ಸಿಎಂ ಸ್ವಕ್ಷೇತ್ರದಲ್ಲಿ ಮಹಿಳಾ ಅಧಿಕಾರಿಗೆ ಧಮ್ಕಿ ಪ್ರಕರಣ – 20 ಎಕ್ರೆ ಒತ್ತುವರಿ ಜಾಗ ಸರ್ಕಾರದ ವಶಕ್ಕೆ

1 Min Read

– ಅರಣ್ಯಕ್ಕೆ ಬೆಂಕಿ; 30 ಎಕ್ರೆ ಕುರುಚಲು ಕಾಡು ನಾಶ

ಮೈಸೂರು: ಸಿಎಂ ಸ್ವಕ್ಷೇತ್ರದಲ್ಲಿ ಮಹಿಳಾ ಅಧಿಕಾರಿಗೆ ವ್ಯಕ್ತಿಯೊಬ್ಬ ಧಮ್ಕಿ (Life Threatening Case) ಹಾಕಿದ್ದ ಪ್ರಕರಣದಲ್ಲಿ ಸ್ಥಳಕ್ಕೆ ಮೈಸೂರು ತಾಲೂಕು ತಹಸಿಲ್ದಾರ್ ಮಹೇಶ್ ಭೇಟಿ ನೀಡಿ ಪರಿಶೀಲದ್ದು, ಒತ್ತುವರಿಯಾಗಿದ್ದ 20 ಎಕರೆ ಸರ್ಕಾರ ಜಾಗವನ್ನ ವಶಕ್ಕೆ ಪಡೆದಿದ್ದಾರೆ.

ಇದೇ ಜಾಗದಲ್ಲಿ ಸಿಎಂ ಕನಸಿನ ನಿಮ್ಹಾನ್ಸ್ ಆಸ್ಪತ್ರೆ ನಿರ್ಮಾಣವಾಗಲಿದೆ. ಇದನ್ನೂ ಓದಿ: ಸಿಎಂ ತವರು ಕ್ಷೇತ್ರದಲ್ಲೇ ಮಹಿಳಾ ಅಧಿಕಾರಿಗೆ ಧಮ್ಕಿ

threat to women officer

2025ರ ಡಿ.31 ರಂದು ಗುಡಮಾದನಹಳ್ಳಿಯಲ್ಲಿರುವ ಒತ್ತುವರಿ ಜಾಗ ವೀಕ್ಷಣೆಗೆ ಗ್ರಾಮ ಆಡಳಿತ ಮಹಿಳಾ ಅಧಿಕಾರಿ (Women Officer) ಜಿ ಭವ್ಯ ಹಾಗೂ ಗ್ರಾಮ ಸಹಾಯಕ ನವೀನ್ ತೆರಳಿದ್ದರು. ಈ ವೇಳೆ ಜಿ.ಎಂ ಪುಟ್ಟಸ್ವಾಮಿ ಎಂಬ ವ್ಯಕ್ತಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಧಮ್ಕಿ ಹಾಕಿದ್ದ.

ಕಳೆದ ಹಲವು ದಿನಗಳಿಂದ ಇದೇ ಸ್ಥಳದಲ್ಲಿ ರೈತರು ಭೂಮಿ ವಶಪಡೆಯದಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರು. ಒತ್ತುವರಿಯಾಗಿರುವ ಜಾಗ ಸರ್ಕಾರಕ್ಕೆ ಸೇರಿದ್ದ ಜಾಗ ಎಂದು ರೈತರಿಗೆ ತಿಳಿ ಹೇಳಿದ ತಹಸಿಲ್ದಾರ್ ಮಹೇಶ್. ನಂತರ ರೈತರು ಪ್ರತಿಭಟನೆ ವಾಪಸ್ ಪಡೆದರು. ಇದನ್ನೂ ಓದಿ: ಕುಮಾರಸ್ವಾಮಿ ಕಾಲದಲ್ಲಿ ಅವ್ರೇ ಮಹಿಳಾ ಅಧಿಕಾರಿಗೆ ಹೆದರಿಸಿದ್ದರು: ಹೆಚ್‌.ಸಿ ಮಹದೇವಪ್ಪ

ಅರಣ್ಯಕ್ಕೆ ಬೆಂಕಿ
ಮೈಸೂರು ಜಿಲ್ಲೆಯ ಹುಣಸೂರು ತಾಲೂಕು ವ್ಯಾಪ್ತಿಯಲ್ಲಿನ ಸೊಳ್ಳೆಪುರ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿ ಕೊಂಡಿದ್ದು ಬೆಂಕಿಗೆ ಸುಮಾರು 30 ಎಕರೆ ಕುರುಚಲು ಕಾಡುನಾಶವಾಗಿದೆ. ಬೆಂಕಿ ಆಕಸ್ಮಿಕವೋ ಅಥವಾ ಕಿಡಿಗೇಡಿಗಳ ಕೃತ್ಯವೋ ಬಗ್ಗೆ ಅರಣ್ಯ ಇಲಾಖೆ ತನಿಖೆ ಶುರುಮಾಡಿದೆ.

ಅರಣ್ಯ ಸಮಿತಿ ಯುವಕರ ಸಹಕಾರದಿಂದ ಬೆಂಕಿ ನಂದಿಸಲಾಗಿದೆ‌. ಹುಣಸೂರು ಪ್ರಾದೇಶಿಕ ಅರಣ್ಯ ವಿಭಾಗದ ಸೊಳ್ಳೆಪುರ ಅರಣ್ಯ ಪ್ರದೇಶದ ಟಿಬೆಟ್ ಕ್ಯಾಂಪ್ ಬಳಿಯ ಅರಣ್ಯದಲ್ಲಿ ಈ ಘಟನೆ ನಡೆದಿದ್ದು 4 ವರ್ಷಗಳ ಹಿಂದೆ ಅರಣ್ಯ ಇಲಾಖೆವತಿಯಿಂದ ನೆಟ್ಟಿದ್ದ ಹಣ್ಣಿನ ಗಿಡ, ಬಿದಿರು ಸಸಿಗಳು ಸಹ ಹಾಗೂ ಸುಮಾರು ಹುಲ್ಲುಗಾವಲು ಬೆಂಕಿಗಾಹುತಿಯಾಗಿದೆ. ಇದನ್ನೂ ಓದಿ: ಸಿಎಂ, ಡಿಸಿಎಂ ಜೊತೆ ರಾಹುಲ್ ಪ್ರತ್ಯೇಕ ಮಾತುಕತೆ – ತಿಂಗಳಾಂತ್ಯಕ್ಕೆ ದೆಹಲಿಗೆ ಬುಲಾವ್ ಭರವಸೆ

Share This Article