ಬಾಕ್ಸಿಂಗ್ ಲೆಜೆಂಡ್ ಟೈಸನ್ ಫಸ್ಟ್ ಲುಕ್‍ಗೆ ಅಭಿಮಾನಿಗಳು ಫಿದಾ

Public TV
2 Min Read

ಚೆನ್ನೈ: ಬಾಕ್ಸಿಂಗ್ ಲೆಜೆಂಡ್ ಮೈಕ್ ಟೈಸನ್ ನಟನೆಯ ‘ಲೈಗರ್’ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಪೋಸ್ಟ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

‘ಅರ್ಜುನ್ ರೆಡ್ಡಿ’ ಖ್ಯಾತಿಯ ವಿಜಯ್ ದೇವರಕೊಂಡ ಮುಖ್ಯಭೂಮಿಕೆಯಲ್ಲಿ ಮೂಡಿಬರುತ್ತಿರುವ ಚಿತ್ರದಲ್ಲಿ ಬಾಕ್ಸಿಂಗ್ ಲೆಜೆಂಡ್ ಮೈಕ್ ಟೈಸನ್ ಕೂಡ ನಟಿಸಿದ್ದಾರೆ. ದೀಪಾವಳಿ ಪ್ರಯುಕ್ತ ಐರನ್ ಮೈಕ್ ಅವರ ಫಸ್ಟ್ ಲುಕ್ ಅನ್ನು ಇಂದು ಬಿಡುಗಡೆ ಮಾಡಲಾಗಿದೆ. ಈ ಪೋಸ್ಟ್ ನೋಡಿದ ಅವರ ಅಭಿಮಾನಿಗಳು ಸಖತ್ ಖುಷಿಯಾಗಿದ್ದು, ವಾವ್ಹ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಯೇ ಭಾರತೀಯ ಸಿನಿಮಾದಲ್ಲಿ ನಟಿಸುತ್ತಿರುವ ಇವರ ಪಾತ್ರದ ಬಗ್ಗೆ ಎಲ್ಲರಿಗೂ ಕುತೂಹಲವಿದೆ.

ಬಾಕ್ಸಿಂಗ್ ನಲ್ಲಿ ಇಡೀ ಜಗತ್ತಿಗೆ ದೊಡ್ಡ ಹೆಸರು ಮೈಕ್ ಟೈಸನ್. ಇವರನ್ನು ಐರನ್ ಮ್ಯಾನ್ ಎಂದು ಸಹ ಕರೆಯುತ್ತಾರೆ. ಬಾಕ್ಸಿಂಗ್ ರಿಂಗ್ ಗೆ ಬಂದರೆ ಇವರನ್ನು ಸೋಲಿಸಲು ಯಾರಿಂದಲೂ ಆಗುವುದಿಲ್ಲ. ಇವರನ್ನು ಕರೆತರುತ್ತೇವೆ ಎಂದು ಚಿತ್ರತಂಡ ಇತ್ತೀಚೆಗೆ ಫೋಷಣೆ ಮಾಡಿತ್ತು. ಇಂದು ಅವರ ಫಸ್ಟ್ ಲುಕ್ ಅನ್ನು ರಿಲೀಸ್ ಮಾಡಿದೆ. ಇದನ್ನೂ ಓದಿ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಪರಿಸರ ಸ್ನೇಹಿ ಅರಿವು ಮೂಡಿಸಿದ ಪಬ್ಲಿಕ್ ಹೀರೋ

ಈ ವೇಳೆ ಮೈಕ್ ಅವರು ಚಿತ್ರತಂಡಕ್ಕೆ ಕೆಲವು ಷರತ್ತುಗಳನ್ನು ಹಾಕಿದ್ದು, ನನ್ನ ಭಾಗದ ಶೂಟಿಂಗ್ ಅನ್ನು ಅಮೆರಿಕಾದಲ್ಲಿಯೇ ಮಾಡಬೇಕು. ಆಗ ಮಾತ್ರ ನಾನು ನಿಮ್ಮ ಸಿನಿಮಾದಲ್ಲಿ ನಟಿಸುತ್ತೇನೆ ಎಂದು ಹೇಳಿದ್ದರು. ಅದರಂತೆ ಚಿತ್ರತಂಡ ಅಮೆರಿಕಕ್ಕೆ ಪ್ರಯಾಣ ಬೆಳೆಸಿ ಶೂಟಿಂಗ್ ಪೂರ್ಣಗೊಳಿಸಿಕೊಂಡು ಬಂದಿದೆ.

ಮೈಕ್ ಅವರ ಫಸ್ಟ್ ಲುಕ್ ಎಲ್ಲರ ಗಮನ ಸೆಳೆದಿದ್ದು, ಈ ಪೋಸ್ಟ್ ಅಲ್ಲಿ ಮೈಕ್ ಅವರ ಮುಖದಲ್ಲಿ ಕೋಪ ಮತ್ತು ಅವರ ಕೈಯ ಬೆಂಕಿಯ ಚಂಡಿದ್ದು, ಥ್ರಿಲಿಂಗ್ ಮೂವೀ ಎಂಬುದು ಈ ಪೋಸ್ಟ್ ಮೂಲಕ ತಿಳಿದುಬರುತ್ತೆ. ಪೋಸ್ಟ್ ನೋಡಿ ಇನ್ನೂ ಈ ಸಿನಿಮಾದಲ್ಲಿ ಇವರ ಪಾತ್ರ ಯಾವುದು? ಹೇಗೆ ಕಾಣಿಸಿಕೊಳ್ಳುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಮೂಡಿದೆ.

ಮೈಕ್ ಅವರು ಅತಿಥಿ ಪಾತ್ರ ಮಾಡುತ್ತಿದ್ದರೂ, ಅವರನ್ನು ಹೇಗೆ ತೋರಿಸಲಾಗಿದೆ? ಚಿತ್ರಕಥೆ ಹೇಗೆ ಮೂಡಿಬರುತ್ತೆ ಕಾದು ನೋಡಬೇಕು. ಇನ್ನೂ ಇವರು ಕ್ಲೈಮ್ಯಾಕ್ಸ್ ಗಿಂತಲೂ ಮುನ್ನ ಬರುತ್ತಾರೆ ಎಂದು ಚಿತ್ರತಂಡ ತಿಳಿಸಿದೆ. ಮೈಕ್ ಅವರ ಅತಿಥಿ ಪಾತ್ರಕ್ಕೆ ವಿಜಯ್ ಗಿಂತಲೂ ಹೆಚ್ಚು ಸಂಭವಾನೆಯನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ. ಈ ಚಿತ್ರಕ್ಕೆ ಪುರಿ ಜಗನ್ನಾಥ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದನ್ನೂ ಓದಿ: RSS ಬಗ್ಗೆ ಮಾತನಾಡಿದರೆ ವೋಟು ಬರಲ್ಲ: ಪ್ರೀತಂಗೌಡ ವ್ಯಂಗ್ಯ

Share This Article
Leave a Comment

Leave a Reply

Your email address will not be published. Required fields are marked *