ಅಂತ್ಯಕ್ರಿಯೆಗೆ ಹೋಗಿದ್ದವರ ಮನೆಗೆ ಹಾಕಿದ್ದ ಬೀಗ ಮುರಿದು ಕಳ್ಳತನ

Public TV
1 Min Read

ಹಾಸನ: ಅಂತ್ಯಕ್ರಿಯೆಗೆ ಹೋಗಿದ್ದವರ ಮನೆಗೆ ಹಾಕಿದ್ದ ಬೀಗ ಮುರಿದು 99,500 ರೂ. ಬೆಲೆ ಬಾಳುವ ಚಿನ್ನ (Gold) -ಬೆಳ್ಳಿಯ ಆಭರಣ ಹಾಗೂ ರೇಷ್ಮೆ ಸೀರೆ ಕಳವು ಮಾಡಿರುವ ಘಟನೆ ಹಾಸನ (Hassan) ಜಿಲ್ಲೆಯ ಅರಸೀಕೆರೆ ತಾಲೂಕಿನ ಹೆಂಜಗೊಂಡನಹಳ್ಳಿ ಬಡಾವಣೆಯಲ್ಲಿ ನಡೆದಿದೆ.

ಭಾರತಿ ನಾಯಕ್ ಎಂಬುವರು 4 ತಿಂಗಳಿನಿಂದ ಬಡಾವಣೆಯ ಬಿ.ಇಡಿ. ಕಾಲೇಜಿನ ಹಿಂಭಾಗದ ವಿಳಾಸದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಪತಿ ಭೀಮಾನಾಯ್ಕ ಅವರೊಂದಿಗೆ ವಾಸವಾಗಿದ್ದರು. ಆದರೆ ಭೀಮಾನಾಯ್ಕ ಅವರ ಕಾಲಿಗೆ ಗ್ಯಾಂಗ್ರಿನ್ ಆಗಿದ್ದರಿಂದ ಫೆ.3 ರಂದು ಬೆಂಗಳೂರಿನಲ್ಲಿ ಮೃತಪಟ್ಟಿದ್ದರು. ಇದನ್ನೂ ಓದಿ: ರಾಮಮಂದಿರ ನಿರ್ಮಾಣ ಬಿಜೆಪಿ ಕೈಯಲ್ಲಿ ಆಗಲ್ಲ, ನಾನೇ ಮಾಡಬೇಕು: ಹೆಚ್‌ಡಿಕೆ

ಅಂತ್ಯಕ್ರಿಯೆಯನ್ನು ಸ್ವಂತ ಊರಾದ ಕಡೂರು ತಾಲೂಕು ಸಿಂಗಟಗೆರೆಯಲ್ಲಿ ನೆರವೇರಿಸಿ ಫೆ.16ರಂದು ಹೆಂಜಗೌಡನಹಳ್ಳಿ ಮನೆಗೆ ಬಂದಾಗ ನೋಡಿದಾಗ ಕಳ್ಳರು, ಬಾಗಿಲು ಬೀಗ ಒಡೆದು ಬೀರುವಿನ ಲಾಕರ್ ಕೀ ಮುರಿದು 99,500 ರೂ. ಬೆಲೆಬಾಳುವ 12 ಗ್ರಾಂ ತೂಕದ 4 ಜೊತೆ ಚಿನ್ನದ ಓಲೆಗಳು, 6 ಗ್ರಾಂ ತೂಕದ ಬಂಗಾರದ ಉಂಗುರ, ಎರಡು ರೇಷ್ಮೆ ಸೀರೆಗಳು ಮತ್ತು ದೇವರ ಮನೆಯಲ್ಲಿದ್ದ ಸುಮಾರು 150 ಗ್ರಾಂ ತೂಕದ ಬೆಳ್ಳಿಯ ದೀಪದ ಕಂಬ ಕದ್ದು ಪರಾರಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿ ಅರಸೀಕೆರೆ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಮ್ಮದು ವಿವೇಕಾನಂದರ ಕೇಸರಿ, ಬಿಜೆಪಿಯವ್ರದ್ದು ಗೋಡ್ಸೆ ಕೇಸರಿ: ಸಿದ್ದರಾಮಯ್ಯ

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *