ಭಾರತದಲ್ಲೇ ಬೆಂಗಳೂರಿನ ಉದ್ಯೋಗಿಗಳಿಗೆ ಅತಿ ಹೆಚ್ಚು ಸಂಬಳ!

Public TV
2 Min Read

ಬೆಂಗಳೂರು: ಉದ್ಯೋಗಿಗಳಿಗೆ ಅತಿಹೆಚ್ಚು ಸಂಬಳ ನೀಡುವ ದೇಶದ ಮಹಾನಗರಗಳ ಪೈಕಿ ಬೆಂಗಳೂರು ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದೆ.

ಕೇವಲ ಟೆಕ್ಕಿಗಳಿಗೆ ಮೀಸಲಾಗಿದ್ದ ಅಧಿಕ ವೇತನ ಈಗ ಹಾರ್ಡ್ ವೇರ್ ಮತ್ತು ನೆಟ್‌ವರ್ಕಿಂಗ್‌ ವೃತ್ತಿಪರರಿಗೂ ದೊರಕುತ್ತಿದೆ ಎಂದು ಲಿಂಕ್ಡ್‌ಇನ್ ನಡೆಸಿದ ವೇತನ ಅಧ್ಯಯನ ತಿಳಿಸಿದೆ. ಬೆಂಗಳೂರಿನಲ್ಲಿ ವರ್ಷದ ಸರಾಸರಿ ವೇತನ 12 ಲಕ್ಷ ರೂ. ಆಗಿದ್ದು, ಮುಂಬೈ ಮತ್ತು ದೆಹಲಿಯಲ್ಲಿ 9 ಲಕ್ಷ ರೂ. ಪಡೆಯುತ್ತಿದ್ದಾರೆ ಎಂದು ಅಧ್ಯಯನ ಹೇಳಿದೆ.

ಹಾರ್ಡ್‍ವೇರ್ ಮತ್ತು ನೆಟ್‌ವರ್ಕಿಂಗ್‌ ಉದ್ಯೋಗಿಗಳು ವರ್ಷಕ್ಕೆ 15 ಲಕ್ಷ ರೂ. ಪಡೆದರೆ, ಸಾಫ್ಟ್ ವೇರ್ ಉದ್ಯೋಗಿಗಳು 12 ಲಕ್ಷ ರೂ. ಹಾಗೂ ಗ್ರಾಹಕ ಉದ್ಯೋಗಿಗಳು 9 ಲಕ್ಷ ರೂ. ಗಳನ್ನ ಪಡೆಯುತ್ತಿದ್ದಾರೆ.

ಹಾರ್ಡ್‍ವೇರ್ ಉದ್ಯೋಗಿಗಳಿಗೆ ಅತಿಹೆಚ್ಚು ವೇತನ ಕೊಡಲು ಕಾರಣವಿದೆ. ಸಿನೊಪ್ಸಿಸ್ ಕಂಪನಿಯ ಡಿಸೈನ್ ಹೆಡ್ ಶಿವಾನಂದ ಕೋಟೇಶ್ವರ್ ಅವರ ಪ್ರಕಾರ, ವಿಎಲ್‍ಎಸ್‍ಐ ಉದ್ಯಮದಲ್ಲಿ (ವೆರಿ ಲಾರ್ಜ್‍ಸ್ಕೇಲ್ ಇಂಟಿಗ್ರೆಷನ್) ನಿಂದ ವೇತನ ಹೆಚ್ಚಾಗಿದೆ. ಏಕೆಂದರೆ ಚಿಪ್‍ಗಳ ಡಿಸೈನ್ ಈಗ ಭಾರತಕ್ಕೆ ಸ್ಥಳಾಂತರವಾದ್ದರಿಂದ ಈ ಬದಲಾವಣೆ ಕಂಡುಬಂದಿದೆ. ಈ ಚಿಪ್ ಡೆಸೈನ್ ನಲ್ಲಿ ನೂರಾರು ಸಕ್ರ್ಯೂಟ್ಸ್ ಮತ್ತು ಸಾವಿರಾರು ಟ್ರಾನ್ಸ್‌ಸಿಸ್ಟರ್‌ಗಳನ್ನ ಅಥವಾ ಸಾಧನವನ್ನ ಒಂದು ಚಿಪ್‍ನಲ್ಲಿ ಹಾಕಲಾಗುತ್ತದೆ. ಈ ಉದ್ಯೋಗಿಗಳು ತಮ್ಮ ಅನುಭವದ ಈ ಹಿಂದೆ ಮೂರು ಪಟ್ಟು ಹೆಚ್ಚು ವೇತವನ್ನ ಪಡೆಯುತ್ತಿದ್ದರು. ಆದರೆ ಈಗ ಅವರ ಅನುಭವದ 4-5 ರಷ್ಟು ಹೆಚ್ಚು ವೇತನವನ್ನ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.

ಇನ್ನೂ ನೆಟ್‌ವರ್ಕಿಂಗ್‌ ಉದ್ಯಮದಲ್ಲಿ, ಎಲ್ಲಾ ಹೊಸ ಡಿಜಿಟಲ್ ಟೆಕ್ನಾಲಜಿಗಳಿಂದ ವೇತನದಲ್ಲಿ ಹೆಚ್ಚಳ ಕಂಡುಬಂದಿದೆ. ಜೂಲಿಯಾ ಕಂಪ್ಯೂಟಿಂಗ್ ಸಿಇಓ ವಿರಾಲ್ ಶಾ ಅವರ ಪ್ರಕಾರ, ದ್ವಿಭಾಷಾ ಪ್ರೊಗ್ರಾಮರ್‌ಗಳಿಗೆ ಕೇವಲ ಪ್ರೊಗ್ರಾಮ್ ಮಾಡುವುದಲ್ಲದೇ ಅದರ ಡೊಮೈನ್ ಅನ್ನು ಇನ್ನಷ್ಟು ಆಳವಾಗಿ ತಿಳಿದಿರುವವರಿಗೆ ಅತಿ ಹೆಚ್ಚು ವೇತನ ಸಿಗುತ್ತಿದೆ ಎಂದು ಹೇಳಿದ್ದಾರೆ.

ಕನ್ಸ್ಯೂಮರ್ ಪ್ಯಾಕೇಜ್ಡ್ ಗೂಡ್ಸ್ ಇಂಡಸ್ಟ್ರಿಯಾದ ಹಿಂದೂಸ್ತಾನ್ ಯೂನಿಲಿವರ್, ಪಿ&ಜಿ ಮತ್ತು ಬ್ರಿಟಾನಿಯಾ ನಂತಹ ಕಂಪನಿಗಳು ತಮ್ಮ ಅಭ್ಯರ್ಥಿಗಳನ್ನ ಬಿ-ಸ್ಕೂಲ್ ಕ್ಯಾಂಪಸ್ ನಲ್ಲಿಯೇ ನೇಮಿಸಿಕೊಳ್ಳುತ್ತಿದ್ದು, ಪ್ರತಿಭೆಯುಳ್ಳವರನ್ನು ಸುಲಭವಾಗಿ ಕೆಲಸಕ್ಕೆ ನೇಮಿಸಿಕೊಳ್ಳಲು ಉಪಯುಕ್ತವಾಗಿದೆ ಎಂದು ಬ್ರಿಟಾನಿಯಾ ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿ ರಿತೇಶ್ ರಾಣಾ ಹೇಳಿದ್ದಾರೆ.

ಲಿಂಕ್ಡ್‌ಇನ್ ನಡೆಸಿದ ಅತಿಹೆಚ್ಚು ವೇತನವನ್ನ ನೀಡುವ ನಗರದ ಸಮೀಕ್ಷೆಯಲ್ಲಿ ಮೂರನೇ ಸ್ಥಾನದಲ್ಲಿ ಹೈದರಾಬಾದ್ 8.5 ಲಕ್ಷ ರೂ. ಮತ್ತು ನಾಲ್ಕನೇ ಸ್ಥಾನದಲ್ಲಿ ಚೆನ್ನೈ 6.3 ಲಕ್ಷ ರೂ. ಗಳನ್ನ ನೀಡುತ್ತಿದೆ.

5 ಕೋಟಿ ಬಳಕೆದಾರರನ್ನ ಹೊಂದಿರುವ ಲಿಂಕ್ಡ್‌ಇನ್ ಈ ವಿಚಾರವಾಗಿ ಕಳೆದ ಎರಡು ತಿಂಗಳಿನಿಂದ ಸಮೀಕ್ಷೆಯನ್ನ ನಡೆಸುತ್ತಿದ್ದು, ಬಳಕೆದಾರರಿಂದ ಮಾಹಿತಿಯನ್ನ ಕಲೆಹಾಕುತ್ತಿದೆ. ಇದರಿಂದ ಯಾವ ಯಾವ ಕಂಪನಿಗಳು ಎಷ್ಟು ವೇತನವನ್ನ ನೀಡುತ್ತದೆ ಮತ್ತು ಕೆಲಸಗಾರರಿಗೆ ವೇತನದ ಪಾರದರ್ಶಕತೆಯನ್ನ ತೋರಿಸುವುದಕ್ಕೆ ಈ ಅಧ್ಯಯನ ಸಹಕಾರಿಯಾಗಲಿದೆ ಎಂದು ಭಾರತದ ಲಿಂಕ್ಡ್‌ಇನ್ ಮುಖ್ಯಾಧಿಕಾರಿ ಅಜಯ್ ದತ್ತಾ ಹೇಳಿದ್ದಾರೆ.


ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *