ಪರಿಸ್ಥಿತಿ ನಮ್ಮ ಕೈಮೀರಿದ್ರೆ ಲಾಕ್‍ಡೌನ್ ಬಗ್ಗೆ ಚರ್ಚೆ: ಆರಗ ಜ್ಞಾನೇಂದ್ರ

Public TV
3 Min Read

– ಕಾಂಗ್ರೆಸ್ ನಾಯಕರು ಸ್ವಯಂ  ಪಾದಯಾತ್ರೆ ನಿಲ್ಲಿಸ್ತಾರೆ ಅನ್ನೋ ವಿಶ್ವಾಸ ಇದೆ

ಬೆಂಗಳೂರು: ಕೊರೊನಾ, ಓಮಿಕ್ರಾನ್ ಸೋಂಕು ಹೆಚ್ಚುತ್ತಿರುವ ಬೆನ್ನಲ್ಲೇ ಸರ್ಕಾರ ಜನರ ಹಿತದೃಷ್ಟಿಯಿಂದ ಕೆಲವು ನಿಯಮಗಳನ್ನು ಜಾರಿಗೆ ತಂದಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರ ಸಭೆ ಬಳಿಕ ಗೃಹ ಸಚಿವ ಆರಗ ಜ್ಞಾನೇಂದ್ರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿಗಳು ಕರೆ ಮಾಡಿ ಸಿಎಂ ಆರೋಗ್ಯ ವಿಚಾರಿಸಿದ್ದಾರೆ. ಕೋವಿಡ್ ಏರಿಕೆ ಹಿನ್ನೆಲೆ ಟೆಸ್ಟಿಂಗ್ ಹೆಚ್ಚಿಸಲು ಸಭೆಯಲ್ಲಿ ಸೂಚನೆ ನೀಡಲಾಗಿದೆ. ಹೋಂ ಐಸೋಲೇಷನ್‍ನಲ್ಲಿರೋರು, ರಿಕವರಿ ಆಗೋವರ ಮೇಲೆ ನಿಗಾ ಇಡಲು ಸೂಚನೆ ನೀಡಲಾಗಿದೆ. ಬೂಸ್ಟರ್ ಡೋಸ್ ತೀವ್ರಗೊಳಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ

ಶಾಲೆ, ರೆಸಿಡೆನ್ಸಿ, ಹಾಸ್ಟೆಲ್‍ಗಳಲ್ಲಿ ಕೋವಿಡ್ ಹೆಚ್ಚಾಗುತ್ತಿದೆ. ಇವುಗಳನ್ನು ಬಂದ್ ಮಾಡಲು ಅಥವಾ ನಡೆಸಲು ಆಯಾ ಜಿಲ್ಲೆಗಳ ಡಿಸಿಗಳಿಗೆ ಪರಿಣಾಮ ನೋಡಿ ನಡೆಸಲು ಅಥವಾ ಬಂದ್ ಮಾಡಲು ಸಿಎಂ ಅನುಮತಿ ಕೊಟ್ಟಿದ್ದಾರೆ. ಶಿಕ್ಷಣ ಮತ್ತು ಆರೋಗ್ಯ ಇಲಾಖೆಗಳು ಜಂಟಿಯಾಗಿ ಎಲ್ಲ ಶಾಲೆಗಳಲ್ಲಿ 15 ದಿನಗಳಿಗೊಮ್ಮೆ ಮಕ್ಕಳ ಸಾಮಾನ್ಯ ಆರೋಗ್ಯ ತಪಾಸಣೆ. ಸಂಕ್ರಾಂತಿ ಇತರೆ ಹಬ್ಬಗಳಲ್ಲಿ ನಿಯಮ ಪಾಲನೆ ಕಡ್ಡಾಯವಾಗಿದೆ. ಮಕ್ಕಳ ಚಿಕಿತ್ಸೆಗೆ ಔಷಧ ಕೊರತೆ ಆಗದಂತೆ ನೋಡಿಕೊಳ್ಳಬೇಕು. ತತ್‍ಕ್ಷಣ ಔಷಧ ಖರೀದಿ ಮಾಡಿ ಸಂಗ್ರಹಿಸಬೇಕು. ಮಕ್ಕಳಿಗೆ ಬೆಡ್‍ಗಳನ್ನು ಮೀಸಲಿರಿಸಲು ಸಿಎಂ ಸೂಚನೆ ನೀಡಿದ್ದಾರೆ. ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತ ಮಕ್ಕಳಿಗೆ ಚಿಕಿತ್ಸೆ ನೀಡಲು ಮಕ್ಕಳ ವಾರ್ಡ್, ಐಸಿಯುಗಳನ್ನು ಮೀಸಲಿರಿಸಬೇಕು. ಬಿಬಿಎಂಪಿ ವ್ಯಾಪ್ತಿಯಲ್ಲಿ ಪರೀಕ್ಷಾ ಪ್ರಮಾಣವನ್ನು ದಿನಕ್ಕೆ 1.3 ಲಕ್ಷ ವರೆಗೆ ಹೆಚ್ಚಿಸಲು ಸೂಚಿಸಿದರು ಎಂದು ಹೇಳಿದ್ದಾರೆ. ಇದನ್ನೂ ಓದಿ:  ಬೊಮ್ಮಾಯಿ ಆರೋಗ್ಯ ವಿಚಾರಿಸಿ ಸಲಹೆ ನೀಡಿದ ಪ್ರಧಾನಿ ಮೋದಿ

