ʻಬಂಕರ್‌ಗಳಲ್ಲಿ ಅವಿತುಕೊಳ್ಳೋಣʼ – ಆಪರೇಷನ್ ಸಿಂಧೂರ ದಾಳಿಯ ಭೀಕರತೆ ನೆನಪಿಸಿಕೊಂಡ ಪಾಕ್‌ ಅಧ್ಯಕ್ಷ

1 Min Read

ಇಸ್ಲಾಮಾಬಾದ್:‌ ಪಾಕಿಸ್ತಾನದ (Pakistan) ಉಗ್ರರ ಅಡಗುದಾಣಗಳ ಮೇಲೆ ಭಾರತ ನಡೆಸಿದ ದಾಳಿಯ (Operation Sindoor) ಭೀಕರತೆಯ ಬಗ್ಗೆ ಪಾಕ್‌ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ (Asif Ali Zardari) ಸಾರ್ವಜನಿಕವಾಗಿ ಮಾತಾಡಿದ್ದಾರೆ. ಈ ವೇಳೆ ನನ್ನ ಮಿಲಿಟರಿ ಕಾರ್ಯದರ್ಶಿ ನನ್ನ ಬಳಿಗೆ ಬಂದು, ‘ಸರ್, ಯುದ್ಧ ಪ್ರಾರಂಭವಾಗಿದೆ’ ಎಂದು ಹೇಳಿದರು. ಅಲ್ಲದೇ “ಬಂಕರ್‌ಗಳಿಗೆ ಹೋಗೋಣ.” ಎಂದು ಸಲಹೆ ಕೊಟ್ಟಿದ್ದರು ಎಂದು ಈ ವೇಳೆ ನೆನಪಿಸಿಕೊಂಡಿದ್ದಾರೆ.

ಈ ಕಾರ್ಯಾಚರಣೆಯು ಎರಡೂ ದೇಶಗಳ ನಡುವೆ ಸಂಘರ್ಷಕ್ಕೆ ಕಾರಣವಾಯಿತು. ಪಾಕಿಸ್ತಾನವು ಗಡಿಯಾಚೆಗಿನ ಶೆಲ್ ದಾಳಿಯನ್ನು ಹೆಚ್ಚಿಸಿತ್ತು. ಇದಕ್ಕೆ ಭಾರತ ತಕ್ಕ ಉತ್ತರ ನೀಡಿತ್ತು. ಈ ಸಂಘರ್ಷ ಹೀಗೆ ಮುಂದುವರೆದರೆ ಪರಮಾಣು ಶಸ್ತ್ರಾಸ್ತ್ರಗಳ ದಾಳಿಯ ಕಳವಳಗಳನ್ನು ಹುಟ್ಟುಹಾಕಿತ್ತು. ಬಳಿಕ ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು ಸಂಘರ್ಷ ನಿಲ್ಲಿಸುವ ಪ್ರಸ್ತಾಪ ಮಾಡಿದ್ದರು. ಬಳಿಕ ಭಾರತ ಶಾಂತಿಗೆ ಒಪ್ಪಿಕೊಂಡ ಬಳಿಕ ಪರಿಸ್ಥಿತಿ ತಣ್ಣಗಾಗಿತ್ತು ಎಂದು ಅವರು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: 36 ಗಂಟೆಗಳಲ್ಲಿ 80 ಡ್ರೋನ್ ದಾಳಿ – ಭಾರತದ ದಾಳಿಯಲ್ಲಿ ನೂರ್‌ ಖಾನ್‌ ವಾಯುನೆಲೆ ಧ್ವಂಸ; ಸತ್ಯ ಒಪ್ಪಿಕೊಂಡ ಪಾಕ್‌

ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿಯವರು ಕದನ ವಿರಾಮವನ್ನು ದೃಢಪಡಿಸಿದರು. ಬಳಿಕ ಎರಡೂ ಕಡೆಯವರು ಭೂಮಿ, ಸಮುದ್ರ ಮತ್ತು ವಾಯುಪ್ರದೇಶದ ಎಲ್ಲಾ ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸಲು ನಿರ್ಧರಿಸಿದ್ದರು.

ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರ ಹತ್ಯೆಗೆ ಪ್ರತಿಕಾರವಾಗಿ ಭಾರತ ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆ ಕೈಗೊಂಡಿತ್ತು. ಮೇ 7 ರ ಮುಂಜಾನೆ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿನ 9 ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಲಾಗಿತ್ತು. ಭಯೋತ್ಪಾದಕ ಮೂಲಸೌಕರ್ಯವನ್ನು ನಾಶಮಾಡುವ, ಉಗ್ರರ ಮುಂದಿನ ದಾಳಿಗಳನ್ನು ತಡೆಯುವ ಉದ್ದೇಶದಿಂದ ಈ ದಾಳಿ ನಡೆದಿತ್ತು. ಇದನ್ನೂ ಓದಿ: ಪಾಕ್‌ ಪ್ರಧಾನಿ ನಿದ್ದೆಗೆಡಿಸಿದ ʻಆಪರೇಷನ್‌ ಸಿಂಧೂರʼ – ಶೆಹಬಾಜ್‌ಗೆ ಮಧ್ಯರಾತ್ರಿ ಕರೆ ಮಾಡಿದ್ಯಾರು?

Share This Article