Exit Polls | ಮೋದಿ ಹ್ಯಾಟ್ರಿಕ್‌ – 350ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎನ್‌ಡಿಎ

Public TV
1 Min Read
modi victory win bjp

ನವದೆಹಲಿ: ಬಿಜೆಪಿ (BJP) ನೇತೃತ್ವದ ಎನ್‌ಡಿಎ (NDA) ಮತ್ತೆ ಅಧಿಕಾರಕ್ಕೆ ಏರಲಿದ್ದು ಮೂರನೇ ಬಾರಿ ನರೇಂದ್ರ ಮೋದಿ (Narendra Modi) ಅಧಿಕಾರಕ್ಕೆ ಏರಲಿದ್ದಾರೆ ಎಂದು ಚುನಾಣೋತ್ತರ ಸಮೀಕ್ಷೆ (Exit Polls) ಭವಿಷ್ಯ ನುಡಿದಿವೆ.

ಇಂಡಿಯಾ ನ್ಯೂಸ್‌ ಎನ್‌ಡಿಎಗೆ 371 ಸ್ಥಾನ ನೀಡಿದರೆ INDIA ಒಕ್ಕೂಟಕ್ಕೆ 125, ಇತರರಿಗೆ 47 ಸ್ಥಾನ ನೀಡಿವೆ. ಪಿ ಮಾರ್ಕ್‌ ಎನ್‌ಡಿಗೆ 359 ಸ್ಥಾನ, INDIA ಒಕ್ಕೂಟಕ್ಕೆ 154, ಇತರರಿಗೆ 30 ಸ್ಥಾನ ನೀಡಿದೆ.

ಮಾಟ್ರಿಜ್‌ ಎನ್‌ಡಿಎಗೆ 353-368, INDIA ಒಕ್ಕೂಟಕ್ಕೆ 118-133, ಇತರರಿಗೆ 30 ಸ್ಥಾನ ನೀಡಿದೆ.

2019ರ ಚುನಾವಣೆಯಲ್ಲಿ ಬಿಜೆಪಿ 303 ಪಡೆದರೆ ಎನ್‌ಡಿಎ 353 ಸ್ಥಾನ ಗೆದ್ದುಕೊಂಡಿತ್ತು. ಕಾಂಗ್ರೆಸ್‌ 52 , ಯುಪಿಎ 91 ಸ್ಥಾನ ಗೆದ್ದುಕೊಂಡಿತ್ತು.

 

Share This Article