ಕೋವಿಡ್ ಲಸಿಕೆಯ ಎರಡೂ ಡೋಸ್ ಗಳನ್ನು ಪಡೆದು 9 ತಿಂಗಳು ಪೂರೈಸಿದ ಮುಂಚೂಣಿಯ ಕಾರ್ಯಕರ್ತರಿಗೆ 3ನೇ ಡೋಸ್ ಅನ್ನು ಆದ್ಯತೆಯ ಮೇರೆಗೆ ನೀಡಲು ಸೂಚಿಸಿದರು. ಜನಜಂಗುಳಿ, ಪ್ರತಿಭಟನೆಗಳು ನಿರ್ಬಂಧ. ಬೆಂಗಳೂರಿನ ಮಾರುಕಟ್ಟೆಗಳು ಸ್ಥಳಾಂತರ ಮಾಡಲಾಗುತ್ತದೆ. ಮಾರುಕಟ್ಟೆಗಳ ವಿಕೇಂದ್ರೀಕರಣ ಹಿಂದಿನ ಅಲೆಯಲ್ಲಿ ಮಾಡಿದ್ರು, ಈಗಲೂ ಮಾರುಕಟ್ಟೆಗಳ ಸ್ಥಳಾಂತರ, ವಿಕೇಂದ್ರೀಕರಣಕ್ಕೆ ಸಿಎಂ ಸೂಚನೆ ನೀಡಿದ್ದಾರೆ. ಮಾಸ್ಕ್ ಬಗ್ಗೆ ಸ್ಥಳೀಯ ಜನರಲ್ಲಿ ಜಾಗೃತರಾಗಿರಬೇಕು. ನಾಳೆ ಬಂದ್ ಆಗುತ್ತೆ ಅನ್ನೋ ಭಯ ಇರಬಾರದು. ಇದನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಸ್ಲಂ ಬೋರ್ಡ್‍ನಿಂದ ಕೈಗೆತ್ತಿಕೊಂಡಿರುವ 50 ಮನೆಗಳನ್ನು ಜ.30 ರೊಳಗೆ ಪೂರ್ಣಗೊಳಿಸಬೇಕು: ಗೋಪಾಲಯ್ಯ

