ಕರ್ನಾಟಕಕ್ಕಿಂತ ಕಡಿಮೆ – ಆಂಧ್ರದಲ್ಲಿ ಮದ್ಯದ ದರ ಭಾರೀ ಇಳಿಕೆ

Public TV
1 Min Read

– ಗ್ರಾಹಕರಿಗೆ ಮಾಸಿಕ 116 ಕೋಟಿ ರೂ. ಉಳಿತಾಯ

ಅಮರಾವತಿ: ಕರ್ನಾಟಕದಲ್ಲಿ (Karnataka) ಅಬಕಾರಿ ತೆರಿಗೆ ಸಂಗ್ರಹಕ್ಕೆ ಮದ್ಯದ ದರ ಏರಿಕೆ ಮಾಡುತ್ತಿದ್ದರೆ ಚಂದ್ರಬಾಬು ನಾಯ್ಡು ನೇತೃತ್ವದ ಆಂಧ್ರಪ್ರದೇಶ ಸರ್ಕಾರವು (Andhra Pradesh) ಇದೇ ಮೊದಲ ಬಾರಿ ಮದ್ಯದ ದರ ಇಳಿಸಿದ್ದು, ಪ್ರತಿ ಬಾಟಲ್‌ಗೆ 10 ರೂ.ಯಿಂದ 100 ರೂ.ವರೆಗೆ ಕಡಿತಗೊಳಿಸಿದೆ. ಈ ಮೂಲಕ ರಾಜ್ಯದಲ್ಲಿ ಮದ್ಯ ಗ್ರಾಹಕರಿಗೆ ಪ್ರತಿ ತಿಂಗಳು 116 ಕೋಟಿ ರೂ. ಉಳಿತಾಯ ಆಗಲಿದೆ.

ಈ ಕುರಿತು ಅಧಿಕಾರಿಗಳ ಜೊತೆ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಿಎಂ ಚಂದ್ರಬಾಬು ನಾಯ್ಡು (Chandrababu Naidu), ಮದ್ಯ ನೀತಿಯಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಂಡು, ಕೈಗೆಟುಕುವ ದರದಲ್ಲಿ ಅದನ್ನು ಪೂರೈಕೆ ಮಾಡಿ. ಜೊತೆಗೆ ನಕಲಿ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಸೂಚಿಸಿದ್ದಾರೆ. ಈ ಹೊಸ ನೀತಿಯಿಂದ ರಾಜ್ಯದ ಆದಾಯ ಹೆಚ್ಚುವ ನಿರೀಕ್ಷೆಯಿದೆ ಎಂದಿದ್ದಾರೆ.ಇದನ್ನೂ ಓದಿ: ಶೈನ್ ಶೆಟ್ಟಿ, ಅಂಕಿತ ಅಮರ್ ಚಿತ್ರಕ್ಕೆ ಸೆನ್ಸಾರ್ ಅಸ್ತು

ಇದೇ ವೇಳೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಗುಣಮಟ್ಟದ ಬ್ರ‍್ಯಾಂಡ್‌ಗಳನ್ನು ಮಾತ್ರ ರಾಜ್ಯಕ್ಕೆ ಅನುಮತಿಸುವಂತೆ ಮತ್ತು ಸುಂಕ ಪಾವತಿಸದ, ಅಕ್ರಮ ಅಥವಾ ನಕಲಿ ಮದ್ಯದ ಮಾರಾಟವನ್ನು ನಿಷೇಧಿಸುವಂತೆ ಹಾಗೂ ಸಾರ್ವಜನಿಕ ಆರೋಗ್ಯವನ್ನು ಕಾಪಾಡುವಂತೆ ತಿಳಿಸಿದರು.

ಈ ಮೂಲಕ ಆಂಧ್ರಪ್ರದೇಶದಲ್ಲಿ 30 ಬ್ರಾಂಡ್‌ಗಳ ಬೆಲೆಯು ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡಿನ ಬೆಲೆಗಳಿಗಿಂತ ಕಡಿಮೆಯಾಗಿದೆ. ಪ್ರವಾಸಿ ತಾಣಗಳಲ್ಲಿ ದುರುಪಯೋಗವನ್ನು ತಡೆಗಟ್ಟಲು ಪರವಾನಗಿ ಇಲ್ಲದ ಅಂಗಡಿಗಳನ್ನು ನಿಷೇಧಿಸುವಂತೆ, ಡಿಜಿಟಲ್ ಪಾವತಿ, ಎಐ ಆಧಾರಿತ ಟ್ರ‍್ಯಾಕಿಂಗ್ ಜಾರಿಗೊಳಿಸಲು ನಿರ್ದೇಶನ ನೀಡಿದ್ದಾರೆ.ಇದನ್ನೂ ಓದಿ: ಬೆನ್ನಿ ಸಿನಿಮಾ ಮೂಲಕ ಜಿಂಕೆ ಮರಿ ಶ್ವೇತಾ ಸ್ಯಾಂಡಲ್‌ವುಡ್‌ಗೆ ಕಂಬ್ಯಾಕ್

Share This Article