ಕಾಂಗ್ರೆಸ್‌ನವರದ್ದು ಗೂಂಡಾ ಸಂಸ್ಕೃತಿ, ನಮ್ಮ ಕಾರ್ಯಕರ್ತರ ವಾಹನ ತಡೆದಿದ್ದಾರೆ: ಜೋಶಿ ಕಿಡಿ

By
1 Min Read

ಧಾರವಾಡ: ಕಾಂಗ್ರೆಸ್‌ನವರದ್ದು (Congress) ಗೂಂಡಾ ಸಂಸ್ಕೃತಿ. ಕಾಂಗ್ರೆಸ್ ಪಾರ್ಟಿಯಿಂದ ಪ್ರೇರಣೆ ಮತ್ತು ಕುಮ್ಮಕ್ಕಿನಿಂದ ನಮ್ಮ ಕಾರ್ಯಕರ್ತರ ವಾಹನಗಳನ್ನು ತಡೆಹಿಡಿದಿದ್ದಾರೆ ಎಂದು ಧಾರವಾಡ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ (Pralhad Joshi) ಆರೋಪಿಸಿದ್ದಾರೆ.

- Advertisement -

ಹುಬ್ಬಳ್ಳಿಯಲ್ಲಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ನಾಮಪತ್ರ ಮೆರವಣಿಗೆಯಲ್ಲಿ ಭಾಗವಹಿಸಲು ಬರುತ್ತಿದ್ದ ನಮ್ಮ ಕಾರ್ಯಕರ್ತರ ವಾಹನಗಳನ್ನು ತಡೆಹಿಡಿಲಾಗಿತ್ತು. ಕೆಳಮಟ್ಟದ ಅವರ ಅಧಿಕಾರಿಗಳನ್ನು ಬಳಸಿಕೊಂಡು ಕಾಂಗ್ರೆಸ್ ಈ ರೀತಿಯಲ್ಲಿ ಮಾಡಿದ್ದರು. ಇದನ್ನು ಲೆಕ್ಕಿಸದೇ ನಮ್ಮ ಮೆರವಣಿಗೆಗೆ ಕಾರ್ಯಕರ್ತರು ಬಂದಿದ್ದರು ಎಂದು ಹೇಳಿದರು. ಇದನ್ನೂ ಓದಿ: ಕರುನಾಡಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚಿನ ಮಳೆ ಸಾಧ್ಯತೆ

- Advertisement -

 

- Advertisement -

ಕಾಂಗ್ರೆಸ್ ಪಾರ್ಟಿಯಲ್ಲಿ ಒಗ್ಗಟ್ಟು ಇಲ್ಲ. ಗುಂಪು ರಾಜಕೀಯ ಇದೆ. ಯಾರೇ ಆಗಲಿ ಸಿದ್ಧಾಂತಿಕವಾಗಿ ಟೀಕೆ ಮಾಡಬೇಕು ಹೊರತು ವೈಯಕ್ತಿಕವಾಗಿ ಟೀಕೆ ಮಾಡಬಾರದು. ಇಂದು ದೇವೇಗೌಡರ (Deve Gowda) ಕುಟುಂಬದ ಆಸ್ತಿಯ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರು ಈ ಹಿಂದೆ ದೇವೇಗೌಡರ ಕಾಲಿಗೆ ಬಿದ್ದು ಕುಮಾರಸ್ವಾಮಿ (HD Kumaraswamy) ಅವರನ್ನು ಯಾಕೆ ಸಿಎಂ ಮಾಡಿದರು ಎಂದು ಪ್ರಶ್ನೆ ಮಾಡಿದರು.

- Advertisement -

ಎಲ್ಲಾ ಸರ್ವೆಗಳಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌ ಎರಡು ಮೂರು ಸೀಟ್ ಗೆದ್ದರೆ ಜಾಸ್ತಿ ಎಂಬ ಫಲಿತಾಂಶ ಬಂದಿದೆ. ಇದರಿಂದ ಕಾಂಗ್ರೆಸ್‌ ಹತಾಶೆಗೊಂಡಿದೆ ಎಂದರು. ಇದನ್ನೂ ಓದಿ: ಭಾಗ್ಯಗಳನ್ನು ಕೊಟ್ಟು ರಾಜ್ಯವನ್ನ ದುಸ್ಥಿತಿಗೆ ತಂದರು: ಕಾಂಗ್ರೆಸ್ ವಿರುದ್ಧ ಸಿ.ಸಿ.ಪಾಟೀಲ ಕಿಡಿ

 

Share This Article