ರಾಮನವಿಯಂದು ಕೇಸರಿ ಶಾಲು,ರಾಮನ ಬಾವುಟ ಹಿಡಿದು ಕೆರಗೋಡಿಗೆ ಹೆಚ್‌ಡಿಕೆ ಭೇಟಿ

Public TV
1 Min Read

ಮಂಡ್ಯ: ರಾಮನವಮಿಯಂದು (Rama Navami) ದೋಸ್ತಿ ಪಕ್ಷದ ಲೋಕಸಭಾ ಅಭ್ಯರ್ಥಿ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಕೆರಗೋಡು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಜೊತೆ ಮಾತನಾಡಿದ್ದಾರೆ.

ಹನುಮ ಧ್ವಜ (Hanuma Dhwaja) ತೆರವು ಮಾಡಿದ್ದಕ್ಕೆ ಕೆರಗೋಡು (Keragodu) ದೇಶಾದ್ಯಂತ ಸುದ್ದಿಯಾಗಿತ್ತು. ಇಂದು ಕುಮಾರಸ್ವಾಮಿ ಕೇಸರಿ ಶಾಲು ಧರಿಸಿ ಗ್ರಾಮಕ್ಕೆ ಭೇಟಿ ನೀಡಿದ ಅವರು ಹನುಮ ದೇವಸ್ಥಾನಕ್ಕೆ (Hanuma Temple) ಪೂಜೆ ಸಲ್ಲಿಸಿ ಜನರ ಸಮಸ್ಯೆ ಆಲಿಸಿದರು. ಇದನ್ನೂ ಓದಿ: ಲೋಕಸಭೆ ಚುನಾವಣೆಗಳು ಭಾರತದಲ್ಲಿ ನಡೆದಿದ್ದೆಷ್ಟು ದಿನ?

 

ರಾಮನ ಬಾವುಟ ಕೈಯಲ್ಲಿ ಹಿಡಿದು ಪ್ರದರ್ಶಿಸಿದ ಕುಮಾರಸ್ವಾಮಿ ಅವರನ್ನು ಕಂಡು ಜನರ ಹರ್ಷೋದ್ಘಾರ ಮಾಡಿ ಸ್ವಾಗತಿಸಿದರು. ಜೆಡಿಎಸ್‌, ಬಿಜೆಪಿಯ (JDS, BJP) ನೂರಾರು ಕಾರ್ಯಕರ್ತರು ಬೈಕ್‌ ರ‍್ಯಾಲಿ ಮೂಲಕ ಕುಮಾರಸ್ವಾಮಿ ಬರಮಾಡಿಕೊಂಡರು. ಗ್ರಾಮಕ್ಕೆ ಬಂದ ಹೆಚ್‌ಡಿಕೆಗೆ ಮಹಿಳೆಯರು ಪೂರ್ಣಕುಂಭ ಸ್ವಾಗತ ನೀಡಿದರು. ಇದನ್ನೂ ಓದಿ: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮಹಿಳೆಯರ ಖಾತೆಗೆ ವರ್ಷಕ್ಕೆ 1.24ಲಕ್ಷ ರೂ. ಜಮೆ: ರಾಹುಲ್ ಘೋಷಣೆ

ಹೆಚ್‌ಡಿಕೆ ಭಾಷಣದ ವೇಳೆ ಗ್ರಾಮಸ್ಥರು ನೋವು ಹೇಳಿಕೊಂಡರು. ಒಬ್ಬೊಬ್ಬರ ಮೇಲೆ ಹತ್ತತ್ತು ಕೇಸ್ ದಾಖಲಿಸಲಾಗಿದೆ. ದಯವಿಟ್ಟು ಪ್ರಕರಣಗಳನ್ನು ತೆಗೆಯಬೇಕು ಎಂದು ಮನವಿ ಮಾಡಿದರು. ಈ ವೇಳೆ ಕೇಸ್ ತೆಗೆಸುವ ಜವಬ್ದಾರಿ ನನ್ನದು. ಕೆರಗೋಡು ಗ್ರಾಮಸ್ಥರ ಭಾವನೆಗಳನ್ನ ಗೌರವಿಸಿ, ಸರ್ಕಾರದಿಂದಲೇ ಆದೇಶ ಮಾಡಿಸುತ್ತೇನೆ ಎಂದು ಹೆಚ್‌ಡಿಕೆ ಭರವಸೆ ನೀಡಿದರು.

 

Share This Article