ಆರ್‌ಎಸ್‌ಎಸ್‌ಗಿಂತ ದೊಡ್ಡ ಸ್ವಯಂಸೇವ ಸಂಘ ವಿಶ್ವದಲ್ಲಿಲ್ಲ: ಮೋದಿ ಗುಣಗಾನ

Public TV
2 Min Read

– ಆರ್‌ಎಸ್‌ಎಸ್‌ನಿಂದ ನನ್ನ ಜೀವನದ ಉದ್ದೇಶ ಕಂಡುಕೊಂಡಿದ್ದೇನೆಂದ ಪ್ರಧಾನಿ

ನವದೆಹಲಿ: ಆರ್‌ಎಸ್‌ಎಸ್‌ಗಿಂತ ದೊಡ್ಡ ಸ್ವಯಂಸೇವ ಸಂಘ ಜಗತ್ತಿನಲ್ಲಿ ಇಲ್ಲ. ಆರ್‌ಎಸ್‌ಎಸ್‌ ನಂತಹ ಗೌರವಾನ್ವಿತ ಸಂಸ್ಥೆಯಿಂದ ನಾನು ಜೀವನದ ಸಾರ ಮತ್ತು ಮೌಲ್ಯಗಳನ್ನು ಕಲಿತಿದ್ದೇನೆ. ನಾನು ನನ್ನ ಜೀವನದ ಉದ್ದೇಶ ಕಂಡುಕೊಂಡಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಆರ್‌ಎಸ್‌ಎಸ್‌ ಗುಣಗಾನ ಮಾಡಿದರು.

ಲೆಕ್ಸ್ ಫ್ರಿಡ್‌ಮನ್ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಮೋದಿ ಅವರು, ಆರ್‌ಎಸ್‌ಎಸ್‌ ಜೊತೆಗಿನ ಸಂಬಂಧ ಹಾಗೂ ಹಳೆಯ ನೆನಪುಗಳನ್ನು ಹಂಚಿಕೊಂಡರು. ಇದನ್ನೂ ಓದಿ: ಲವ್ ಜಿಹಾದ್ ಕಲಿಸೋ ಮದರಸಾಗಳಿಗೆ ಸಿದ್ದರಾಮಯ್ಯ ಸರ್ಕಾರ ಹಣ ಕೊಡ್ತಿದೆ: ಯತ್ನಾಳ್ ಕೆಂಡ

ಆರ್‌ಎಸ್‌ಎಸ್‌ ನಂತಹ ಗೌರವಾನ್ವಿತ ಸಂಸ್ಥೆಯಿಂದ ನಾನು ಜೀವನದ ಸಾರ ಮತ್ತು ಮೌಲ್ಯಗಳನ್ನು ಕಲಿತಿದ್ದೇನೆ. ನಾನು ನನ್ನ ಜೀವನದ ಉದ್ದೇಶ ಕಂಡುಕೊಂಡಿದ್ದೇನೆ. ಬಾಲ್ಯದಲ್ಲಿ ಆರ್‌ಎಸ್‌ಎಸ್ ಕೂಟಗಳಲ್ಲಿ ಭಾಗವಹಿಸುವುದು ಸಂತೋಷವಾಗುತ್ತಿತ್ತು. ಆಗಲೂ ನನ್ನ ಮನಸ್ಸಿನಲ್ಲಿ ಯಾವಾಗಲೂ ಒಂದು ಗುರಿ ಇತ್ತು. ಅದರಂತೆ ದೇಶಕ್ಕೆ ಉಪಯೋಗವಾಗುವುದನ್ನು ಮಾಡಲು ‘ಸಂಘ’ ನನಗೆ ಕಲಿಸಿದೆ. ಈ ವರ್ಷ ಆರ್‌ಎಸ್‌ಎಸ್ 100 ವರ್ಷಗಳನ್ನು ಪೂರೈಸಿದೆ ಎಂಬುದು ಹೆಮ್ಮೆ ಎಂದು ಶ್ಲಾಘಿಸಿದರು.

ಆರ್‌ಎಸ್‌ಎಸ್‌ಗಿಂತ ದೊಡ್ಡ ‘ಸ್ವಯಂಸೇವ ಸಂಘ’ ಜಗತ್ತಿನಲ್ಲಿ ಇಲ್ಲ. ಆರ್‌ಎಸ್‌ಎಸ್‌ನ ಕಾರ್ಯವನ್ನು ಅರ್ಥಮಾಡಿಕೊಳ್ಳುವುದು ಸುಲಭದ ಕೆಲಸವಲ್ಲ. ನಮ್ಮ ವೈದಿಕ ಸಂತರು ಮತ್ತು ಸ್ವಾಮಿ ವಿವೇಕಾನಂದರು ಏನನ್ನು ಕಲಿಸಿದರೋ ಅದೇ ರೀತಿ ʻಸಮಾಜ ಸೇವೆಯೇ ದೇವರ ಸೇವೆʼ ಎಂದು ಸಂಘ ಕಲಿಸುತ್ತದೆ ಎಂದು ಹೇಳಿದರು.  ಇದನ್ನೂ ಓದಿ: ಬೆಳೆ ಹಾನಿಗೊಳಗಾದ ಪ್ರತಿ ರೈತರ ಜಮೀನು ಸಮೀಕ್ಷೆ ಮಾಡಿ: ಚೌಹಾಣ್‌ಗೆ ಬೊಮ್ಮಾಯಿ ಪತ್ರ

ಅಲ್ಲದೇ ಆರ್‌ಎಸ್‌ಎಸ್‌ನ ಕೆಲ ಸದಸ್ಯರು ಶಿಕ್ಷಣದಲ್ಲಿ ಕ್ರಾಂತಿ ತರಲು ʻವಿದ್ಯಾ ಭಾರತಿʼ ಎಂಬ ಸಂಘಟನೆಯನ್ನು ಪರಿಚಯಿಸಿದರು. ಅವರಿಂದು ದೇಶಾದ್ಯಂತ 70,000 ಶಾಲೆಗಳನ್ನು ನಡೆಸುತ್ತಿದ್ದಾರೆ. 30 ಲಕ್ಷ ವಿದ್ಯಾರ್ಥಿಗಳು ಏಕಕಾಲದಲ್ಲಿ ಶಾಲೆಗಳಲ್ಲಿ ಓದುತ್ತಿದ್ದಾರೆ ಎಂದು ಸ್ಮರಿಸಿದರು.  ಇದನ್ನೂ ಓದಿ: ಮಳವಳ್ಳಿ ವಸತಿ ಶಾಲೆಯ ದುರ್ಘಟನೆ – ಅಧಿಕಾರಿಗಳಿಂದ ಮಾಹಿತಿ ಪಡೆದ ಹೆಚ್‌ಡಿಕೆ; ಮೃತ ವಿದ್ಯಾರ್ಥಿಗೆ ಸಂತಾಪ

Share This Article