ಕರ್ನಾಟಕ ಸರ್ಕಾರದ ಮಾರ್ಗಸೂಚಿ ಪ್ರಕಟ- ಮದ್ಯ ಮಾರಾಟಕ್ಕೆ ಅವಕಾಶ

Public TV
2 Min Read

-ಬೆಂಗಳೂರು ಬಹುತೇಕ ಓಪನ್
-ಬೆಂಗ್ಳೂರಿನಲ್ಲಿ ಏನಿರುತ್ತೆ? ಏನಿರಲ್ಲ?

ಬೆಂಗಳೂರು: ಕರ್ನಾಟಕ ಸರ್ಕಾರ ಲಾಕ್‍ಡೌನ್ ಮೂರನೇ ಹಂತಕ್ಕೆ ಸಂಬಂಧಿಸಿದಂತೆ ತನ್ನ ಮಾರ್ಗಸೂಚಿಯನ್ನು ಪ್ರಕಟಿಸಿದೆ.

ಕರ್ನಾಟಕವನ್ನು ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳನ್ನಾಗಿ ಸರ್ಕಾರ ವಿಂಗಡನೆ ಮಾಡಿದೆ. ಕೊನೆಯ 21 ದಿನದಿಂದ ಪ್ರಕರಣ ಪತ್ತೆ ಆಗದ ಸ್ಥಳಗಳು ಗ್ರೀನ್ ಝೋನ್ ಎಂದು ಗುರುತಿಸಲಾಗಿದೆ. ಗ್ರೀನ್ ಹಾಗೂ ರೆಡ್ ಝೋನ್ ಬೈಫರಿಕೇಟ್ ಮಾಡಲಾಗದ ಸ್ಥಳ ಅರೆಂಜ್ ಝೋನ್ ಪಟ್ಟಿಯಲ್ಲಿರಲಿವೆ. ರಾಜ್ಯ ಸರ್ಕಾರ ಬಹುತೇಕ ಕೇಂದ್ರದ ಮಾರ್ಗಸೂಚಿಗಳನ್ನು ಯಥಾವತ್ತು ಪಾಲಿಸಿದೆ. ಮೂರು ವಲಯಗಳಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ.

ದ್ವಿಚಕ್ರ ವಾಹನಗಳಲ್ಲಿ ಒಬ್ಬರು ಮತ್ತು ನಾಲ್ಕು ಚಕ್ರ ವಾಹನಗಳಲ್ಲಿ ಚಾಲಕ ಸೇರಿ ಮೂವರು ಮಾತ್ರ ಪ್ರಯಾಣಿಸಬಹುದಾಗಿದೆ. ಅಂತರ್ ಜಿಲ್ಲ ಮತ್ತು ಅಂತರ್ ರಾಜ್ಯ ಸಂಚಾರಕ್ಕೆ ನಿಷೇಧ ಹಾಕಲಾಗಿದೆ. ಮದ್ಯದಂಗಡಿಗಳಲ್ಲಿ ಕೇವಲ ಪಾರ್ಸೆಲ್ ವ್ಯವಸ್ಥೆ ಕಲ್ಪಿಸಲಾಗಿದೆ. ರೆಡ್ ಝೋನ್ ಅಂದ್ರೆ ಇಡೀ ಜಿಲ್ಲೆಯೇ ವ್ಯಾಪ್ತಿಗೆ ಬರಲ್ಲ. ಕಳೆದ 21 ದಿನದಿಂದ ಒಂದೇ ಒಂದು ಕೇಸ್ ಇಲ್ಲದ ಪ್ರದೇಶಗಳು, ತಾಲೂಕುಗಳನ್ನ ಆರೆಂಜ್ ಝೋನ್ ಗೆ ಸೇರಿಸಬಹುದು ಎಂದು ರಾಜ್ಯ ಸರ್ಕಾರ ಆದೇಶದಲ್ಲಿ ತಿಳಿಸಿದೆ.

ಬೆಂಗಳೂರಿನ ಕಂಟೈನ್‍ಮೆಂಟ್ ಝೋನ್ ಹೊರತುಪಡಿಸಿ ಸಿಲಿಕಾನ್ ಸಿಟಿ ಬಹುತೇಕ ಓಪನ್ ಆಗಲಿದೆ. ಕಂಟೈನ್‍ಮೆಂಟ್ ಝೋನ್ ಗಳಲ್ಲಿ ಕಟ್ಟುನಿಟ್ಟಾಗಿ ಲಾಕ್‍ಡೌನ್ ಮುಂದುವರಿಯಲಿದೆ. ಉಳಿದಂತೆ ಖಾಸಗಿ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ.

ಬೆಂಗಳೂರಿನಲ್ಲಿ ಏನಿರುತ್ತೆ?
* ಕಂಟೈನ್ಮೆಂಟ್ ರೆಡ್‍ಜೋನ್ ಇರುವ 25 ವಾರ್ಡ್ ಗಳನ್ನು ಹೊರತುಪಡಿಸಿ ಉಳಿದ ಭಾಗಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ.
* 33% ಸಿಬ್ಬಂದಿಗಳ ಹಾಜರಾತಿಯಲ್ಲಿ ಕೈಗಾರಿಕೆ ಆರಂಭ
* ಎಲ್ಲ ರೀತಿಯ ಕೈಗಾರಿಕೆಗಳನ್ನು ಆರಂಭಿಸಬಹುದು.
* ಗಾರ್ಮೆಂಟ್ ಆರಂಭಕ್ಕೆ ಗ್ರೀನ್ ಸಿಗ್ನಲ್

* ಸಲೂನ್ ಶಾಪ್, ಸ್ಪಾ, ಬ್ಯೂಟಿ ಪಾರ್ಲರ್ (ಕಂಟೈನ್ಮೆಂಟ್ ಝೋನ್ ಹೊರತು ಪಡಿಸಿ)
* ಎಲ್ಲ ರೀತೀಯ ಖಾಸಗಿ ಕಚೇರಿಗಳು ಆರಂಭ.

ಏನಿರಲ್ಲ?
* ಸದ್ಯಕ್ಕೆ ಬಿಎಂಟಿಸಿ, ನಮ್ಮ ಮೆಟ್ರೋ ಸಂಚಾರ ಇಲ್ಲ
* ಸಾರ್ವಜನಿಕ ಶೌಚಾಲಯ ಬಳಕೆಗೆ ಅವಕಾಶವಿಲ್ಲ
* ಮಾಲ್, ಸಿನಿಮಾ ಮಂದಿರ ಆರಂಭ ಇಲ್ಲ.
* ಆಟೋ, ಟ್ಯಾಕ್ಸಿ, ಕ್ಯಾಬ್, ಅಂತರ್ ರಾಜ್ಯ, ಜಿಲ್ಲಾ ಸಂಚಾರ ಇಲ್ಲ
* ಕಂಟೈನ್‍ಮೆಂಟ್ ಝೋನ್‍ನಲ್ಲಿ ಮದ್ಯ ಇಲ್ಲ

Share This Article
Leave a Comment

Leave a Reply

Your email address will not be published. Required fields are marked *