ಗಣೇಶೋತ್ಸವಕ್ಕೆ ಡಬಲ್ ಸೌಂಡ್ ಹಚ್ಚಿ ಮೆರವಣಿಗೆ ಮಾಡಿ, ಏನ್ ಮಾಡ್ತಾರೆ ನೋಡೋಣ: ಪ್ರಮೋದ್ ಮುತಾಲಿಕ್

Public TV
2 Min Read

ದಾವಣಗೆರೆ: ಡಿಜೆ ಸೌಂಡ್ ಸಿಸ್ಟಮ್‌ಗೆ ಅನುಮತಿ ಪಡೆಯಬೇಡಿ, ಡಬಲ್ ಸೌಂಡ್ ಹಚ್ಚಿ, ಏನ್ ಮಾಡ್ತಾರೆ ನೋಡೋಣ. ಸುಪ್ರೀಂ ಕೋರ್ಟ್ ಹೆಸರು ಹೇಳುತ್ತಾ ನಮ್ಮನ್ನು ಹತ್ತಿಕ್ಕುವ ಕೆಲಸ ಸರ್ಕಾರ ಮಾಡುತ್ತಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಗಣೇಶ ಮಂಡಳಿಗಳಿಗೆ ಕರೆ ನೀಡಿದರು.

ದಾವಣಗೆರೆಯಲ್ಲಿ ಮಾತನಾಡಿದ ಅವರು, ನಾವು ಸೌಂಡ್ ಸಿಸ್ಟಮ್‌ಗೆ ಪರ್ಮಿಷನ್ ತೆಗೆದುಕೊಳ್ಳುವುದಿಲ್ಲ. ಸರ್ಕಾರ ಮೊದಲು ಮಸೀದಿ ಮೇಲಿರುವ ಲೌಡ್ ಸ್ಪೀಕರ್ ಅನುಮತಿ ಪಡೆದಿರುವುದನ್ನು ತೋರಿಸಲಿ. ಬಳಿಕ ನಾವು ಡಿಜೆಗೆ ಅನುಮತಿಯನ್ನು ಪಡೆಯುತ್ತೇವೆ. ಮೊದಲು ಮಸೀದಿ ಮೇಲಿರುವ ಲೌಡ್ ಸ್ಪೀಕರ್‌ಗಳ ಅನುಮತಿ ಬಗ್ಗೆ ದಾಖಲೆ ನೀಡಿ. ಇಂದಿಗೂ ಲೌಡ್ ಸ್ಪೀಕರ್ ಶಬ್ದ ನಿಂತಿಲ್ಲ, ಇಂದಿಗೂ ಕಿರಿಕಿರಿ ಆಗುತ್ತಿದೆ ಎಂದು ಕಿಡಿಕಾರಿದರು.

loud speaker

ನಮ್ಮ ಸೌಂಡ್ ಸಿಸ್ಟಮ್ ಅನ್ನು ನಿಲ್ಲಿಸಲು ನಿಮಗೆ ಹಕ್ಕಿಲ್ಲ. ಗಣೇಶೋತ್ಸವಕ್ಕೆ ಯಾವುದೇ ನಿರ್ಬಂಧ ಹೇರಬೇಡಿ. ಗಲಭೆ ಆಗದಂತೆ ಮುಂಜಾಗೃತಾ ಕ್ರಮ ವಹಿಸುತ್ತೇವೆ. ಗಣೇಶನ ಕೂರಿಸಲು ಅನುಮತಿ ಪಡೆಯುವ ಪ್ರಕ್ರಿಯೆ ಸರಿ ಅಲ್ಲ. ನೀವು ಸ್ವಾತಂತ್ರ‍್ಯ ಹರಣ ಮಾಡ್ಬೇಡಿ. ನಿಮ್ಮ ಅನುಮತಿ ಪಡೆಯುವ ಅವಶ್ಯಕತೆ ನಮಗಿಲ್ಲ. ನಮಗೆ ಮುಕ್ತವಾದ ಹಕ್ಕಿದೆ. ನಿಮಗೆ ಕೇಳಿಕೊಂಡು ಗಣೇಶೋತ್ಸವ ಮಾಡುವುದಿಲ್ಲ ಎಂದು ಸರ್ಕಾರದ ವಿರುದ್ಧ ಗುಡುಗಿದರು.

ಬೆಂಗಳೂರಿನ ಈದ್ಗಾ ಮೈದಾನದ ಜಾಗ ಸರ್ಕಾರದ್ದು ಎಂದು ನಿರ್ಧರಿಸಲಾಗಿದೆ. ಜಮೀರ್ ಅಹ್ಮದ್ ಸೇರಿ ಕೆಲ ಮುಸ್ಲಿಂ ನಾಯಕರು ಇದು ನಮ್ಮದು ಎಂದು ಹೇಳುತ್ತಿದ್ದವರ ಬಾಯಿ ಬಂದ್ ಆಗಿದೆ. ಸರ್ಕಾರದಿಂದ ಚಾಮರಾಜಪೇಟೆ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುವುದನ್ನು ನಾನು ಸ್ವಾಗತಿಸುತ್ತೇನೆ. ಅಲ್ಲಿ ಜಮೀರ್ ಅಹ್ಮದ್‌ಗೆ ಮಾತ್ರ ಅವಕಾಶ ಎಂದಲ್ಲ, ಅಲ್ಲಿ ಸಾರ್ವಜನಿಕರೂ ಆಗಮಿಸಬೇಕು. 75ನೇ ಸ್ವಾತಂತ್ರ‍್ಯೋತ್ಸವ ಮಾಡಬೇಕು. ಆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೂ ಅವಕಾಶ ಮಾಡಿಕೊಡಬೇಕು ಎಂದರು. ಇದನ್ನೂ ಓದಿ: ಹರ್ ಘರ್ ತಿರಂಗಾ ಅಭಿಯಾನಕ್ಕೆ ಸಿಎಂ ಚಾಲನೆ – ಭವ್ಯ ಭಾರತ ಕಟ್ಟಲು ಯುವಜನತೆ ಸನ್ನದ್ಧರಾಗುವಂತೆ ಕರೆ

