NDA 398, INDIA 130 ಸ್ಥಾನ – ಟೈಮ್ಸ್‌ ನೌ ಸಮೀಕ್ಷೆ

Public TV
1 Min Read

ನವದೆಹಲಿ: ಈಗ ದೇಶದಲ್ಲಿ ಲೋಕಸಭಾ ಚುನಾವಣೆ (Lok Sabha Election) ನಡೆದರೆ ಬಿಜೆಪಿ (BJP) ನೇತೃತ್ವದ ಎನ್‌ಡಿಎಗೆ (NDA) 358-398 ಸ್ಥಾನ ಸಿಗಲಿದೆ ಟೈಮ್ಸ್‌ನೌ ವಾಹಿನಿ ನಡೆಸಿದ ಸಮೀಕ್ಷೆ ತಿಳಿಸಿದೆ.

INDIA ಒಕ್ಕೂಟಕ್ಕೆ 110-130, ವೈಎಸ್‌ಆರ್‌ಸಿಪಿ 21-22, ಬಿಜೆಡಿ 10-11, ಇತರರು 11-15 ಸ್ಥಾನ ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದಿದೆ. ಇದನ್ನೂ ಓದಿ: ಬೆಂಗಳೂರು ಗ್ರಾಮಾಂತರದಿಂದ ಡಿಕೆಸು ಅಖಾಡಕ್ಕೆ – ಯಾರಾಗ್ತಾರೆ ಎದುರಾಳಿ?

2019ರ ಚುನಾವಣೆಯಲ್ಲಿ ಎನ್‌ಡಿಎ 303, INDIA ಒಕ್ಕೂಟ 116, ಇತರರು 44 ಸ್ಥಾನವನ್ನು ಗೆದ್ದಿದ್ದರು. ಒಟ್ಟು 543 ಕ್ಷೇತ್ರಗಳಿಗೆ ಲೋಕಸಭಾ ಚುನಾವಣೆ ನಡೆಯಲಿದೆ.

ಕರ್ನಾಟಕದಲ್ಲಿ ಎಷ್ಟು?
ಬಿಜೆಪಿ 21-23, ಕಾಂಗ್ರೆಸ್‌ (Congress) 4-6, ಜೆಡಿಎಸ್‌ 1-2 ಸ್ಥಾನ ಗೆಲ್ಲಬಹುದು ಎಂದು ಹೇಳಿದೆ. 2019ರ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನವನ್ನು ಗೆದ್ದರೆ, ಬೆಂಗಳೂರು ಗ್ರಾಮಾಂತರದಿಂದ ಡಿಕೆ ಸುರೇಶ್‌, ಹಾಸನದಿಂದ ಜೆಡಿಎಸ್‌ನ ಪ್ರಜ್ವಲ್‌ ರೇವಣ್ಣ, ಮಂಡ್ಯದಿಂದ ಸುಮಲತಾ ಗೆದ್ದಿದ್ದರು.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 22 ಸ್ಥಾನಗಳನ್ನು ಗೆಲ್ಲುವ ಮೂಲಕ ಟಿಎಂಸಿ ಕೋಟೆಯನ್ನು ಛಿದ್ರ ಮಾಡಲಿದೆ. ಗುಜರಾತ್‌, ಮಧ್ಯಪ್ರದೇಶ, ರಾಜಸ್ಥಾನಗಳು ಸಂಪೂರ್ಣವಾಗಿ ಎನ್‌ಡಿಎ ಗೆಲ್ಲಲಿದೆ. ದಕ್ಷಿಣ ಭಾರತದ ಐದು ರಾಜ್ಯಗಳಲ್ಲಿ INDA ಒಕ್ಕೂಟ 65 ಸ್ಥಾನಗಳಿಸಲಿದೆ ಎಂದು ಹೇಳಿದೆ.

ಈ ಬಾರಿ 400 ಸ್ಥಾನ ಗೆಲ್ಲಬೇಕು ಎಂದು ಬಿಜೆಪಿ ಘೋಷಣೆ ಮೊಳಗಿಸುತ್ತಿದ್ದರೂ 400 ಸ್ಥಾನಗಳನ್ನು ಎನ್‌ಡಿಎ ಗಳಿಸುವುದು ಕಷ್ಟ ಎಂದು ಸಮೀಕ್ಷೆ ತಿಳಿಸಿದೆ.

Share This Article