ಡಿಕೆಶಿ ಸಿಎಂ ಆದಮೇಲೆ ಒಂದು ಡಜನ್ ಡಿಸಿಎಂ ಮಾಡಲಿ: ಶಾಸಕ ಬಸವರಾಜು ಶಿವಗಂಗಾ

Public TV
1 Min Read

ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಮುಖ್ಯಮಂತ್ರಿ ಆದ ನಂತರ ಒಂದು ಡಜನ್ ಡಿಸಿಎಂ (DCM) ಮಾಡಲಿ ಎಂದು ಡಿಕೆಶಿ ಆಪ್ತ ಹಾಗೂ ಚನ್ನಗಿರಿ ಶಾಸಕ ಬಸವರಾಜು ಶಿವಗಂಗಾ (Basavaraju Shivaganga) ಹೇಳಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಹೆಚ್ಚುವರಿ ಡಿಸಿಎಂ ಚರ್ಚೆಗೆ ವಿರೋಧ ವ್ಯಕ್ತಪಡಿಸಿದ್ದು, ಡಿಕೆಶಿ ಅವರನ್ನು ಸಿಎಂ ಮಾಡಬೇಕು ಎಂದು ಹೊಸ ಕಾರ್ಡ್ ಪ್ಲೇ ಮಾಡಿದ್ದಾರೆ. ಡಿಕೆ ಶಿವಕುಮಾರ್‌ರನ್ನ ಮುಖ್ಯಮಂತ್ರಿ ಮಾಡಿ. ನಂತರ ಒಂದು ಡಜನ್ ಡಿಸಿಎಂ ಮಾಡಲಿ. ಕೆಪಿಸಿಸಿ ಅಧ್ಯಕ್ಷರಾಗಿದ್ದವರನ್ನು ಮುಖ್ಯಮಂತ್ರಿ ಮಾಡೋದು ಪದ್ಧತಿ. ಶಿವಕುಮಾರ್ ಅವರನ್ನು ಸಿಎಂ ಮಾಡಲಿ. ಲೋಕಸಭಾ ಚುನಾವಣೆಯಲ್ಲಿ ಸಚಿವರ ಕ್ಷೇತ್ರದಲ್ಲಿ ಲೀಡ್ ನೀಡದ ಸಚಿವರನ್ನು ಕೈ ಬಿಡಬೇಕು. ನಮ್ಮದೇನು ಅಭ್ಯಂತರವಿಲ್ಲ ಎಂದರು. ಇದನ್ನೂ ಓದಿ: ಜನಾಂಗೀಯ ನಿಂದನೆ ಹೇಳಿಕೆ ನೀಡಿದ್ದ ಸ್ಯಾಮ್‌ ಪಿತ್ರೋಡಾ ಈಗ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ

ಡಿಕೆ ಶಿವಕುಮಾರ್ ಪಕ್ಷ ಸಂಘಟನೆ ಮಾಡಿ ಅಧಿಕಾರಕ್ಕೆ ತಂದಿದ್ದಾರೆ. ಒಂದು ಸಂಸದರಿದ್ದರು, ಈಗ ಒಂಬತ್ತು ಸಂಸದರಾಗಿದ್ದಾರೆ. ಕೆಲಸ ಮಾಡದ ಸಚಿವರ ಬದಲಾವಣೆ ಮಾಡಬೇಕು. ಲೋಕಸಭಾ ಚುನಾವಣೆಯಲ್ಲಿ ಲೀಡ್ ಕೊಡಿಸದ ಸಚಿವರ ಬದಲಾವಣೆ ಮಾಡಲಿ. ನಾನು ಆವತ್ತು ಹೇಳಿದ್ದೆ, ಇವತ್ತು ಹೇಳುತ್ತಿದ್ದೇನೆ. ಲೀಡ್ ಕೊಡಿಸದ ಸಚಿವರ ಬದಲಾವಣೆ ಮಾಡಿ ಹೊಸಬರಿಗೆ ಹಿರಿಯ ಶಾಸಕರಿಗೆ ಅವಕಾಶ ನೀಡಲಿ. ಕೆಲಸ ಮಾಡದ ಸಚಿವರ ಬದಲಾವಣೆ ಮಾಡಲಿ ಎಂದು ಹೇಳಿದರು. ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ರೆಡ್ ಅಲರ್ಟ್ – ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಣೆ

Share This Article