ನ್ಯೂಯಾರ್ಕ್‍ನಲ್ಲಿ ಗಾಂಧೀಜಿ ವಿಗ್ರಹ ಧ್ವಂಸಗೊಳಿಸಿದ ದುಷ್ಕರ್ಮಿಗಳು!

Public TV
1 Min Read

ನ್ಯೂಯಾರ್ಕ್: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ವಿಗ್ರಹವನ್ನು ನ್ಯೂಯಾರ್ಕ್‍ನಲ್ಲಿ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ.

ಮ್ಯಾನ್‍ಹ್ಯಾಟನ್ ಬಳಿಯ ಯೂನಿಯನ್ ಸ್ಕ್ವೇರ್‍ನಲ್ಲಿ ಮಹಾತ್ಮ ಗಾಂಧೀಜಿ ಕಂಚಿನ ಪ್ರತಿಮೆಯನ್ನು ನಿಲ್ಲಿಸಲಾಗಿತ್ತು. ಆದರೆ ಇಂದು ಕೆಲ ದುಷ್ಕರ್ಮಿಗಳು ಗಾಂಧೀಜಿ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾರೆ. ಈ ಕೃತ್ಯವನ್ನು ಭಾರತೀಯ ಕಾನ್ಸುಲೇಟ್ ಜನರಲ್ ‘ತುಚ್ಫ’ ಕೆಲಸವೆಂದು ಖಂಡಿಸಿದ್ದಾರೆ. ಈ ಮೂಲ ಭಾರತೀಯ-ಅಮೆರಿಕನ್ ಸಮುದಾಯದಲ್ಲಿ ಆಘಾತ ಮತ್ತು ನಿರಾಶೆಯನ್ನು ಉಂಟಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಅಪ್ರಾಪ್ತೆಯನ್ನು ಗರ್ಭಿಣಿ ಮಾಡಿದ ವಿವಾಹಿತನಿಗೆ 10 ವರ್ಷ ಜೈಲು, 25 ಸಾವಿರ ದಂಡ

ಶನಿವಾರ ಮುಂಜಾನೆ ಈ ಘಟನೆ ನಡೆದಿದ್ದು, ಕೆಲವು ಅಪರಿಚಿತ ವ್ಯಕ್ತಿಗಳು ಪ್ರತಿಮೆಯನ್ನು ವಿರೂಪಗೊಳಿಸಿದ್ದಾರೆ ಎಂದು ನ್ಯೂಯಾರ್ಕ್‍ನಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ತಿಳಿಸಿದ್ದಾರೆ. ಈ ವಿಧ್ವಂಸಕ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ವಿರೋಧಿಸಿದರು. ಪ್ರಕರಣ ಕುರಿತು ಯುಎಸ್ ಸ್ಟೇಟ್ ಡಿಪಾಟ್ರ್ಮೆಂಟ್ ತನಿಖೆಯನ್ನು ಕೈಗೊಂಡಿದೆ. ಈ ಹೇಯ ಕೃತ್ಯಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮಕ್ಕೆ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದೆ.

8 ಅಡಿ ಎತ್ತರದ ಪ್ರತಿಮೆಯನ್ನು ಗಾಂಧಿ ಮೆಮೋರಿಯಲ್ ಇಂಟರ್‍ನ್ಯಾಶನಲ್ ಫೌಂಡೇಶನ್ ಕೊಡುಗೆಯಾಗಿ ನೀಡಿತು. ಈ ಪ್ರತಿಮೆಯನ್ನು 1986 ರ ಅಕ್ಟೋಬರ್ 2 ರಂದು ಗಾಂಧೀಜಿ ಅವರ 117ನೇ ಜನ್ಮದಿನದಂದು ಸಮರ್ಪಿಸಲಾಯಿತು. ಈ ಸಮಾರಂಭದಲ್ಲಿ ಅಮೆರಿಕದ ನಾಗರಿಕ ಹಕ್ಕುಗಳ ನಾಯಕ ಬೇಯಾರ್ಡ್ ರಸ್ಟಿನ್ ಮುಖ್ಯ ಭಾಷಣ ಮಾಡಿದ್ದರು. ನಂತರ ಈ ಪ್ರತಿಮೆಯನ್ನು 2002ರಲ್ಲಿ ಲ್ಯಾಂಡ್‍ಸ್ಕೇಪ್ ಗಾರ್ಡನ್ ನಲ್ಲಿ ಮರುಸ್ಥಾಪಿಸಲಾಯಿತು. ಕಳೆದ ತಿಂಗಳು, ಅಪರಿಚಿತ ವ್ಯಕ್ತಿಗಳು ಯುಎಸ್ ಕ್ಯಾಲಿಫೋರ್ನಿಯಾದ ಉದ್ಯಾನವನದಲ್ಲಿ ಗಾಂಧಿಯವರ ಮತ್ತೊಂದು ಪ್ರತಿಮೆಯನ್ನು ಮುರಿದು ಕಿತ್ತುಹಾಕಿದ್ದರು. ಇದನ್ನೂ ಓದಿ: ಭಾರತಕ್ಕೆ ಇಂದು ಪ್ರಧಾನಿ ಇಲ್ಲ, ಏನೇ ಮಾಡಿದ್ರೂ ಜನ ಸುಮ್ಮನಿರಬೇಕೆನ್ನುವ ರಾಜನಿದ್ದಾನೆ: ರಾಗಾ

Share This Article
Leave a Comment

Leave a Reply

Your email address will not be published. Required fields are marked *