ಯುವತಿಯರ ಅಶ್ಲೀಲ ಫೋಟೋ ತೆಗೆದ ವ್ಯಕ್ತಿಗೆ ಬಿತ್ತು ಸಖತ್ ಗೂಸಾ!

Public TV
1 Min Read

ತುಮಕೂರು: ರಸ್ತೆಯಲ್ಲಿ ಓಡಾಡುತ್ತಿದ್ದ ಅಂದ ಚೆಂದದ ಯುವತಿಯರ ಫೋಟೋ ಕ್ಲಿಕ್ಕಿಸಿ ವಿಕೃತಿ ಮೆರೆಯುತ್ತಿದ್ದ ವ್ಯಕ್ತಿಗೆ ಸಖತ್ ಗೂಸಾ ಬಿದ್ದಿದೆ.

ತುಮಕೂರು ಜಿಲ್ಲೆ ತಿಪಟೂರು ನಗರದ ಅಂಬೇಡ್ಕರ್ ವೃತ್ತದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಕಾಸ್ಮೋ ಕ್ಲಬ್ ನಲ್ಲಿ ಹುಟ್ಟುಹಬ್ಬ ಆಚರಣೆಗೆಂದು ಬಂದಿದ್ದ ಹಲವು ಯುವತಿಯರ ಫೋಟೋ ತನ್ನ ಮೊಬೈಲ್ ಫೋನಿನಿಂದ ಸೆರೆಹಿಡಿದಿದ್ದಾನೆ.

ವಿಚಾರ ತಿಳಿದ ಯುವತಿಯರ ಸಂಬಂಧಿಕರು ವ್ಯಕ್ತಿಯನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ತಿಪಟೂರು ಪೊಲೀಸರಿಗೆ ಒಪ್ಪಿಸಿದ್ದಾರೆ. ನಂತರ ಪೊಲೀಸರು ಆತನಿಗೆ ಎಚ್ಚರಿಸಿ ದೂರು ದಾಖಲಿಸದೆ ಆತನನ್ನು ಹೊರಬಿಟ್ಟಿದ್ದಾರೆ ಎಂದು ಹೇಳಲಾಗಿದೆ.

ಪೊಲೀಸರು ಆತನ ಮೊಬೈಲ್ ಪರಿಶೀಲಿಸಿದಾಗ ಫೋನಿನಲ್ಲಿ ನೂರಾರು ಯುವತಿಯರ ಅಶ್ಲೀಲ ಭಾವಚಿತ್ರ ಇರುವುದು ಕಂಡು ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *