ಮೂರು ಫ್ಲೋರ್‌ನ ಡ್ಯೂಪ್ಲೆಕ್ಸ್ ಮನೆಯಲ್ಲಿ ವಾಸ- ಪವಿತ್ರಾ ಐಷಾರಾಮಿ ಜೀವನ ಬಹಿರಂಗ

Public TV
1 Min Read

– ಅಕ್ಕ-ಪಕ್ಕದ ಮನೆಯವರಿಗಿಲ್ಲ ಸಂಪರ್ಕ

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ (Pavithra Gowda) ಕೊಲೆ ಪ್ರಕರಣದ ತನಿಖೆ ಚುರುಕಿನಿಂದ ನಡೆಯುತ್ತಿದೆ. ಆರೋಪಿಗಳ ಸ್ಥಳ ಮಹಜರು ಪ್ರಕ್ರಿಯೆ ನಡೆಯುತ್ತಿದ್ದು, ಈ ವೇಳೆ ಎ1 ಆರೋಪಿ ಪವಿತ್ರಾ ಗೌಡ ಐಷಾರಾಮಿ ಜೀವನ ಬಹಿರಂಗವಾಗಿದೆ.

ಹೌದು. ಪ್ರಕರಣ ಸಂಬಂಧ ಇಂದು ಪವಿತ್ರಾ ಗೌಡ ಅವರ ಮನೆಯಲ್ಲಿ ಸ್ಥಳ ಮಹಜರು ನಡೆಸಲಾಗಿದೆ. ಪವಿತ್ರಾ ಗೌಡ ಹಾಗೂ ಪವನ್ ಕರೆದುಕೊಂಡು ಹೋಗಿರುವ ಪೊಲೀಸರು, ಆರೋಪಿಗಳ ಮನೆಯಲ್ಲಿ ಸಿಕ್ಕ ಕೆಲವೊಂದು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.

ಪವಿತ್ರಾ ಐಷಾರಾಮಿ ಜೀವನ: ಪವಿತ್ರಾ ಗೌಡ ಅವರು ಕಳೆದ 10 ವರ್ಷದಿಂದ ಆರ್.ಆರ್ ನಗರದ ಮನೆಯಲ್ಲಿ ವಾಸವಾಗಿದ್ದಾರೆ. ಮೂರು ಫ್ಲೋರ್ ಡ್ಯುಪ್ಲೆಕ್ಸ್ ಮನೆಯಲ್ಲಿ ಪವಿತ್ರಾ ಗೌಡ ವಾಸವಾಗಿದ್ದರೆ, ಗ್ರೌಂಡ್ ಫ್ಲೋರ್ ನಲ್ಲಿ ಆರೋಪಿ ಪವನ್ ವಾಸ ಮಾಡುತ್ತಿದ್ದ. ಈತ ಪವಿತ್ರಾ ಗೌಡ ಮನೆ ಕೆಲಸದ ಜೊತೆಗೆ ನಾಯಿ ನೋಡಿಕೊಳ್ಳುತ್ತಿದ್ದ. ಇದನ್ನೂ ಓದಿ: ಪವಿತ್ರಾಗೌಡ ಮನೆಯಲ್ಲಿ ಸ್ಥಳ ಮಹಜರು – ಮನೆಯ ಮೂಲೆಮೂಲೆಯನ್ನೂ ಜಾಲಾಡಿದ ಅಧಿಕಾರಿಗಳು

ಕಟ್ಟಿರುವ ಐಷಾರಾಮಿ ಮನೆಯನ್ನೇ ಪವಿತ್ರಾ ಗೌಡ ಖರೀದಿಸಿದ್ದಾರೆ. ಈ ಮನೆಗೆ ಆಗಾಗ ದರ್ಶನ್ ಫಾರ್ಚುನರ್ ಕಾರಿನಲ್ಲಿ ಬಂದು ಹೋಗುತ್ತಿದ್ದರು. ಆದರೆ ಅಕ್ಕಪಕ್ಕ ಮನೆಯವರ ಜೊತೆ ಪವಿತ್ರಾಗೆ ಸಂಪರ್ಕವೇ ಇರಲಿಲ್ಲ. ದರ್ಶನ್ ಬರೋದನ್ನು ನೋಡಿ ನೆರೆ ಮನೆಯವರು ಆ ಮನೆಯಲ್ಲಿ ವಿಜಯಲಕ್ಷ್ಮಿ ಇದ್ದಾರೆ ಎಂದುಕೊಂಡಿದ್ದರು.

ಎಲ್ಲೇ ಹೋಗಬೇಕಿದ್ದರೂ ಪವಿತ್ರಾ ಗೌಡ ವೊಲ್ಸ್ ವ್ಯಾಗೆನ್ ಮತ್ತು ರೇಂಜ್ ರೋವರ್ ಕಾರಿನಲ್ಲಿ ಓಡಾಡುತ್ತಿದ್ದರು. ಇನ್ನು ಮಗಳು ಹಾಸ್ಟೆಲ್‍ನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.

Share This Article