ಕ್ಯಾನ್ಸರ್‌ನಿಂದ ಜೀವನವೇ ಬದಲಾಯ್ತು – ಸಾವನ್ನು ಗೆದ್ದ ನಟಿ ಲೀಸಾ ರೇ ಬಿಚ್ಚಿಟ್ಟ ನಿಜ ಕಥೆ

Public TV
3 Min Read

ನವದೆಹಲಿ: ಕ್ಯಾನ್ಸರ್ (Cancer) ಕಾಯಿಲೆ ಒಮ್ಮೆ ಬಂತು ಎಂದರೆ ಅದರಿಂದ ಸಾವನ್ನು ಗೆಲ್ಲುವವರೇ ವಿರಳ. ಅಂತಹುದರಲ್ಲಿ ಸಾವನ್ನು ಗೆದ್ದಿದ್ದು ಮಾತ್ರವಲ್ಲದೇ ಸಮಾಜದಲ್ಲೂ ತನ್ನನ್ನು ತಾನು ಹಲವು ಸವಾಲುಗಳೊಂದಿಗೆ ಬದುಕಿಸಿಕೊಂಡ ನಟಿ, ರೂಪದರ್ಶಿ, ಲೇಖಕಿ ಲೀಸಾ ರೇ (Lisa Ray) ತಮ್ಮ ಆತ್ಮಕಥನವನ್ನು ಬಿಚ್ಚಿಟ್ಟಿದ್ದಾರೆ.

ಲೀಸಾ ರೇ ಹ್ಯೂಮನ್ಸ್ ಆಫ್ ಬಾಂಬೆಯಲ್ಲಿ ತಮ್ಮ ಕ್ಯಾನ್ಸರ್ ಜೀವನದ ಬದುಕು, ಹೋರಾಟಗಳನ್ನು ತಿಳಿಸಿದ್ದಾರೆ. ತಾವು ಹೇಗೆ ಕ್ಯಾನ್ಸರ್ ರೋಗದೊಂದಿಗೆ ಹೋರಾಡಿ, ಗೆದ್ದು, ಸಮಾಜದಲ್ಲಿ ಏಳು-ಬೀಳುಗಳ ನಡುವೆ ಗೆದ್ದು ನಿಂತಿರುವ ಬಗ್ಗೆ ತಿಳಿಸಿದ್ದಾರೆ.

ಅನಾರೋಗ್ಯದ ಹಿನ್ನೆಲೆ ಲೀಸಾ ರೇ ವೈದ್ಯರ ಬಳಿ ಹೋದಾಗ ಅವರು ತಮಗೆ ಕೆಂಪು ರಕ್ತ ಕಣಗಳು ಕಡಿಮೆಯಾಗಿರುವುದಾಗಿ ತಿಳಿಸಿದ್ದಾರೆ. ನಿಮಗೆ ಯಾವಾಗ ಬೇಕಾದರೂ ಹೃದಯ ಸ್ತಂಭನ ಆಗಬಹುದು ಎಂದು ವೈದ್ಯರು ತಿಳಿಸಿದಾಗಲೇ ಲೀಸಾ ತಮ್ಮ ಕೊನೆ ದಿನಗಳು ಸಮೀಪವಾದವು ಎಂದು ಅಂದುಕೊಂಡಿದ್ದರು. ಇದಾದ 1 ತಿಂಗಳಲ್ಲಿ ಅವರ ಆರೋಗ್ಯ ಇನ್ನಷ್ಟು ಕ್ಷೀಣಿಸಿದ್ದರಿಂದ ಮತ್ತೆ ವೈದ್ಯರನ್ನು ಸಂಪರ್ಕಿಸಿದ್ದರು. ಈ ವೇಳೆ ರಕ್ತ ಪರೀಕ್ಷೆಯಲ್ಲಿ ತಮಗೆ ಮೂಳೆ ಮಜ್ಜೆಯ ಪ್ಲಾಸ್ಮಾದ ಕ್ಯಾನ್ಸರ್ ಇರುವುದು ತಿಳಿದುಬಂದಿದೆ.

ತಮಗೆ ಕ್ಯಾನ್ಸರ್ ಇದ್ದ ವಿಷಯವನ್ನು ತಿಳಿದ ಲೀಸಾ ಒಂದು ಕ್ಷಣ ಉಸಿರಾಡುವುದನ್ನೇ ನಿಲ್ಲಿಸಿದ್ದರು. ಆಗಾಗಲೇ ಫ್ಯಾಶನ್ ಜಗತ್ತಿನಲ್ಲಿ ಮಿಂಚಿದ್ದ ರೇ ತಮ್ಮನ್ನು ಶಾಶ್ವತ ವಿಶ್ರಾಂತಿಗೆ ಮರಳುವ ರೀತಿಯಲ್ಲಿ ಒಂದು ಬಾರಿ ಹೋಲಿಸಿಕೊಂಡರು. ಈ ವೇಳೆ ಪುಸ್ತಕ ಬರೆಯಲು ಪ್ರಯತ್ನಿಸಿದ್ದ ಅವರು ಕೆಲಸದ ಕಾರಣಕ್ಕೆ ಅದರಿಂದ ದೂರವಾದರು ಎಂದು ತಮ್ಮ ಕಷ್ಟದ ಕ್ಷಣಗಳ ಮೊದಲ ಹಂತವನ್ನು ವಿವರಿಸಿದ್ದಾರೆ.

‘ಆದರೆ ಕ್ಯಾನ್ಸರ್ ನನ್ನ ಜೀವನವನ್ನು ಬದಲಿಸಿತು’. ಸಾವಿಗೆ ಹತ್ತಿರವಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿ, ಬಳಿಕ ಮರುಜನ್ಮವನ್ನೇನೋ ಪಡೆದ ಲೀಸಾ ಕೀಮೋಥೆರಪಿಯಿಂದಾಗಿ ತಮ್ಮ ಕೂದಲನ್ನು ಕಳೆದುಕೊಂಡಿದ್ದರು. ಇದರಿಂದ ಅವರು ತಮ್ಮ ಟ್ರಾವೆಲ್ ಚಾನೆಲ್‌ನ ಕೆಲಸವನ್ನೇ ಕಳೆದುಕೊಂಡರು. ಚಿಕಿತ್ಸೆಯ ಬಳಿಕ ವಿಗ್ ಧರಿಸಲು ಪ್ರಯತ್ನಿಸಿದ ಲೀಸಾ ಹಾಸ್ಯಾಸ್ಪದವಾಗಿ ಕಾಣಿಸಿಕೊಂಡು, ಬಳಿಕ ಅದನ್ನು ತಾವೇ ಕಳಚಿಡಲು ಮುಂದಾದರು. ತಮ್ಮ ಕೂದಲನ್ನು ಚಿಕ್ಕದಾಗಿರಿಸಿದ್ದರಿಂದ ಹಲವರು ನನ್ನನ್ನು ಇಷ್ಟಪಡುತ್ತಿರಲಿಲ್ಲ. ಚಾನೆಲ್‌ಗೂ ಉದ್ದ ಕೂದಲಿನ ಹುಡುಗಿ ಬೇಕಿತ್ತು. ಹೀಗಾಗಿ ತಾವು ಕೆಲಸ ಕಳೆದುಕೊಂಡಿದ್ದಾಗಿ ಹೃದಯವಿದ್ರಾವಕ ಕಥೆಯನ್ನು ತಿಳಿಸಿದ್ದಾರೆ. ಇದನ್ನೂ ಓದಿ: ಶೀಘ್ರದಲ್ಲೇ ಭಾರತದ ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸುವೆ ಎಂದು ಅಕ್ಷಯ್ ಕುಮಾರ್

3 ವರ್ಷಗಳ ಬಳಿಕ ತಮ್ಮ ಜೀವನ ಹಿಂದಿನಂತೆ ಮರುಕಳಿಸಿತು. ಮಾಡೆಲ್, ನಟಿಯಾಗಿ ಮತ್ತೆ ಪರದೆಯಲ್ಲಿ ಮಿಂಚಿದರು. ಆದರೆ ಮತ್ತೊಮ್ಮೆ ತನಗೆ ಕ್ಯಾನ್ಸರ್ ಕಾಡಿತ್ತು. ಆದರೆ ಈ ಬಾರಿ ತಮ್ಮ ಆತ್ಮ ಸ್ಥೈರ್ಯವನ್ನು ಕುಗ್ಗಿಸಲು ಬಿಡಲಿಲ್ಲ. ಈ ಬಾರಿ ಕೀಮೋಥೆರಪಿ ಬದಲು ಭಿನ್ನವಾಗಿ ಕ್ಯಾನ್ಸರ್‌ನೊಂದಿಗೆ ಹೋರಾಡಲು ಮುಂದಾದರು. ಧ್ಯಾನ ಮಾಡುವುದು, ಜ್ಯೂಸ್ ಸೇವಿಸುವುದು, ಮೊಳಕೆಯೊಡೆದ ಕಾಳುಗಳನ್ನು ಸೇವಿಸುವುದು ಮಾಡಿದರು. ಆಂತರಿಕವಾಗಿ ಕಾಯಿಲೆಯಿಂದ ಗುಣಮುಖವಾಗಿದ್ದಲ್ಲದೇ ಕ್ಯಾನ್ಸರ್ ಅನ್ನು ಸೋಲಿಸಿದರು ಎಂದು ತಾವು ಕ್ಯಾನ್ಸರ್ ಗೆದ್ದ ಕಥೆಯನ್ನು ಹೇಳಿದ್ದಾರೆ.

ಸಾವು-ಬದುಕಿನ ನಡುವೆ ಹೋರಾಡಿ ಇದೀಗ 9 ವರ್ಷ ಕಳೆದಿದೆ. ನಾನು ಹಲವು ಚಿತ್ರಗಳಲ್ಲಿ ನಟಿಸಿದ್ದೇನೆ, ಪುಸ್ತಕವನ್ನು ಬರೆದಿದ್ದೇನೆ, ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಿದ್ದೇನೆ, ಮಕ್ಕಳನ್ನು ಪಡೆದೆ, ನಾನು ಯೋಚಿಸದ ಕೆಲಸಗಳನ್ನೂ ಮಾಡಿದ್ದೇನೆ. ಸಾಮಾನ್ಯವಾಗಿ ಅಂತ್ಯವನ್ನು ತರುವ ಕಾಯಿಲೆ ತನ್ನ ಜೀವನವನ್ನು ಸಂಪೂರ್ಣವಾಗಿ ಹೇಗೆ ಬದಲಾಯಿಸಿತು, ಎಲ್ಲಕ್ಕಿಂತ ಮುಖ್ಯವಾಗಿ ನನ್ನನ್ನು ಹೆಚ್ಚು ಜೀವಂತವಾಗಿರುವಂತೆ ಮಾಡಿತು ಎಂದು ಲೀಸಾ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಲೀಸಾ ರೇ ಅವರು ದೀಪಾ ಮೆಹ್ತಾ ಅವರ ವಾಟರ್‌ನಲ್ಲಿನ ಪಾತ್ರಕ್ಕೆ ಹೆಚ್ಚು ಖ್ಯಾತಿಗಳಿಸಿದ್ದಾರೆ. ಕಸೂರ್, ವೀರಪ್ಪನ್ ಹಾಗೂ ದೋಬಾರಾ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಲಿಸಾ ರೇ ಎಂಡ್‌ಗೇಮ್, ಟಾಪ್ ಚೆಫ್ ಕೆನಡಾ, ಮರ್ಡೋಕ್ ಮಿಸ್ಟರೀಸ್, ಬ್ಲಡ್ ಟೈಸ್ ಮತ್ತು ಫೋರ್ ಮೋರ್ ಶಾಟ್ಸ್ ಪ್ಲೀಸ್! ನಂತಹ ಟಿವಿ ಶೋಗಳಲ್ಲಿ ನಟಿಸಿದ್ದಾರೆ. ಇದನ್ನೂ ಓದಿ: ನಿತ್ಯಾನಂದನ ದೇಶದಲ್ಲಿ ಉದ್ಯೋಗವಕಾಶ- ಹಣವಿಲ್ಲದಿದ್ರೂ ಕೈಲಾಸಕ್ಕೆ ಹೋದ್ರೆ ಕೈತುಂಬಾ ಸಂಬಳ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *