ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ರಾಜೀನಾಮೆ ಕೊಡುವ ಅವಶ್ಯಕತೆ ಇಲ್ಲ. ನಾವೆಲ್ಲ ಸಿದ್ದರಾಮಯ್ಯ ಜೊತೆ ಇದ್ದೇವೆ ಎಂದು ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ (Belur Gopalakrishna) ತಿಳಿಸಿದ್ದಾರೆ.
ಸಿಎಂ ಭೇಟಿ ಬಳಿಕ ಮಾತನಾಡಿದ ಅವರು, ಸಿಎಂ ಅವರು ಖುಷಿ ಖುಷಿಯಾಗಿ ಇದ್ದಾರೆ. ಅವರಿಗೆ ನಾವು ಧೈರ್ಯ ಕೊಟ್ಟಿದ್ದೇವೆ. ರಾಜ್ಯದ ಎಲ್ಲಾ ಎಂಎಲ್‌ಎಗಳು, ಎಂಪಿಗಳು ಸಿಎಂಗೆ ಧೈರ್ಯ ಕೊಟ್ಟಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ತನಿಖೆಯಾಗಬೇಕು – ಹರಿಯಾಣ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ಮೋದಿ ಆಗ್ರಹ
ವಿಜಯೇಂದ್ರ (B Y Vijayendra), ಅಶೋಕ್ (R Ashok) ಅವರಿಗೆ ಯಾವ ನೈತಿಕತೆ ಇದೆ ಸಿಎಂ ರಾಜೀನಾಮೆ ಕೇಳುವುದಕ್ಕೆ. ಯತ್ನಾಳ್ ಅವರೇ ವಿಜಯೇಂದ್ರ 2 ಸಾವಿರ ಕೋಟಿ ರೂ. ಭ್ರಷ್ಟಾಚಾರ ಮಾಡಿದ್ದಾನೆ. ಅವನನ್ನು ತೆಗೆದು ಹಾಕಬೇಕು ಎಂದು ಅವರ ಪಕ್ಷದ ಮುಖಂಡರೇ ಹೇಳಿದ್ದಾರೆ. ಇವರೆಲ್ಲ ನಮಗೆ ಪಾಠ ಹೇಳೋದು ಬೇಡ ಎಂದು ವಿಜಯೇಂದ್ರ, ಅಶೋಕ್ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಬಳ್ಳಾರಿ ಜೈಲಲ್ಲಿ ಗುರುವಾರ ಕೊಲೆ ಆರೋಪಿ ದರ್ಶನ್‌ಗೆ `ಐಟಿ’ ಡ್ರಿಲ್
ಇವತ್ತು ಕೋರ್ಟ್ ತನಿಖೆ ಮಾಡಿ ಎಂದು ಆದೇಶ ಮಾಡಿದೆ. ಕೋರ್ಟ್ ಆದೇಶದಂತೆ ತನಿಖೆ ಆಗಲಿ. ಮುಂದೆ ಏನಾಗುತ್ತೋ ನೋಡೋಣ. ರಾಜ್ಯದಲ್ಲಿ ಯಾರು ಏನು ಮಾಡಿದ್ದಾರೆ ಎಲ್ಲಾ ಗೊತ್ತಿದೆ. ರಾಜ್ಯಪಾಲರು (Governor) ಕೇಂದ್ರದ ನಾಯಕರ ಕೈಗೊಂಬೆಯಾಗಿ ಹೀಗೆಲ್ಲ ಆಟ ಆಡಿಸುತ್ತಾ ಇದ್ದಾರೆ. ರಾಜ್ಯಪಾಲರಿಗೆ ಕೇಂದ್ರದ ನಾಯಕರು ತಾಕೀತು ಮಾಡಿ ಸಿಎಂ ವಿರುದ್ಧ ಅನುಮತಿ ಕೊಡಿಸಿರೋದು. ಕೋರ್ಟ್‌ಗೆ ಬೆಲೆ ಕೊಡಬೇಕು. ಅದರಂತೆ ತನಿಖೆ ಆಗಲಿ. 136 ಜನರು ಸಿಎಂ ಜೊತೆ ಇದ್ದೇವೆ. ಇದರಲ್ಲಿ ಯಾವುದೇ ಸಂದೇಹವಿಲ್ಲ. ಹಿಂದೆಯೂ ನಾವು ಶಾಸಕಾಂಗ ಸಭೆ ಸೇರಿ ಸಿಎಂಗೆ ನಮ್ಮ ಬೆಂಬಲ ಕೊಟ್ಟಿದ್ದೇವೆ. ಈಗಲೂ ಹಾಗೇ ಮಾಡುತ್ತೇವೆ ಎಂದರು. ಇದನ್ನೂ ಓದಿ: 5ಜಿ ಯುಗದಲ್ಲೂ ಹಿಜ್ಬುಲ್ಲಾ ಉಗ್ರರು ಪೇಜರ್ ಬಳಸುತ್ತಿರುವುದು ಯಾಕೆ?
ಇಷ್ಟೆಲ್ಲ ಮಾತನಾಡುವ ಬಿಜೆಪಿ ಅವರು ಮುನಿರತ್ನ ಕೇಸ್ ಬಗ್ಗೆ ಒಬ್ಬರಾದರೂ ಬಾಯಿ ಬಿಟ್ರಾ? ರಾಜೀನಾಮೆ ಕೊಡಿ ಎಂದು ಕೇಳಿ ಅನ್ನೋ ಯೋಗ್ಯತೆ ಇದೆಯಾ ಇವರಿಗೆ. ಬಿಜೆಪಿಯವರಿಗೆ ಮಾನ ಮರ್ಯಾದೆ ಇದೆ. ಅಶೋಕ್, ವಿಜಯೇಂದ್ರ ರಾಜೀನಾಮೆ ಕೇಳಿದ್ದಾರಾ? ರಾಜೀನಾಮೆ ಕೇಳೋ ತಾಕತ್ತು ಅವರಿಗೆ ಇಲ್ಲ. ಏಡ್ಸ್ ಇಂಜೆಕ್ಷನ್ ಕೊಟ್ಟು ಜನರನ್ನ ಸಾಯಿಸು ಅಂತ ಹೇಳೋರನ್ನ ಸುಮ್ಮನೆ ಬಿಡೋದಾ? ಅಶೋಕ್‌ಗೂ ಇಂಜೆಕ್ಷನ್ ಕೊಡೋಕೆ ಹೋಗಿದ್ದರಂತೆ. ಪಿಎಸ್‌ಐ ಕೇಸ್ ಸರಿಯಾಗಿ ತನಿಖೆ ಮಾಡಿದರೆ ಇಷ್ಟು ಹೊತ್ತಿಗೆ ಜೈಲಿಗೆ ಹೋಗಬೇಕಿತ್ತು. ಅಪ್ಪನ ಸಹಿ ಫೋರ್ಜರಿ ಸಹಿ ಮಾಡಿ ದುಡ್ಡು ಮಾಡಿದವರು ಇವರು. ಇವರಿಂದ ಪಾಠ ಕಲಿಯುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದೆ. ನಾವೆಲ್ಲರು ಸಿದ್ದರಾಮಯ್ಯ ಪರ ಇರುತ್ತೇವೆ. ರಾಜೀನಾಮೆ ಕೊಡೋ ಪ್ರಶ್ನೆ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ತನಿಖೆ ಎದುರಿಸಲು ಸಿದ್ಧನಿದ್ದೇನೆ: ಕೋರ್ಟ್ ಆದೇಶಕ್ಕೆ ಸಿಎಂ ಪ್ರತಿಕ್ರಿಯೆ