ಶಾಲಾ, ಕಾಲೇಜುಗಳಲ್ಲಿ ಕೋವಿಡ್ ಸೋಂಕು ಬಂದರೆ ಡಿಸಿಗಳು ನಿರ್ಧಾರ ತಗೋಬೇಕು. ನಿರ್ದಿಷ್ಟ ಶಾಲಾ ಕಾಲೇಜುಗಳು ಬಂದ್ ಮಾಡಬೇಕಾ? ಬೇರೆ ಕ್ರಮ ತಗೋಬೇಕಾ ಅಂತ ಡಿಸಿ ನಿರ್ಧಾರವಾಗಿದೆ. ವೀಕೆಂಡ್ ಕರ್ಫ್ಯೂ ಕುರಿತು ಮುಂದಿನ ಸಭೆಯಲ್ಲಿ ನಿರ್ಧಾರಮಾಡಲಾಗುತ್ತದೆ. ಜನವರಿ 14ರ ಪ್ರಧಾನಿಯವರ ಸಭೆ ಬಳಿಕ ಇದರ ಚರ್ಚೆ ನೀಡಲಾಗುತ್ತದೆ. ಮಾರುಕಟ್ಟೆಗಳ ವಿಕೇಂದ್ರೀಕರಣ ನಾಳೆಯಿಂದ ಆರಂಭವಾಗುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಕೋವಿಡ್ ಮುಗಿದ ನಂತರ ಮೇಕೆದಾಟಿನಲ್ಲೇ ಬಿದ್ದು ಒದ್ದಾಡಿ, ಯಾರು ಬೇಡ ಅಂತಾರೆ: ಈಶ್ವರಪ್ಪ

ಶಾಲೆ, ಕಾಲೇಜುಗಳ ವಿಚಾರ ಬೆಂಗಳೂರಿನಲ್ಲಿ ಯಥಾಸ್ಥಿತಿ ಮುಂದುವರಿಕೆಯಾಗುತ್ತದೆ. ಹಾಲಿ ಮಾರ್ಗಸೂಚಿ ಯಥಾಸ್ಥಿತಿ ಮುಂದುವರಿಕೆ. ಇವತ್ತಿನ ನಿರ್ಧಾರಗಳು ಹೆಚ್ಚುವರಿ ಕ್ರಮಗಳು ಲಾಕ್‍ಡೌನ್ ಬಗ್ಗೆ ಇವತ್ತು ಚರ್ಚೆ ಆಗಿಲ್ಲ. ಪರಿಸ್ಥಿತಿ ನಮ್ಮ ಕೈಮೀರಿ ಹೋದಾಗ ಅದರ ಬಗ್ಗೆ ನಂತರ ಚರ್ಚೆ ಮಾಡಲಾಗುತ್ತದೆ. ಕಾಂಗ್ರೆಸ್ ನಾಯಕರು ಸ್ವಯಂ ಆಗಿ ಪಾದಯಾತ್ರೆ ನಿಲ್ಲಿಸ್ತಾರೆ ಅನ್ನೋ ವಿಶ್ವಾಸ ಇದೆ. ನೋಡೋಣ ನಿಲ್ಲಿಸ್ತಾರೋ ಇಲ್ವೋ? ಪಾದಯಾತ್ರೆ ಬಗ್ಗೆ ಸೂಕ್ತ ಕಾಲದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳ ಲಾಗುತ್ತದೆ ಎಂದು ಸೂಚನೆ ಕೊಟ್ಟಿದ್ದಾರೆ.

ರಾಜ್ಯದಲ್ಲಿ ಯಾವುದೇ ರೀತಿಯ ಸಿದ್ಧತೆಯಲ್ಲಿ ಲೋಪವಾಗದಂತೆ ಕ್ರಮ ವಹಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು. ಸಭೆಯಲ್ಲಿ ಸಚಿವರಾದ ಡಾ.ಕೆ. ಸುಧಾಕರ್, ಬಿ.ಸಿ. ನಾಗೇಶ್, ಆರಗ ಜ್ಞಾನೇಂದ್ರ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಸುದರ್ಶನ್ ಮತ್ತು ಇತರ ಸದಸ್ಯರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *