ಲೋಕಸಭಾ ಚುನಾವಣೆಗೆ ಸಿದ್ಧತೆ – ಬಳ್ಳಾರಿಯಲ್ಲಿ ಸೋತ ಶ್ರೀರಾಮುಲುಗೆ ಬಿಗ್ ಶಾಕ್: ಯಾವ ಜಿಲ್ಲೆಗೆ ಯಾರು ಉಸ್ತುವಾರಿ?

Public TV
3 Min Read

ಬೆಂಗಳೂರು: ಲೋಕಸಭೆ ಚುನಾವಣೆಗೆ ಬಿಜೆಪಿ ಭರ್ಜರಿ ಸಿದ್ಧತೆ ನಡೆಸುತ್ತಿದ್ದು, 28 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ಉಸ್ತುವಾರಿಗಳು, ಸಂಚಾಲಕರನ್ನು ನೇಮಕಗೊಳಿಸಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.

ಆಯಾ ಜಿಲ್ಲೆಗಳಲ್ಲಿ ಹಿಡಿತ ಇರುವರರಿಗೆ ಲೋಕಸಭಾ ಚುನಾವಣೆ ಉಸ್ತುವಾರಿಯನ್ನು ನೀಡದೇ ಜಿಲ್ಲೆಯ ಸಮೀಪದ ನಾಯಕರಿಗೆ ನೀಡಲಾಗಿದೆ. ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ಸಹೋದರಿ ಶಾಂತ ಸೋತ ಹಿನ್ನೆಲೆಯಲ್ಲಿ ಶ್ರೀ ರಾಮುಲುಗೆ ಬಿಗ್ ಶಾಕ್ ಸಿಕ್ಕಿದ್ದು, ಅವರನ್ನು ಕೊಪ್ಪಳ ಉಸ್ತುವಾರಿಯನ್ನಾಗಿ ನೇಮಕಗೊಳಿಸಲಾಗಿದೆ. ಉಪಚುನಾವಣೆ ವೇಳೆ ಲಿಂಗಾಯತ ಮತಗಳು ಕೈಕೊಟ್ಟ ಹಿನ್ನೆಲೆಯಲ್ಲಿ ಬಳ್ಳಾರಿ ಉಸ್ತುವಾರಿಯಾಗಿ ಜಗದೀಶ್ ಶೆಟ್ಟರ್ ಅವರನ್ನು ನೇಮಕಗೊಳಿಸಲಾಗಿದೆ ಎನ್ನಲಾಗಿದೆ.

ಸಿದ್ದರಾಮಯ್ಯ ತವರು ಮೈಸೂರಿಗೆ ಈಶ್ವರಪ್ಪ, ಬೆಂಗಳೂರು ದಕ್ಷಿಣಕ್ಕೆ ಕೆಲ ದಿನಗಳ ಹಿಂದೆ ನಿಧನರಾಗಿದ್ದ ಅನಂತಕುಮಾರ್ ಆಪ್ತ ಸುಬ್ಬನರಸಿಂಹ ಅವರನ್ನು ನೇಮಕಗೊಳಿಸಲಾಗಿದೆ.

ಯಾವ ಕ್ಷೇತ್ರಕ್ಕೆ ಯಾರು ಉಸ್ತುವಾರಿ?

ಮೈಸೂರು-ಕೊಡಗು : ಉಸ್ತುವಾರಿ – ಕೆಎಸ್ ಈಶ್ವರಪ್ಪ, ಸಂಚಾಲಕ – ಎನ್‍ವಿ ಘಣೀಶ್
ಚಾಮರಾಜನಗರ : ಉಸ್ತುವಾರಿ – ಎಲ್. ನಾಗೇಂದ್ರ, ಸಂಚಾಲಕ – ಬಾಲಸುಬ್ರಹ್ಮಣ್ಯ
ಮಂಡ್ಯ : ಉಸ್ತುವಾರಿ – ಇ. ಅಶ್ವತ್ಥ್ ನಾರಾಯಣ್, ಸಂಚಾಲಕ – ಮಧು ಚಂದನ್

ಹಾಸನ : ಉಸ್ತುವಾರಿ – ಸಿ.ಟಿ. ರವಿ, ಸಂಚಾಲಕ – ರೇಣುಕುಮಾರ್
ದಕ್ಷಿಣ ಕನ್ನಡ : ಉಸ್ತುವಾರಿ – ಸುನಿಲ್ ಕುಮಾರ್, ಸಂಚಾಲಕ – ಗೋಪಾಲಕೃಷ್ಣ ಹೇರಳೆ
ಉಡುಪಿ-ಚಿಕ್ಕಮಗಳೂರು : ಉಸ್ತುವಾರಿ – ಅರಗ ಜ್ಞಾನೇಂದ್ರ, ಸಂಚಾಲಕ – ಕೋಟಾ ಶ್ರೀನಿವಾಸ ಪೂಜಾರಿ

ಶಿವಮೊಗ್ಗ : ಉಸ್ತುವಾರಿ – ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಚಾಲಕ – ಹರತಾಳ ಹಾಲಪ್ಪ

