ಇಂದಿನ ಚುನಾವಣಾ ಫಲಿತಾಂಶ- ಯಾವ ಪಕ್ಷಕ್ಕೆ ಏನು ಎಫೆಕ್ಟ್?

Public TV
2 Min Read

ಬೆಂಗಳೂರು: ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದ ಲೋಕಲ್ ರಿಸಲ್ಟ್ ಕ್ಷಣ ಬಂದೇ ಬಿಟ್ಟಿದೆ. ಆಗಸ್ಟ್ 31ರಂದು 102 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದ್ದು, ಸಮ್ಮಿಶ್ರ ಸರ್ಕಾರದ ಮೇಲೆ ಪರಣಾಮ ಬೀಳುವ ಸಾಧ್ಯತೆಗಳಿವೆ.

ಫಲಿತಾಂಶದಿಂದ ಸಮ್ಮಿಶ್ರ ಸರ್ಕಾರದ ಮೇಲಿನ ಜನಾಭಿಪ್ರಾಯ ಬಹಿರಂಗವಾಗುತ್ತದೆ. ಕಾಂಗ್ರೆಸ್, ಜೆಡಿಎಸ್ ಹೆಚ್ಚು ಸ್ಥಾನ ಗೆದ್ದರೆ ಮೈತ್ರಿ ಗಟ್ಟಿ ಸಾಧ್ಯತೆಗಳಿದ್ದು, ಕಡಿಮೆ ಸ್ಥಾನ ಗೆದ್ದರೆ ಮೈತ್ರಿ ಪಕ್ಷಗಳಲ್ಲಿ ಭಿನ್ನಮತ ಹೆಚ್ಚುವ ಸಾಧ್ಯತೆ ಹೆಚ್ಚಿದೆ. ಫಲಿತಾಂಶಗಳನ್ನು ನೋಡಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟೀಂ ಗೇಮ್ ಪ್ಲ್ಯಾನ್ ಚೇಂಜ್ ಮಾಡಬಹುದು. ಹಳೇ ಮೈಸೂರು ಭಾಗದಲ್ಲಿ ಕೈ, ಜೆಡಿಎಸ್ ಮೈತ್ರಿ ಅಗತ್ಯತೆ ನಿರ್ಧಾರ ಕೈಗೋಳ್ಳುವಂತಹ ಸಾಧ್ಯತೆಗಳು ಕೂಡ ಇದೆ. ಈ ಮಧ್ಯೆ ಆಪರೇಷನ್ ಕಮಲಕ್ಕೆ ದಾರಿ ಮಾಡಿಕೊಳ್ಳಲು ಪ್ಲ್ಯಾ ನ್ ಮಾಡಬಹುದಾದ ಸಾಧ್ಯತೆಗಳೂ ಇವೆ.

ಸ್ಥಳೀಯ ಚುನಾವಣಾ ಫಲಿತಾಂಶದಿಂದ ಲೋಕಸಭಾ ಚುನಾವಣೆಯ ಮೇಲೂ ಪರಿಣಾಮ ಬೀರಬಹುದು. ಲೋಕಸಭಾ ಚುನಾವಣೆ ಮೈತ್ರಿಗೆ ಈ ರಿಸಲ್ಟ್ ಮಾನದಂಡವಾಗಬಹುದು. ಕಾಂಗ್ರೆಸ್, ಜೆಡಿಎಸ್‍ಗೆ ಹಿನ್ನಡೆಯಾದ್ರೆ ಲೋಕ ಮೈತ್ರಿಗೆ ಕಂಟಕವಾಗಬಹುದು. ಫಲಿತಾಂಶವನ್ನೇ ಮುಂದಿಟ್ಟುಕೊಂಡು ಸೀಟು ಹಂಚಿಕೆ ಚೌಕಾಸಿ ನಡೆಸಬಹುದು. ಲೋಕ ಎಲೆಕ್ಷನ್‍ಗೆ ರಾಜ್ಯದಲ್ಲಿ ಕಾಂಗ್ರೆಸ್ ನಾಯಕತ್ವದ ನಿರ್ಧಾರವಾಗಬಹುದಾದ ಸಾಧ್ಯತೆಗಳು ಇದೆ.

ಫಲಿತಾಂಶದಲ್ಲಿ ಜೆಡಿಎಸ್ ಪ್ರಾಬಲ್ಯ ಮೆರೆದರೆ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರ ಹಿಡಿತ ಜಾಸ್ತಿಯಾಗಬಹುದು. ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡರೆ ಲೋಕಸಭೆ ಹೆಚ್ಚು ಸೀಟು ಕೇಳಬಹುದು. ಅಲ್ಲದೇ ಕಾಂಗ್ರೆಸ್ ಹಸ್ತಕ್ಷೇಪಕ್ಕೆ ಕಡಿವಾಣ ಬೀಳಬಹುದು.

ಕಾಂಗ್ರೆಸ್ ಪ್ರಾಬಲ್ಯ ಮೆರೆದರೆ ಸಮ್ಮಿಶ್ರ ಸರ್ಕಾರದ ಮೇಲೆ ಹಿಡಿತ ಮುಂದುವರಿಸಬಹುದು. ಸಿದ್ದರಾಮಯ್ಯ ಹಸ್ತಕ್ಷೇಪ ಜಾಸ್ತಿ ಆಗಬಹುದು. ಹಾಗೂ ಮೇಲ್ಮನೆ ನಾಮ ನಿರ್ದೇಶನ, ನಿಗಮ ಮಂಡಳಿ ನೇಮಕದ ಮೇಲುಗೈ ಸಾಧಿಸಬಹುದು.

ಚುನಾವಣಾ ಫಲಿತಾಂಶದಲ್ಲಿ ಬಿಜೆಪಿಗೆ ಹಿನ್ನಡೆಯಾದ್ರೆ ಬಿಜೆಪಿ ನಾಯಕರು ಕರ್ನಾಟಕದ ಮೇಲೆ ಹೆಚ್ಚು ಗಮನ ಕೊಡಬಹುದು. ಮುಂದಿನ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತಂತ್ರಗಾರಿಕೆ ಬದಲಿಸಬಹುದು. ರಾಜ್ಯ ನಾಯಕತ್ವದಲ್ಲಿ ಭಾರೀ ಪ್ರಮಾಣದ ಬದಲಾವಣೆ ಆಗಬಹುದು. ಮತ್ತು ಲೋಕಸಭೆ ಚುನಾವಣೆಗೂ ಮುನ್ನ ಸರ್ಕಾರ ಕೆಡವಲು ಬಿಜೆಪಿ ಮುಂದಾಗಬಹುದು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *