ಕಾಂಗ್ರೆಸ್‌ನವರದ್ದು ಗೂಂಡಾ ಸಂಸ್ಕೃತಿ, ನಮ್ಮ ಕಾರ್ಯಕರ್ತರ ವಾಹನ ತಡೆದಿದ್ದಾರೆ: ಜೋಶಿ ಕಿಡಿ

Public TV
1 Min Read

ಧಾರವಾಡ: ಕಾಂಗ್ರೆಸ್‌ನವರದ್ದು (Congress) ಗೂಂಡಾ ಸಂಸ್ಕೃತಿ. ಕಾಂಗ್ರೆಸ್ ಪಾರ್ಟಿಯಿಂದ ಪ್ರೇರಣೆ ಮತ್ತು ಕುಮ್ಮಕ್ಕಿನಿಂದ ನಮ್ಮ ಕಾರ್ಯಕರ್ತರ ವಾಹನಗಳನ್ನು ತಡೆಹಿಡಿದಿದ್ದಾರೆ ಎಂದು ಧಾರವಾಡ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ (Pralhad Joshi) ಆರೋಪಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ನಾಮಪತ್ರ ಮೆರವಣಿಗೆಯಲ್ಲಿ ಭಾಗವಹಿಸಲು ಬರುತ್ತಿದ್ದ ನಮ್ಮ ಕಾರ್ಯಕರ್ತರ ವಾಹನಗಳನ್ನು ತಡೆಹಿಡಿಲಾಗಿತ್ತು. ಕೆಳಮಟ್ಟದ ಅವರ ಅಧಿಕಾರಿಗಳನ್ನು ಬಳಸಿಕೊಂಡು ಕಾಂಗ್ರೆಸ್ ಈ ರೀತಿಯಲ್ಲಿ ಮಾಡಿದ್ದರು. ಇದನ್ನು ಲೆಕ್ಕಿಸದೇ ನಮ್ಮ ಮೆರವಣಿಗೆಗೆ ಕಾರ್ಯಕರ್ತರು ಬಂದಿದ್ದರು ಎಂದು ಹೇಳಿದರು.  ಇದನ್ನೂ ಓದಿ: ಕರುನಾಡಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚಿನ ಮಳೆ ಸಾಧ್ಯತೆ

 

ಕಾಂಗ್ರೆಸ್ ಪಾರ್ಟಿಯಲ್ಲಿ ಒಗ್ಗಟ್ಟು ಇಲ್ಲ. ಗುಂಪು ರಾಜಕೀಯ ಇದೆ. ಯಾರೇ ಆಗಲಿ ಸಿದ್ಧಾಂತಿಕವಾಗಿ ಟೀಕೆ ಮಾಡಬೇಕು ಹೊರತು ವೈಯಕ್ತಿಕವಾಗಿ ಟೀಕೆ ಮಾಡಬಾರದು. ಇಂದು ದೇವೇಗೌಡರ (Deve Gowda) ಕುಟುಂಬದ ಆಸ್ತಿಯ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರು ಈ ಹಿಂದೆ ದೇವೇಗೌಡರ ಕಾಲಿಗೆ ಬಿದ್ದು ಕುಮಾರಸ್ವಾಮಿ (HD Kumaraswamy) ಅವರನ್ನು ಯಾಕೆ ಸಿಎಂ ಮಾಡಿದರು ಎಂದು ಪ್ರಶ್ನೆ ಮಾಡಿದರು.

ಎಲ್ಲಾ ಸರ್ವೆಗಳಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌ ಎರಡು ಮೂರು ಸೀಟ್ ಗೆದ್ದರೆ ಜಾಸ್ತಿ ಎಂಬ ಫಲಿತಾಂಶ ಬಂದಿದೆ. ಇದರಿಂದ ಕಾಂಗ್ರೆಸ್‌ ಹತಾಶೆಗೊಂಡಿದೆ ಎಂದರು. ಇದನ್ನೂ ಓದಿ: ಭಾಗ್ಯಗಳನ್ನು ಕೊಟ್ಟು ರಾಜ್ಯವನ್ನ ದುಸ್ಥಿತಿಗೆ ತಂದರು: ಕಾಂಗ್ರೆಸ್ ವಿರುದ್ಧ ಸಿ.ಸಿ.ಪಾಟೀಲ ಕಿಡಿ

 

Share This Article