ಅಲ್ಲಿ ಮುಸ್ಲಿಮರ ಧಾರ್ಮಿಕ ಚಟುವಟಿಕೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ನಾವು ಹಿಂದೂಗಳು ಏನ್ ಪಾಪ ಮಾಡಿದ್ದೇವೆ? ನಮಗೂ ಗಣೇಶೋತ್ಸವ ಆಚರಣೆ ಮಾಡಲು ಅವಕಾಶ ನೀಡಿ. ಸರ್ಕಾರ ಪ್ರತಿನಿಧಿಗಳೇ ನಿಮ್ಮ ಗಡ್ಸ್ ತೋರ್ಸಿ. ಅಲ್ಲಿ ಕೋಮು ಗಲಭೆ ಮಾಡಿದರೆ ಗುಂಡು ಹೊಡೀರಿ. ಗಣೇಶ ಮಂಡಳಿಯವರು ಯಾವಾಗಲೂ ಗಲಾಟೆ, ಗೊಂದಲ ಮಾಡುವುದಿಲ್ಲ. ಗಣೇಶೋತ್ಸವ ಆಚರಣೆ ಮೈದಾನದಲ್ಲಿ ಮಾಡಲಾಗುವುದಿಲ್ಲ ಎಂದು ಜಮೀರ್ ಸೊಕ್ಕಿನಿಂದ ಹೇಳಿದ್ದಾರೆ. ಜಮೀರ್ ನೀನು ಮುಸ್ಲಿಂ ಮತದಿಂದ ಗೆದ್ದಿಲ್ಲ, ಎಲ್ಲರಿಂದಲೂ ಗೆದ್ದಿದ್ದೀಯ. ನೀನು ಮುಸ್ಲಿಂ ಶಾಸಕ ಅಲ್ಲಪ್ಪ, ನೀನೇ ಮುಂದೆ ನಿಂತು ಗಣೇಶೋತ್ಸವ ಮಾಡ್ಬೇಕು ಎಂದರು.

ಪರೇಶ್ ಮೇಸ್ತಾ ಕೊಲೆ ಮಾಡಿದ ಎ1 ಆರೋಪಿ ಅಣ್ಣಿಗೇರಿಯನ್ನು ವಕ್ಫ್ ಬೋರ್ಡ್‌ನ ಉಪಾಧ್ಯಕ್ಷನಾಗಿ ಬಿಜೆಪಿ ಸರ್ಕಾರ ನೇಮಕ ಮಾಡಿರುವುದು ನಾಚಿಕೆಗೇಡಿನ ಸಂಗತಿ. ಅವನೊಬ್ಬ ಕೊಲೆಗಡುಕ, ಕ್ರಿಮಿನಲ್. ಕೊಲೆಗಡುಕನನ್ನು ವಕ್ಫ್ ಬೋರ್ಡ್ ಉಪಾಧ್ಯಕ್ಷನಾಗಿ ನೇಮಕ ಮಾಡಿದ ಅಧಿಕಾರಿಗಳನ್ನು ವಜಾ ಮಾಡಿ. ವಕ್ಫ್ ಬೋರ್ಡ್ ಅಧ್ಯಕ್ಷ ಶಫೀನೇ ಕೊಲೆಗಡುಕ, ಹಿಂದೂದ್ರೋಹಿ. ಅವನೇ ಕಾಂಗ್ರೆಸ್‌ನವರನ್ನು, ಕೊಲೆಗಡುಕರನ್ನು, ಹಿಂದೂ ವಿರೋಧಿಗಳನ್ನು ವಕ್ಫ್ ಬೋರ್ಡ್‌ನಲ್ಲಿ ಸೇರಿಸುತ್ತಿದ್ದಾನೆ. ಬಿಜೆಪಿಯವರೇ ಜಾಗೃತರಾಗಿ, ಅನಾಹುತ ಆಗಬಹುದು ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ತಿರಂಗಮಯವಾದ ಸುಪ್ರಸಿದ್ಧ ಮುಗಳಖೋಡ ಶ್ರೀಮಠ

ಬೆಂಗಳೂರಿನ ಜೈಲಿನಲ್ಲಿ ಆರೋಪಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದೆ. ಜೈಲಿನಲ್ಲಿ ವೀಡಿಯೋ ಮಾಡುವ ಮೂಲಕ ಮುಸ್ಲಿಂ ಗೂಂಡಾಗಳು ಅವ್ಯವಹಾರ ಮಾಡುತ್ತಿದ್ದಾರೆ. ಇದಕ್ಕೆ ಒಂದು ವಿಶೇಷ ಸಮಿತಿ ನಿಯೋಜನೆ ಮಾಡಿ ಎಂದು ಮುತಾಲಿಕ್ ಒತ್ತಾಯಿಸಿದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *