ಪ್ರಿಯಾಂಕ್ ಖರ್ಗೆಗೆ ಕೊಲೆ ಬೆದರಿಕೆ ಪ್ರಕರಣ; ಇದು ಯಾರಾದ್ರೂ ನಂಬುವ ಮಾತಾ?: ಉಮೇಶ್ ಜಾಧವ್ ವಾಗ್ದಾಳಿ

Public TV
1 Min Read

ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆಗೆ (Priyank Kharge) ಕೊಲೆ ಬೆದರಿಕೆ ಪತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿಯಾಂಕ್ ಖರ್ಗೆ ವಿರುದ್ಧ ಸಂಸದ ಉಮೇಶ್ ಜಾಧವ್ (Umesh Jadhav) ವಾಗ್ದಾಳಿ ನಡೆಸಿದ್ದು, ಇದು ಯರಾದ್ರೂ ನಂಬುವ ಮಾತಾ ಎಂದು ಪ್ರಶ್ನಿಸಿದ್ದಾರೆ.

ಕಲಬುರಗಿಯ ಜೇವರ್ಗಿ ಕಾರ್ಯಕರ್ತರ ಸಮಾವೇಶದಲ್ಲಿ ಈ ಕುರಿತು ಮಾತನಾಡಿದ ಅವರು, 15 ದಿನಗಳ ಹಿಂದೆ ಕೊಲೆ ಬೆದರಿಕೆ ಪತ್ರ ಬಂದಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳುತ್ತಾರೆ. 8 ದಿನಗಳ ಹಿಂದೆ ದೂರು ನೀಡಿದ್ದೇನೆ ಎನ್ನುತ್ತಾರೆ. ಇನ್ನೂ 8 ದಿನ ನೀವೇನು ಮಲಗಿದ್ದಿರಾ? 24 ಗಂಟೆಯಲ್ಲೇ ಫೇಕ್ ಲೆಟರ್ ಬರೆದವರನ್ನು ಬಂಧಿಸಿ ಒದ್ದು ಒಳಗೆ ಹಾಕಬೇಕು. ನಿಮಗೆ ಅಧಿಕಾರ, ಪವರ್ ಇಲ್ವಾ ಎಂದು ಕಿಡಿಕಾರಿದರು. ಇದನ್ನೂ ಓದಿ: ಕಾಲೇಜು ವಿದ್ಯಾರ್ಥಿಗೆ ಬಂತು ಬರೋಬ್ಬರಿ 46 ಕೋಟಿ ಮೊತ್ತದ ಟ್ಯಾಕ್ಸ್‌ ನೋಟಿಸ್‌ – ವಿದ್ಯಾರ್ಥಿಗೆ ಶಾಕ್‌!

ಉಮೇಶ್ ಜಾದವ್ ಸಮಜಾಯಿಷಿ ಹೇಳಬೇಕು ಎಂದು ಖರ್ಗೆ ಹೇಳುತ್ತಾರೆ. ನೀವು ಎಐಸಿಸಿ ಅಧ್ಯಕ್ಷರ ಪುತ್ರರಾಗಿದ್ದೀರಿ. ನಿಮ್ಮ ಅಧಿಕಾರ ಬಳಸಿ. ನಾನು ಓರ್ವ ಸ್ವಾತಂತ್ರ‍್ಯ ಹೋರಾಟಗಾರರ ಮಗನಾಗಿದ್ದೇನೆ. ನಾನು ಯಾಕೆ ಸಮಜಾಯಿಷಿ ಹೇಳಬೇಕು? ನೀವೇನು ಮಂತ್ರಿ ಅಲ್ವಾ? ನಿಮ್ಮ ಅಧಿಕಾರ ಉಪಯೋಗಿಸಿ. ಕೊಲೆ ಬೆದರಿಕೆ ಪತ್ರ ಸಚಿವರಿಗೆ ಬಂದಿದೆ ಅಂದರೆ ಯಾರಾದ್ರು ನಂಬುತ್ತೀರಾ ಎಂದು ಹರಿಹಾಯ್ದರು. ಇದನ್ನೂ ಓದಿ: ರಾಹುಲ್‌ ಗಾಂಧಿ ವಿರುದ್ಧ ಕಣಕ್ಕಿಳಿದಿರೋ ಬಿಜೆಪಿ ಅಭ್ಯರ್ಥಿ ಮೇಲೆ 242 ಕ್ರಿಮಿನಲ್‌ ಕೇಸ್‌

Share This Article