ಭಾರತದ 4 ನಗರಗಳಿಗೆ ಫುಟ್ಬಾಲ್‌ ಸ್ಟಾರ್‌ ಮೆಸ್ಸಿ ಭೇಟಿ – ಮೋದಿ ಜೊತೆ ಮಾತುಕತೆ ಸಾಧ್ಯತೆ

1 Min Read

ನವದೆಹಲಿ: ಅರ್ಜೆಂಟೀನಾದ ಫುಟ್‌ಬಾಲ್‌ ಸ್ಟಾರ್‌ ಲಿಯೊನೆಲ್‌ ಮೆಸ್ಸಿ ಅವರ ಬಹುನಿರೀಕ್ಷಿತ ‘GOAT Tour of India’ ಪ್ರವಾಸ ಡಿ.13 ರಂದು ಆರಂಭವಾಗಲಿದೆ. ಪ್ರವಾಸದ ವೇಳೆ ಮೆಸ್ಸಿ ಕೋಲ್ಕತ್ತಾ, ಹೈದರಾಬಾದ್‌, ಮುಂಬೈ ಮತ್ತು ನವದೆಹಲಿಗೆ ಭೇಟಿ ನೀಡಲಿದ್ದಾರೆ.

ಭಾರತಕ್ಕೆ ಮೂರು ದಿನಗಳ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೆಸ್ಸಿ ಭೇಟಿಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಈ ಕುರಿತು ಇನ್‌ಸ್ಟಾದಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಮೆಸ್ಸಿ, ಭಾರತ ತೋರುತ್ತಿರುವ ಪ್ರೀತಿಗೆ ಧನ್ಯವಾದಗಳು! GOAT (ಗ್ರೇಟೆಸ್ಟ್‌ ಆಫ್‌ ಆಲ್‌ ಟೈಮ್‌) ಪ್ರವಾಸಕ್ಕೆ ಇನ್ನು ಕೆಲವೇ ವಾರ ಬಾಕಿ ಇದೆ. ಕೋಲ್ಕತ್ತಾ, ಮುಂಬೈ, ದೆಹಲಿ ಹಾಗೂ ಹೈದರಾಬಾದ್‌ ನಗರಗಳಿಗೆ ಭೇಟಿ ನೀಡುತ್ತಿದ್ದೇನೆಂದು ತಿಳಿಸಲು ಸಂತಸವಾಗುತ್ತಿದೆ. ಶೀಘ್ರದಲ್ಲೇ ನಿಮ್ಮನ್ನು ಕಾಣುತ್ತೇನೆಂದು ಬರೆದುಕೊಂಡಿದ್ದಾರೆ.

ಯಾವ ನಗರಕ್ಕೆ ಯಾವ ದಿನ ಭೇಟಿ?
ಡಿಸೆಂಬರ್‌ 13 – ಕೋಲ್ಕತ್ತಾ (ವಿವೇಕಾನಂದ ಯುಬ ಭಾರತಿ ಕ್ರಿರಂಗನ್ ಕ್ರೀಡಾಂಗಣ).

ಡಿಸೆಂಬರ್‌ 13 – ಹೈದರಾಬಾದ್‌ (ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ).

ಡಿಸೆಂಬರ್‌ 14 – ಮುಂಬೈ (ವಾಂಖೆಡೆ ಸ್ಟೇಡಿಯಂ).

ಡಿಸೆಂಬರ್‌ 15 – ನವದೆಹಲಿ (ಅರುಣ್‌ ಜೇಟ್ಲಿ ಸ್ಟೇಡಿಯಂ).

Share This Article