ಲಿಪ್ ಲಾಕ್ ದೃಶ್ಯ ಪ್ರಸಾರ: ಸಲ್ಮಾನ್ ಗೆ ಟಾಂಗ್ ಕೊಟ್ಟ ನಟಿ ಆಕಾಂಕ್ಷಾ

By
2 Min Read

ಟಿಟಿಯಲ್ಲಿ ನಡೆಯುತ್ತಿರುವ ಹಿಂದಿ ಬಿಗ್ ಬಾಸ್ ನಲ್ಲಿ ನಡೆದ ಲಿಪ್ ಲಾಕ್ ಘಟನೆಯು ಪರ ವಿರೋಧದ ಮಾತುಗಳಿಗೆ ಕಾರಣವಾಗುತ್ತಿದೆ. ಈ ಶೋ ಅನ್ನು ನಡೆಸಿಕೊಡುತ್ತಿರುವ ಸಲ್ಮಾನ್ ಖಾನ್ ಲಿಪ್ ಲಾಕ್ ಮಾಡಿಕೊಂಡಿದ್ದ ನಟಿ ಆಕಾಂಕ್ಷಾ ಪುರಿ ಮತ್ತು ಮಾಡೆಲ್ ಜದ್ ಹದೀದ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದು ಫ್ಯಾಮಿಲಿ ಶೋ ಅಸಭ್ಯವಾಗಿ ನಡೆದುಕೊಳ್ಳಬಾರದು ಎಂದು ಕಿವಿಮಾತು ಹೇಳಿದ್ದರು.

ಸಲ್ಮಾನ್ ಖಾನ್ ಆಡಿದ ಮಾತಿಗೆ ಬಿಗ್ ಬಾಸ್ ಮನೆಯಿಂದ ಆಚೆ ಬಂದಿರುವ ಆಕಾಂಕ್ಷ ಪುರಿ ತಿರುಗೇಟು ನೀಡಿದ್ದಾರೆ. ಅಸಭ್ಯದ ಬಗ್ಗೆ ಮಾತನಾಡುವ ನೀವು, ಆ ದೃಶ್ಯವನ್ನು ಪ್ರಸಾರ ಮಾಡಿದವರ ವಿರುದ್ಧ ಯಾಕೆ ಮಾತನಾಡುತ್ತಿಲ್ಲ ಎಂದಿದ್ದಾರೆ. ಫ್ಯಾಮಿಲಿ ಶೋ ಎನ್ನುವ ಎಚ್ಚರಿಕೆಯ ನಡುವೆಯೂ ಅದನ್ನು ಪ್ರಸಾರ ಮಾಡಬಾರದಿತ್ತು ಎಂದು ಸಲ್ಮಾನ್ ಮಾತಿಗೆ ತಿರುಗೇಟು ನೀಡಿದ್ದಾರೆ.

ಹಿಂದಿ (Hindi)  ಓಟಿಟಿಯಲ್ಲಿ (OTT) ಪ್ರಸಾರವಾಗುತ್ತಿರುವ ಬಿಗ್ ಬಾಸ್ ಶೋನಲ್ಲಿ ನಟಿ ಆಕಾಂಕ್ಷಾ ಪುರಿ ಮತ್ತು ಮಾಡೆಲ್ ಜದ್ ಹದೀದ್ (Jad Hadid) ಲಿಪ್ ಲಾಕ್ ಮಾಡಿಕೊಂಡ ವಿಚಾರ ಭಾರೀ ಸದ್ದು ಮಾಡಿತ್ತು. ಮೂವತ್ತು ಸೆಕೆಂಡ್ ಗಳ ಕಾಲ ಇಬ್ಬರೂ ಲಿಪ್ ಲಾಕ್ (Lip Lock) ಮಾಡಿಕೊಂಡಿದ್ದರು. ಆ ವಿಡಿಯೋ ಕೂಡ ವೈರಲ್ ಆಗಿತ್ತು. ಈ ವಿಚಾರವಾಗಿ ಸಲ್ಮಾನ್ ಖಾನ್ ಕೂಡ ಬೇಸರ ವ್ಯಕ್ತಪಡಿಸಿದ್ದರು. ಇದೊಂದು ಫ್ಯಾಮಿಲಿ ಶೋ ಎಲ್ಲೆ ಮೀರದಂತೆ ನಡೆದುಕೊಳ್ಳಿ ಎಂದು ಕಿವಿಮಾತು ಹೇಳಿದ್ದರು.

ಲಿಪ್ ಲಾಕ್ ವಿಡಿಯೋ ವೈರಲ್ ಆದ ಬೆನ್ನಲ್ಲೇ ಬಿಗ್ ಬಾಸ್ (Bigg Boss)  ಮನೆಯಿಂದ ಆಕಾಂಕ್ಷಾ ಪುರಿ (Akanksha Puri) ಹೊರ ಬಂದಿದ್ದಾರೆ. ದೊಡ್ಮನೆಯಲ್ಲಿ ಚೆನ್ನಾಗಿ ಆಟ ಆಡದೇ ಇರುವ ಕಾರಣಕ್ಕಾಗಿ ಅವರನ್ನು ಎಲಿಮಿನೇಟ್ ಮಾಡಲಾಗಿದೆ. ಬಿಗ್ ಬಾಸ್ ಮನೆಯಿಂದ ಆಕಾಂಕ್ಷಾ ಆಚೆ ಬರುತ್ತಿದ್ದಂತೆಯೇ ಲಿಪ್ ಲಾಪ್ ಬಗ್ಗೆಯೇ ಮಾಧ್ಯಮಗಳು ಪ್ರಶ್ನೆ ಮಾಡಿವೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಆಕಾಂಕ್ಷಾ, ‘ಲಿಪ್ ಲಾಕ್ ಮಾಡಿಕೊಂಡಿದ್ದಕ್ಕೆ ನನಗೆ ಯಾವುದೇ ಬೇಸರವಿಲ್ಲ. ಅದೊಂದು ಟಾಸ್ಕ್ ಆಗಿತ್ತು. ಅದನ್ನು ಟಾಸ್ಕ್ ಅಂದುಕೊಂಡೆ ನಾನು ಅದಕ್ಕೆ ಸಮ್ಮತಿಸಿದ್ದೆ ಮತ್ತು ಮಾಡಿದ್ದೆ. ಈ ಕುರಿತು ಯಾವುದೇ ಬೇಸರ ನನಗಿಲ್ಲ’ ಎಂದಿದ್ದಾರೆ.

 

ಲಿಪ್ ಲಾಕ್ ಮಾಡಬೇಕು ಎನ್ನುವುದು ಟಾಸ್ಕ್ ಅಲ್ಲದೇ ಇದ್ದರೂ, ಮನೆಯಲ್ಲಿದ್ದವರು ಪ್ರಚೋದಿಸಿದರು ಎನ್ನುವ ಕಾರಣಕ್ಕಾಗಿ ನಡೆದ ಘಟನೆ ಅದಾಗಿದ್ದರೂ ಆಕಾಂಕ್ಷಾ ಮಾತ್ರ ಅದೊಂದು ಟಾಸ್ಕ್ ಎಂದು ಸಮರ್ಥಿಸಿದ್ದಾರೆ. ಆ ಟಾಸ್ಕ್ ಅನ್ನು ನಾನು ಮಾಡಲೇಬೇಕಿತ್ತು ಎಂದು ಹೇಳಿಕೊಂಡಿದ್ದಾರೆ.  ಜನ ಏನೇ ಅಂದರೂ, ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿದರು ನಾನು ನನ್ನ ಕೆಲಸ ಮಾಡಿದ್ದೇನೆ ಎಂದಿದ್ದಾರೆ ಆಕಾಂಕ್ಷಾ.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್