ಲಿ (Lok Sabha Election 2024) ಅಕ್ರಮ ನಡೆಯದಂತೆ, ಚುನಾವಣೆ ಘೋಷಣೆಯಾದ ಬಳಿಕ ಅಧಿಕಾರಿಗಳು ವಾಹನ ತಪಾಸಣೆ ಹಾಗೂ ಇನ್ನಿತರೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಇತ್ತೀಚೆಗೆ ಕೋಲಾರ ಗಡಿಯಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಸಿಎಂ ಕಾರನ್ನು ಸಹ ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದ್ದರು. ಇದನ್ನೂ ಓದಿ: 3 ದಿನದಲ್ಲಿ ಸತತ 36 ಗಂಟೆ ವೀಡಿಯೋ ಕಾಲ್‌ – ಸೈಬರ್‌ ವಂಚನೆಗೆ ಸಿಕ್ಕಿ 15 ಲಕ್ಷ ರೂ. ಕಳೆದುಕೊಂಡ ಮಹಿಳೆ

Share This Article