ರಾಜ್ಯದಲ್ಲಿ ಬರ ಘೋಷಣೆ ನಿಯಮ ಸಡಿಲಿಸುವಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಪತ್ರ

Public TV
2 Min Read

ಬೆಂಗಳೂರು: ರಾಜ್ಯದಲ್ಲಿ ಬರ (Karnataka Drought) ಘೋಷಣೆ ಮಾಡುವ ಸಂಬಂಧ‌ ನಿಯಮಗಳನ್ನು ಸಡಿಲಿಸುವಂತೆ ಕೋರಿ ರಾಜ್ಯ ಸರ್ಕಾರವು (Karnataka Govt) ಕೇಂದ್ರಕ್ಕೆ ಪತ್ರ ಬರೆದಿದೆ.

ಮಳೆ ಕೊರತೆಯಿಂದ ಹಲವು ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ. ಆದರೆ ಈ ತಾಲ್ಲೂಕುಗಳ ಬರ ಘೋಷಣೆಗೆ ಈಗಿರುವ ನಿಯಮಗಳು ಅಡ್ಡಿಯಾಗಿವೆ. ಹಾಗಾಗಿ ಬರ ಘೋಷಣೆಯ ಮಾನದಂಡಗಳನ್ನು ಬದಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಕೇಂದ್ರ ಸರ್ಕಾರವನ್ನು ಪತ್ರದಲ್ಲಿ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮುಸ್ಲಿಮರಿಗಷ್ಟೇ ಗಂಡಸ್ತನ ಮೀಸೆ ಇರೋದಲ್ಲ, ಹಿಂದೂ ಹುಡುಗರಿಗೂ ಇದೆ: ಸ್ವಾಮೀಜಿಯಿಂದ ವಿವಾದಾತ್ಮಕ ಹೇಳಿಕೆ

ಕೇಂದ್ರದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ರಿಗೆ ಬರೆದಿರುವ ಈ ಪತ್ರದಲ್ಲಿ, ಈಗಿನ ನಿಯಮಗಳ ಪ್ರಕಾರ ರಾಜ್ಯದಲ್ಲಿ ಬರಪೀಡಿತ ಪ್ರದೇಶಗಳ ಘೋಷಣೆ ಮಾಡಿದರೆ ರೈತರು ಬೆಳೆ ವೈಫಲ್ಯದ ಸಂದರ್ಭದಲ್ಲಿ ಇನ್‌ಪುಟ್ ಸಬ್ಸಿಡಿಗಳನ್ನು ಕಳೆದುಕೊಳ್ಳುತ್ತಾರೆ. ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸುವುದಕ್ಕೆ ಕೇಂದ್ರ ಸರ್ಕಾರವು ಕೆಲವು ಕಠಿಣ ಮಾನದಂಡ ವಿಧಿಸಿದೆ. ಶೇ.60ರಷ್ಟು ಮಳೆ ಕೊರತೆ ಇರಬೇಕು. ಮೂರು ವಾರ ಮಳೆ ಇರಬಾರದೆಂಬ ನಿಯಮವಿದೆ. ಈಗ ಎಲ್ಲೂ ಶೇ.60 ಮಳೆ ಕೊರತೆ ಆಗಿಲ್ಲ. ಹೀಗಾಗಿ ಮಾನದಂಡ ಮರುಪರಿಶೀಲನೆಗೆ ಸಂಬಂಧಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.

ಪ್ರಸ್ತುತ ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಾಗಿದೆ. ಕರ್ನಾಟಕದಲ್ಲಿ 336 ಮಿ.ಮೀ ಸಾಮಾನ್ಯ ಮಳೆಯಾಗಬೇಕಿತ್ತು. ಆದರೆ 234 ಮಿ.ಮೀ ಮಳೆ ಬಿದ್ದಿದೆ. ದುರ್ಬಲ ಮಾನ್ಸೂನ್‌ನಿಂದ ಜೂನ್‌ನಲ್ಲಿ ಶೇ.56ರಷ್ಟು ಮಳೆ ಕೊರತೆಯಾಗಿದೆ. ರಾಜ್ಯದ ಹಲವಾರು ತಾಲ್ಲೂಕುಗಳಲ್ಲಿ ಬರಗಾಲದ ಪರಿಸ್ಥಿತಿ ಇದೆ. ಆದರೆ ಬರ ಘೋಷಿಸಲು ಈಗ ಇರುವ ನಿಯಮಾವಳಿಗಳಂತೆ ಆಗುತ್ತಿಲ್ಲ. ಹಾಗಾಗಿ, ಬರ ಘೋಷಣೆಯ ಮಾನದಂಡಗಳನ್ನು ಬದಲಿಸಲು ಮಧ್ಯಪ್ರವೇಶಿಸಬೇಕು ಎಂದು ಅವರು ಕೇಂದ್ರದ ಕೃಷಿ ಸಚಿವರನ್ನು ಪತ್ರದಲ್ಲಿ ಒತ್ತಾಯಿಸಿದ್ದಾರೆ. ಕೇಂದ್ರ ಸರ್ಕಾರದ ಮಾನದಂಡಗಳನ್ನು ಬಿಗಿ ಮಾಡಿರುವುದರಿಂದ ರಾಜ್ಯದ ಕೈ ಕಟ್ಟಿ ಹಾಕಿದಂತಾಗಿದೆ ಎಂದು ಪತ್ರದಲ್ಲಿ ವಿವರಿದ್ದಾರೆ. ಇದನ್ನೂ ಓದಿ: ನಾನು ಕಾಂಗ್ರೆಸ್‌ ಕಾರ್ಯಕರ್ತನಾಗಿ ಮೇಲೆ ಬಂದವನು, JDS ಕಚೇರಿಯಲ್ಲೇ ಕಾಂಗ್ರೆಸ್ ನನ್ನ ತಾಯಿ ಅಂದಿದ್ದೇನೆ: ವಿಶ್ವನಾಥ್

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್