ಉತ್ತರ ಕನ್ನಡ : ಉಸ್ತುವಾರಿ – ಲಿಂಗರಾಜ್ ಪಾಟೀಲ, ಸಂಚಾಲಕ – ವಿನೋದ್ ಪ್ರಭು
ಹಾವೇರಿ :  ಉಸ್ತುವಾರಿ – ಬಸವರಾಜ್ ಬೊಮ್ಮಾಯಿ, ಸಂಚಾಲಕ – ಸಿದ್ದರಾಜ್ ಕಲಕೋಟೆ

ಧಾರವಾಡ : ಉಸ್ತುವಾರಿ – ಗೋವಿಂದ ಕಾರಜೋಳ, ಸಂಚಾಲಕ – ಡಾ. ಮಾ. ನಾಗರಾಜ್
ಬೆಳಗಾವಿ : ಉಸ್ತುವಾರಿ – ಮಹಾಂತೇಶ ಕವಟಗಿಮಠ, ಸಂಚಾಲಕ – ಈರಣ್ಣ ಕಡಾಡಿ
ಚಿಕ್ಕೋಡಿ : ಉಸ್ತುವಾರಿ – ಸಂಜಯ್ ಪಾಟೀಲ್, ಸಂಚಾಲಕ – ಶಶಿಕಾಂತ ನಾಯಕ್

ಬಾಗಲಕೋಟೆ : ಉಸ್ತುವಾರಿ – ಸಿ.ಸಿ. ಪಾಟೀಲ್, ಸಂಚಾಲಕ – ವೀರಣ್ಣ ಚರಂತಿಮಠ
ವಿಜಯಪುರ : ಉಸ್ತುವಾರಿ – ಲಕ್ಷ್ಮಣ ಸವದಿ, ಸಂಚಾಲಕ – ಅರುಣ್ ಶಹಾಪುರ
ಬೀದರ್ : ಉಸ್ತುವಾರಿ – ಅಮರನಾಥ ಪಾಟೀಲ, ಸಂಚಾಲಕ – ಸುಭಾಷ್ ಕಲ್ಲೂರ

ಕಲಬುರಗಿ : ಉಸ್ತುವಾರಿ – ಎನ್. ರವಿಕುಮಾರ್, ಸಂಚಾಲಕ – ಮಾಲೀಕಯ್ಯ ಗುತ್ತೇದಾರ
ರಾಯಚೂರು : ಉಸ್ತುವಾರಿ – ಹಾಲಪ್ಪ ಆಚಾರ್, ಸಂಚಾಲಕ – ರಮಾನಂದ ಯಾದವ್
ಕೊಪ್ಪಳ : ಉಸ್ತುವಾರಿ-ಬಿ. ಶ್ರೀರಾಮುಲು, ಸಂಚಾಲಕ – ಅಪ್ಪಣ್ಣ ಪದಕಿ

ಬಳ್ಳಾರಿ : ಉಸ್ತುವಾರಿ – ಜಗದೀಶ್ ಶೆಟ್ಟರ್, ಸಂಚಾಲಕ – ಮೃತ್ಯುಂಜಯ ಜಿನಗಾ
ದಾವಣಗೆರೆ : ಉಸ್ತುವಾರಿ – ಆಯನೂರು ಮಂಜುನಾಥ, ಸಂಚಾಲಕ – ಜೀವನಮೂರ್ತಿ
ಚಿತ್ರದುರ್ಗ : ಉಸ್ತುವಾರಿ -ವೈ. ಎ. ನಾರಾಯಣಸ್ವಾಮಿ, ಸಂಚಾಲಕ – ಟಿ.ಜಿ. ನರೇಂದ್ರನಾಥ್

ತುಮಕೂರು : ಉಸ್ತುವಾರಿ – ಅರವಿಂದ ಲಿಂಬಾವಳಿ, ಸಂಚಾಲಕ-ಬೆಟ್ಟಸ್ವಾಮಿ
ಬೆಂಗಳೂರು ಗ್ರಾಮಾಂತರ : ಉಸ್ತುವಾರಿ-ಅಶ್ವಥ್‍ನಾರಾಯಣ, ಸಂಚಾಲಕ – ತುಳಸಿ ಮುನಿರಾಜಗೌಡ
ಚಿಕ್ಕಬಳ್ಳಾಪುರ : ಉಸ್ತುವಾರಿ – ವಿ. ಸೋಮಣ್ಣ, ಸಂಚಾಲಕ – ಎಸ್.ಆರ್. ವಿಶ್ವನಾಥ್

ಕೋಲಾರ : ಉಸ್ತುವಾರಿ – ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಸಂಚಾಲಕ – ವೈ. ಸಂಪಂಗಿ
ಬೆಂಗಳೂರು ದಕ್ಷಿಣ : ಉಸ್ತುವಾರಿ – ಸುಬ್ಬನರಸಿಂಹ, ಸಂಚಾಲಕ – ಆರ್. ಅಶೋಕ್
ಬೆಂಗಳೂರು ಕೇಂದ್ರ : ಉಸ್ತುವಾರಿ – ಡಾ|| ಅಶ್ವತನಾರಾಯಣ, ಸಂಚಾಲಕ – ಸಚ್ಚಿದಾನಂದ ಮೂರ್ತಿ
ಬೆಂಗಳೂರು ಉತ್ತರ : ಉಸ್ತುವಾರಿ – ಬಿ. ಹೆಚ್. ಕೃಷ್ಣರೆಡ್ಡಿ, ಸಂಚಾಲಕ- ಎಸ್. ಮುನಿರಾಜು

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *