ಸು ಫ್ರಂ ಸೋ ರೀತಿ ಈ ಸರ್ಕಾರ ಬಿ ಫ್ರಂ ಸಿ – ಕಾಂಗ್ರೆಸ್ ವಿರುದ್ಧ ಸುನಿಲ್ ಕುಮಾರ್ ವಾಗ್ದಾಳಿ

Public TV
1 Min Read

ಬೆಂಗಳೂರು: ಸು ಫ್ರಂ ಸೋ (Su From So) ಸಿನಿಮಾ ಹೆಸರಿನ ಹಾಗೆ ಈ ಸರ್ಕಾರ ಬಿ ಫ್ರಂ ಸಿ (B From C) ಅಂತ ಬಿಜೆಪಿ ಶಾಸಕ ಸುನೀಲ್ ಕುಮಾರ್ (SunilKumar) ವಿಧಾನಸಭೆಯಲ್ಲಿ ವಾಗ್ದಾಳಿ ನಡೆಸಿದರು.

ಅನುದಾನ ತಾರತಮ್ಯ ಬಗ್ಗೆ ಮಾತಾಡಿದ ಅವರು, ಸು ಫ್ರಂ ಸೋ ಸಿನಿಮಾ ಬಹಳ ಫೇಮಸ್ ಆಗಿದೆ. ಈ ಸರ್ಕಾರ ಬಿ ಫ್ರಂ ಸಿ ಅಂತ ನಾನು ಹೇಳುತ್ತೇನೆ. ಅಂದರೆ ಬೋಗಸ್ ಫ್ರಂ ಕಾಂಗ್ರೆಸ್ ಅಂತ. ಕಳೆದೆರಡು ವರ್ಷದಲ್ಲಿ ನಮ್ಮ ಕ್ಷೇತ್ರಗಳಲ್ಲಿ ಏನೂ ಅಭಿವೃದ್ಧಿ ಆಗಿಲ್ಲ. ಇದು ಇಲ್ಲಗಳ ಸರ್ಕಾರ ಅಂತ ಹೇಳೋದು ಸೂಕ್ತ ಎಂದು ಕಿಡಿಕಾರಿದರು. ಇದನ್ನೂ ಓದಿ: ಉಪ ರಾಷ್ಟ್ರಪತಿ ಚುನಾವಣೆಗೆ ಇಂಡಿಯಾ ಒಕ್ಕೂಟದ ಅಭ್ಯರ್ಥಿಯಾಗಿ ನ್ಯಾ. ಬಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ವಿಪಕ್ಷ ಶಾಸಕರಿಗೆ ಈಗಲೇ ಅನುದಾನ ಕೊಡ್ತೀರೋ? ಅಥವಾ ನವೆಂಬರ್ ಕ್ರಾಂತಿಯ ಬಳಿಕ ಕೊಡ್ತೀರೋ? ಹೊಸ ಸಿಎಂ ಬಂದ ಮೇಲೆ ಕೊಡ್ತೀರೋ? ವಯನಾಡಿಗೆ 10 ಕೋಟಿ ಕೊಟ್ಟಿದ್ದೀರಿ. ವಯನಾಡು ಭೂಕುಸಿತಕ್ಕೆ ಹತ್ತು ಕೋಟಿ ಕೊಡುವಷ್ಟು ನಾಡಿಮಿಡಿತ ಇದೆ ಸರ್ಕಾರಕ್ಕೆ. ಮಲೆನಾಡಿನ ಪ್ರಾಕೃತಿಕ ವಿಕೋಪಕ್ಕೆ ಸರ್ಕಾರ ಯಾಕೆ ಸ್ಪಂದಿಸಲ್ಲ. ವಯನಾಡಿಗೆ ಇರುವ ನಾಡಿಮಿಡಿತ ಮಲೆನಾಡಿಗೆ ಯಾಕಿಲ್ಲ? ಇಲ್ಲಿಯವರೆಗೆ ಮಳೆ ವಿಕೋಪಕ್ಕೆ ಸರ್ಕಾರ ಅನುದಾನ ಕೊಟ್ಟಿಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ಕರ್ನಾಟಕದಲ್ಲಿ ಮತ್ತೆ ಬೈಕ್ ಟ್ಯಾಕ್ಸಿ ಸೇವೆ ಆರಂಭ

Share This Article